ಮೆಲ್ಬೋರ್ನ್, ಮಾ, 18: ಬಾಂಗ್ಲಾದೇಶದ ಕ್ರಿಕೆಟ್ ಪ್ರೇಮಿಗಳು ಬಾಂಗ್ಲಾ ಭಾರತವನ್ನು ವಿಶ್ವಕಪ್ ಕ್ವಾಟರ್ ಫೈನಲ್ ನಲ್ಲಿ ಸೋಲಿಸುತ್ತದೆ ಎಂದು ಬಲವಾಗಿ ನಂಬಿಕೊಂಡಿದ್ದಾರೆ. ಮಾರ್ಚ್ 19 ರ ಪಂದ್ಯ ಬಾಂಗ್ಲಾ ಪ್ರೇಮಿಗಳ ಪ್ರಕಾರ ವಿಜಯದ ದಿನವಾಗಿರುತ್ತದೆ. ಅವರ ಈ ನಂಬಿಕೆಗೆ ಕಾರಣವಿದೆ.
ಭಾರತದ ವಿರುದ್ಧ ಬಾಂಗ್ಲಾ ಕಳೆದ ಎರಡು ಸಾರಿ ಮಹತ್ವದ ಪಂದ್ಯಗಳಲ್ಲಿ ವಿಜಯ ಸಾಧಿಸಿರುವುದು ಮಾರ್ಚ್ ತಿಂಗಳಲ್ಲಿಯೇ ಎನ್ನುವುದು ಮುಖ್ಯ. ಈ ಬಾರಿ ಸಹ ಪಂದ್ಯ ಮಾರ್ಚ್ ತಿಂಗಳಲ್ಲಿಯೇ ಎದುರಾಗಿದ್ದು ಬಾಂಗ್ಲಾ ಭಾರತಕ್ಕೆ ಸೋಲುಣಿಸುವುದೇ? ಎಂಬ ಪ್ರಶ್ನೆ ಎದುರಾಗಿದೆ.[ಭಾರತ vs ಬಾಂಗ್ಲಾದೇಶ ಟಾಪ್ 10 ಖಾಸ್ ಬಾಸ್]

ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ
2012ರ ಮಾರ್ಚ್ 17 ರಂದು ವೆಸ್ಟ್ ಇಂಡೀಸ್ ನ ಫೋರ್ಟ್ ಆಫ್ ಸ್ಫೇನ್ ನಲ್ಲಿ ಬಾಂಗ್ಲಾ, ಟೀಮ್ ಇಂಡಿಯಾಗೆ 5 ವಿಕೆಟ್ ಗಳ ಆಘಾತ ನೀಡಿತ್ತು. ಏಷ್ಯಾ ಕಪ್ ನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ 100 ನೇ ಶತಕ ಸಾಧನೆ ಮಾಡಿದ್ದರು. ಬಾಂಗ್ಲಾಗೆ 290 ರನ್ ಗುರಿ ನೀಡಲಾಗಿತ್ತು. ಆದರೆ 5 ವಿಕೆಟ್ ಗಳ ಅಂತರದಲ್ಲಿ ಬಾಂಗ್ಲಾ ಭಾರತಕ್ಕೆ ಸೋಲುಣಿಸಿತ್ತು.
2007ರ ವಿಶ್ವಕಪ್
2007ರ ಮಾರ್ಚ್ 17 ರಂದು ವಿಶ್ವಕಪ್ ನಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದ ಭಾರತ ತಂಡ ಘಟಾನುಘಟಿಗಳನ್ನು ಹೊಂದಿದ್ದರೂ ಬಾಂಗ್ಲಾದ ವಿರುದ್ಧ ಮಂಡಿಯೂರಿತ್ತು. ಈ ಸೋಲು ಭಾರತವನ್ನು 2007 ರ ವಿಶ್ವಕಪ್ ಅಭಿಯಾನದಿಂದ ಹೊರಗೆ ಬೀಳುವಂತೆ ಮಾಡಿತ್ತು. ಈ ಬಾರಿಯೂ ಮಾರ್ಚ್ ತಿಂಗಳಲ್ಲಿಯೇ ಮತ್ತೊಂದು ಪಂದ್ಯ ಎದುರಾಗಿದ್ದು ಫಲಿತಾಂಶವೇ ಉತ್ತರ ಹೇಳಬೇಕು.