Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WC Qualifiers, Super six: ಶ್ರೀಲಂಕಾ vs ವೆಸ್ಟ್ ಇಂಡೀಸ್; ಟಾಸ್ ವರದಿ, ಆಡುವ ಬಳಗ, Live ಸ್ಕೋರ್

ವಿಶ್ವಕಪ್ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಹಂತದಲ್ಲಿ ಇಂದು ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ವೆಸ್ಟ್ ಇಂಡಿಸ್ ತಂಡ ಅರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಪಡೆದುಕೊಂಡಿದೆ.

ಸೂಪರ್ ಸಿಕ್ಸ್ ಹಂತದ ಕೊನೆಯ ಪಂದ್ಯ ಇದಾಗಿದ್ದು ಈ ಪಂದ್ಯದಲ್ಲಿ ಗೆದ್ದು ಅಭಿಯಾನವನ್ನು ಅಂತ್ಯಗೊಳಿಸುವ ಇರಾದೆಯಲ್ಲಿ ವೆಸ್ಟ್ ಇಂಡೀಸ್ ತಂಡವಿದ್ದರೆ ಶ್ರೀಲಂಕಾ ಮತ್ತೊಂದು ಗೆಲುವಿನೊಂದಿಗೆ ಅರ್ಹತಾ ಸುತ್ತಿನ ಫೈನಲ್‌ನಲ್ಲಿ ಕಾದಾಡಲು ಸಜ್ಜಾಗಿದೆ. ಶ್ರೀಲಂಕಾ ತಂಡ ಫೈನಲ್‌ಗೆ ಪ್ರವೇಶಿಸಿ ವಿಶ್ವಕಪ್‌ನ ಮುಖ್ಯಘಟ್ಟದಲ್ಲಿ ಭಾಗಿಯಾಗುವ ಅರ್ಹತೆ ಪಡೆದುಕೊಂಡಿದ್ದರೆ ವೆಸ್ಟ್ ಇಂಡಿಸ್ ಇದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶದಿಂದ ವಂಚಿತವಾಗಿದೆ.

WC Qualifiers, Super six, Sri Lanka vs West Indies, Toss report

Live ಸ್ಕೋರ್ ಹೀಗಿದೆ

1
57584

ಇನ್ನು ಈ ಪಂದ್ಯದಲ್ಲಿ ಶ್ರೀಲಂಕಾ ಎರಡು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದು ಹಸರಂಗ ಹಾಗೂ ಧನಂಜಯ ಡಿಸಿಲ್ವಾಗೆ ವಿಶ್ರಾಂತಿ ನೀಡಲಾಗಿದೆ. ಸಹನ್ ಅರಚ್ಚಿಗೆ ಹಾಗೂ ದುಶನ್ ಹೇಮಂತ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ಒಂದು ಬದಲಾವನೆ ಮಾಡಿಕೊಂಡಿದ್ದು ಕಿಮೋ ಪೌಲ್ ಹೊರಬಿದ್ದಿದ್ದು ಶಮರ್ ಬ್ರೂಕ್ಸ್‌ಗೆ ಆಡುವ ಬಳಗದಲ್ಲಿ ಅವಕಾಶ ದೊರೆತಿದೆ.

ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಸಹನ್ ಅರಚ್ಚಿಗೆ, ದಸುನ್ ಶನಕ (ನಾಯಕ), ದುಶನ್ ಹೇಮಂತ, ಮಹೇಶ್ ತೀಕ್ಷಣ, ದಿಲ್ಶನ್ ಮಧುಶಂಕ, ಮಥೀಶ ಪತಿರಣ
ಬೆಂಚ್: ಲಹಿರು ಕುಮಾರ, ಕಸುನ್ ರಜಿತ, ಚಾಮಿಕ ಕರುಣಾರತ್ನ, ದುಷ್ಮಂತ ಚಮೀರ, ವನಿಂದು ಹಸರಂಗ, ಧನಂಜಯ ಡಿ ಸಿಲ್ವ

ವೆಸ್ಟ್ ಇಂಡೀಸ್ ಆಡುವ ಬಳಗ: ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ಕೀಸಿ ಕಾರ್ಟಿ, ಶಾಯ್ ಹೋಪ್ (ನಾಯಕ & ವಿಕೆಟ್ ಕೀಪರ್), ನಿಕೋಲಸ್ ಪೂರನ್, ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ರೋಸ್ಟನ್ ಚೇಸ್, ಕೆವಿನ್ ಸಿಂಕ್ಲೇರ್, ರೊಮಾರಿಯೋ ಶೆಫರ್ಡ್, ಅಕೆಲ್ ಹೋಸೇನ್
ಬೆಂಚ್: ಕೀಮೋ ಪಾಲ್, ಜೇಸನ್ ಹೋಲ್ಡರ್, ಯಾನಿಕ್ ಕ್ಯಾರಿಯಾ, ಅಲ್ಜಾರಿ ಜೋಸೆಫ್, ರೋವ್ಮನ್ ಪೊವೆಲ್

Story first published: Friday, July 7, 2023, 12:51 [IST]
Other articles published on Jul 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+