ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಚಿತ್ರಗಳಲ್ಲಿ: ಪಾಕ್ ಬಗ್ಗು ಬಡಿದ ಆ ಕ್ಷಣ... ರೋಮಾಂಚನ

By Mahesh

ಬೆಂಗಳೂರು, ಫೆ.15: ಸಿಡ್ನಿ, ಬೆಂಗಳೂರು, ಮ್ಯಾಂಚೆಸ್ಟರ್, ಸೆಂಚೂರಿಯನ್ ಹಾಗೂ ಮೊಹಾಲಿಯಲ್ಲಿ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿದ್ದ ಭಾರತ ಅಡಿಲೇಡ್ ನಲ್ಲಿ ಆರನೇ ಬಾರಿಗೆ ತನ್ನ ಬದ್ಧವೈರಿಯನ್ನು ಬಗ್ಗುಬಡಿದಿದೆ.

ಐಸಿಸಿ ವಿಶ್ವಕಪ್ 2015ರ ಬಿ ಗುಂಪಿನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಟೀಂ ಇಂಡಿಯಾ 76 ರನ್ ಗಳಿಂದ ಸೋಲಿಸಿದೆ. ಇದು ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧದ ಅತಿ ದೊಡ್ಡ ಅಂತರದ ಗೆಲುವು ಎನಿಸಿದೆ. [ವಿಶ್ವಕಪ್ : ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ]

ಮೊಟ್ಟ ಮೊದಲ ಬಾರಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಎದುರಿಸಿದ ಟೀಂ ಇಂಡಿಯಾ ತನ್ನ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. [ಪಾಕ್ ವಿರುದ್ಧ ಸಚಿನ್ ಕಂಡ ಕನಸು ಈಡೇರಿಸಿದ ಕೊಹ್ಲಿ]

ಎಂಎಸ್ ಧೋನಿ ಟಾಸ್ ಗೆದ್ದಿದ್ದು, ಧವನ್ ಮತ್ತೆ ಲಯಕ್ಕೆ ಮರಳಿದ್ದು, ವಿರಾಟ್ ಕೊಹ್ಲಿ ದಾಖಲೆ ಶತಕ, ರೈನಾ ಚಿನಕುರಳಿ ಆಟ, ಮಹಮ್ಮದ್ ಶಮಿಗೆ 4 ವಿಕೆಟ್, ಅಫ್ರಿದಿ ಕಟ್ಟಿಹಾಕಿದ್ದು, ಮಿಸ್ಬಾ ಮಿಸುಕಾಡದಂತೆ ಮಾಡಿದ್ದು, ಅಡಿಲೇಡ್ ಕ್ರೀಡಾಂಗಣ ಕೂಡಾ ಮುಸ್ಸಂಜೆಯಲ್ಲಿ ಕೇಸರಿ ಹಸಿರು ನಡುವೆ ಹಾಲಿನಂಥ ಮನಸ್ಸಿನ ಕ್ರಿಕೆಟಿಗರೊಳಗೊಂಡು ತ್ರಿವರ್ಣ ಧ್ವಜದಂತೆ ಕಂಗೊಳಿಸಿದ್ದು ಎಲ್ಲಾ ರಸನಿಮಿಷಗಳು ಭಾನುವಾರದ ಪಂದ್ಯದ ವಿಶೇಷಗಳಾಗಿತ್ತು.

ಅಡಿಲೇಡ್ ನಲ್ಲಿ ಕಂಡು ಬಂದ ಭಾರತದ ಅಭಿಮಾನಿ

ಅಡಿಲೇಡ್ ನಲ್ಲಿ ಕಂಡು ಬಂದ ಭಾರತದ ಅಭಿಮಾನಿ

ಅಡಿಲೇಡ್ ನಲ್ಲಿ ಕಂಡು ಬಂದ ಭಾರತದ ಅಭಿಮಾನಿ.. ಗೆಲುವಿನ ನಗೆ ಬೀರುತ್ತಿರುವ ಚಿತ್ರ.

ಮತ್ತೆ ಲಯಕ್ಕೆ ಮರಳಿದ ಶಿಖರ್ ಧವನ್

ಮತ್ತೆ ಲಯಕ್ಕೆ ಮರಳಿದ ಶಿಖರ್ ಧವನ್

ಮತ್ತೆ ಲಯಕ್ಕೆ ಮರಳಿದ ಶಿಖರ್ ಧವನ್ 7 ಬೌಂಡರಿ, 1 ಸಿಕ್ಸ್ ಇದ್ದ 73 ರನ್ ಚೆಚ್ಚಿ ಅನಗತ್ಯ ರನ್ ಕದಿಯುವ ಯತ್ನದಲ್ಲಿ ರನೌಟ್ ಆದರು.

