For Quick Alerts
ALLOW NOTIFICATIONS  
For Daily Alerts
 

ಪಾಕ್ ವಿರುದ್ಧ ಸಚಿನ್ ಕಂಡ ಕನಸು ಈಡೇರಿಸಿದ ಕೊಹ್ಲಿ

By Mahesh

ಅಡಿಲೇಡ್, ಫೆ.15: ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಅದ್ಭುತ ಪ್ರದರ್ಶನ ನೀಡುವ ಆಸೆ ಟೀಂ ಇಂಡಿಯಾ ಆಟಗಾರರಲ್ಲಿ ಸಹಜವಾಗಿ ಬೆಳೆದಿರುತ್ತದೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೂ ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಆಡುವಾಗ ಕಂಡ ಕನಸು ನನಸಾಗಿರಲಿಲ್ಲ. ಅದರೆ, ಸಚಿನ್ ಹಾದಿಯಲ್ಲೇ ಸಾಗಿರುವ ಯುವ ಪ್ರತಿಭೆ ವಿರಾಟ್ ಕೊಹ್ಲಿ 2015ರ ಅಡಿಲೇಡ್ ಪಂದ್ಯದಲ್ಲಿ ಈಡೇರಿಸಿದ್ದಾರೆ.[ಚಿತ್ರಗಳಲ್ಲಿ: ಪಾಕ್ ಬಗ್ಗು ಬಡಿದ ಆ ಕ್ಷಣ]

ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಶತಕ ಗಳಿಸಿದ ಮೊಟ್ಟ ಮೊದಲ ಭಾರತೀಯ ಆಟಗಾರ ಎಂಬ ಕೀರ್ತಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಅಡಿಲೇಡ್ ನಲ್ಲಿ ಭಾನುವಾರ (ಫೆ.15) ನಡೆದಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಬದುಕಿನ 22ನೇ ಶತಕ ಸಿಡಿಸಿದರು. [ವಿಶ್ವಕಪ್ : ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ]

WC 2015: Virat Kohli becomes 1st Indian to score a ton against Pak in WC

ಇದಕ್ಕೂ ಮುನ್ನ ಕಳೆದ ಐದು ಬಾರಿ ಪಾಕ್ ವಿರುದ್ಧದ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್ 2003ರಲ್ಲಿ ದಕ್ಷಿಣ ಆಫ್ರಿಕಾದ ಸೆಂಚೂರಿಯನ್ ಪಾರ್ಕ್ ನಲ್ಲಿ ಬಾರಿಸಿದ್ದ 98ರನ್ ಅತಿ ಹೆಚ್ಚಿನ ವೈಯಕ್ತಿಕ ಮೊತ್ತವಾಗಿತ್ತು. ಆದರೆ, ಪಾಕಿಸ್ತಾನ ಪರ ಸಯೀದ್ ಅನ್ವರ್ 101(2003ರ ವಿಶ್ವಕಪ್) ರನ್ ಗಳಿಸಿದ್ದರು.

ಈ ಹಿಂದಿನ ಉತ್ತಮ ಸಾಧನೆ:
* 1992 ವಿಶ್ವಕಪ್ ನಲ್ಲಿ ಭಾರತದ ಪರ ಅಜಯ್ ಜಡೇಜ 82 ರನ್. []

* 1996ರಲ್ಲಿ ನವಜ್ಯೋತ್ ಸಿಧು (ಭಾರತ) 93 ರನ್. []

* 1999ರಲ್ಲಿ ರಾಹುಲ್ ದ್ರಾವಿಡ್ (ಭಾರತ) 89ರನ್. []

* 2003ರಲ್ಲಿ ಸಯೀದ್ ಅನ್ವರ್ (ಪಾಕಿಸ್ತಾನ) 101 ರನ್. []

* 2003ರಲ್ಲಿ ಸಚಿನ್ ತೆಂಡೂಲ್ಕರ್ (ಭಾರತ) 98 ರನ್. []

* 2011ರಲ್ಲಿ ಸಚಿನ್ ತೆಂಡೂಲ್ಕರ್ (ಭಾರತ) 85 ರನ್. []

* 2014ರಲ್ಲಿ ವಿರಾಟ್ ಕೊಹ್ಲಿ (ಭಾರತ)107 ರನ್. []
ಒನ್ ಒಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+