ವೇಗಿ ಸೊಹೆಲ್ ಖಾನ್ ಸಂಭ್ರಮ

ವೇಗಿ ಸೊಹೆಲ್ ಖಾನ್ ಸಂಭ್ರಮ

ಟೀಂ ಇಂಡಿಯಾ ವಿರುದ್ಧ ಐದು ವಿಕೆಟ್ ಕಿತ್ತ ಸಂಭ್ರಮದಲ್ಲಿ ಸೊಹೇಲ್ ಖಾನ್ 10-0-55-5

22ನೇ ಶತಕ ಸಿಡಿಸಿದ ಸಿಡಿಲ ಮರಿ

22ನೇ ಶತಕ ಸಿಡಿಸಿದ ಸಿಡಿಲ ಮರಿ

ಏಕದಿನ ಕ್ರಿಕೆಟ್ ನಲ್ಲಿ 22ನೇ ಶತಕ ಸಿಡಿಸಿದ ಸಿಡಿಲ ಮರಿ ವಿರಾಟ್ ಕೊಹ್ಲಿ

ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಮೊದಲ ಶತಕ

ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಮೊದಲ ಶತಕ

ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಮೊದಲ ಶತಕ ಸಿಡಿಸಿದ ಆಟಗಾರ ಎನಿಸಿದ ವಿರಾಟ್ ಕೊಹ್ಲಿ

ಈ ಚಿತ್ರ ಏನೇನೋ ಕಥೆ ಹೇಳುತ್ತದೆ.

ಈ ಚಿತ್ರ ಏನೇನೋ ಕಥೆ ಹೇಳುತ್ತದೆ.

ಪಾಕ್ ವಿರುದ್ಧದ ಪಂದ್ಯದ ಮೂಲಕ ಜೊತೆಯಾಟ ಕಂಡುಕೊಂಡ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ರನ್ನು ಕುತೂಹಲದಿಂದ ನೋಡುತ್ತಿರುವ ಶಾಹೀದ್ ಅಫ್ರಿದಿ.

ಲಯ ಕಂಡುಕೊಂಡ ಧವನ್, ಕೊಹ್ಲಿ, ರೈನಾ

ಲಯ ಕಂಡುಕೊಂಡ ಧವನ್, ಕೊಹ್ಲಿ, ರೈನಾ

ಲಯ ಕಂಡುಕೊಂಡ ಧವನ್, ಕೊಹ್ಲಿ, ರೈನಾ ಭಾರತದ ಸ್ಕೋರ್ 300 ರ ಹತ್ತಿರ ಮುಟ್ಟುವಂತೆ ಮಾಡಿದರು.

ಪ್ರತಿ ವಿಕೆಟ್ ಬಿದ್ದಾಗಲೂ ಹೆಚ್ಚಿದ ಸಂಭ್ರಮ

ಪ್ರತಿ ವಿಕೆಟ್ ಬಿದ್ದಾಗಲೂ ಹೆಚ್ಚಿದ ಸಂಭ್ರಮ

ಪಾಕಿಸ್ತಾನದ ಪ್ರತಿ ವಿಕೆಟ್ ಬಿದ್ದಾಗಲೂ ಟೀಂ ಇಂಡಿಯಾ ಆಟಗಾರರಲ್ಲಿ ಹೆಚ್ಚಿದ ಸಂಭ್ರಮ

ಉತ್ತಮ ಆಟ ಪ್ರದರ್ಶಿಸಿದ ಶೆಹ್ಜಾದ್

ಉತ್ತಮ ಆಟ ಪ್ರದರ್ಶಿಸಿದ ಶೆಹ್ಜಾದ್

ಉತ್ತಮ ಆಟ ಪ್ರದರ್ಶಿಸಿದ ಶೆಹ್ಜಾದ್ ಅರ್ಧಶತಕ ದಾಖಲಿಸುವ ಮುನ್ನ 47ರನ್ನಿಗೆ ಔಟಾದರು.

ವಿರಾಟ್ ಕೊಹ್ಲಿ ಗೆಲುವಿನ ಹಸ್ತಾಕ್ಷರ

ಪಂದ್ಯ ಶ್ರೇಷ್ಠ ವಿರಾಟ್ ಕೊಹ್ಲಿ ಗೆಲುವಿನ ಹಸ್ತಾಕ್ಷರ

ಅಡಿಲೇಡ್ ನಲ್ಲಿ ಭಾರತದ ಅಭಿಮಾನಿಗಳು

ಅಡಿಲೇಡ್ ನಲ್ಲಿ ಭಾರತದ ಅಭಿಮಾನಿಗಳ ಸಂಭ್ರಮಾಚರಣೆ

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X