For Quick Alerts
ALLOW NOTIFICATIONS  
For Daily Alerts
 

ನಮ್ಮ ತಂಡಕ್ಕೆ ಅಲ್ಲಾ ಬೆಂಬಲವಿತ್ತು ಎಂದ ಇಂಗ್ಲೆಂಡ್‌ ನಾಯಕ ಮಾರ್ಗನ್‌

ICC World Cup 2019 : ಅಚ್ಚರಿ ಮೂಡಿಸಿದ ಇಂಗ್ಲೆಂಡ್ ನಾಯಕ ಮಾರ್ಗನ್ ಹೇಳಿಕೆ..? | Eoin Morgan |Oneindia Kannada
We had Allah with us: Eoin Morgan

ಲಂಡನ್‌, ಜುಲೈ 15: ಹನ್ನೆರಡನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯು ಹಿಂದೆಂದೂ ಕಂಡರಿಯದ ರೀತಿಯ ಅದ್ಭುತ ಅಂತ್ಯ ಕಂಡಿತು. ಜಿದ್ದಾಜಿದ್ದಿನ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ತಂಡಗಳು ರನ್‌ಗಳಿಕೆಯಲ್ಲಿ ನಿಗದಿತ ಓವರ್‌ಗಳು ಮತ್ತು ಇದೇ ಮೊದಲ ಬಾರಿ ಬಳಕೆಗೆ ತಂದ ಸೂಪರ್‌ ಓವರ್‌ನಲ್ಲೂ ಸಮಬಲ ಸಾಧಿಸಿದ್ದವು. ಅಂತಿಮವಾಗಿ ಅತಿ ಹೆಚ್ಚು ಬೌಂಡರಿಗಳನ್ನು ಗಳಿಸಿದ್ದ ತಂಡದ ಎಂಬ ಮಾತ್ರಕ್ಕೆ ವಿಶ್ವಕಪ್‌ ಕಿರೀಟ ಆತೀಥೇಯ ಇಂಗ್ಲೆಂಡ್‌ ಮುಡಿಗೇರಿತ್ತು.

ಇನ್ನು ಹಾವುಏಣಿಯಂತೆ ಸಾಗಿದ ಪಂದ್ಯದಲ್ಲಿ ಅತ್ಯಂತ ನಾಟಕೀಯ ರೀತಿಯಲ್ಲಿ ಟ್ರೋಫಿ ಎತ್ತಿ ಹಿಡಿದ ಬಳಿಕ ಮಾತನ ನಾಡಿದ ಇಂಗ್ಲೆಂಡ್‌ ತಂಡದ ನಾಯಕ ಐಯಾನ್‌ ಮಾರ್ಗನ್‌, ತಮ್ಮ ತಂಡದ ಗೆಲುವಿಗೆ "ಅಲ್ಲಾ ಬೆಂಬಲವೂ ಇತ್ತು" ಎಂದು ಹೇಳಿದ್ದಾರೆ.

"ಟ್ರೋಫಿ ನಮ್ಮ ಬಳಿ ಇರಬಹುದು. ಆದರೆ, ನ್ಯೂಜಿಲೆಂಡ್‌ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ನಮಗಿಂತಲೂ ಉತ್ತಮವಾಗಿ ಆಡಿ ಫೈನಲ್‌ ತಲುಪಿತ್ತು. ಆದರೆ ಅದೃಷ್ಟ ಇಂದು ನಮ್ಮ ಬಳಿ ಇದೆ," ಎಂದು ಮಾತುಗಳನ್ನು ಆರಂಭಿಸಿದ ಮಾರ್ಗನ್‌, "ನ್ಯೂಜಿಲೆಂಡ್‌ ಲೀಗ್‌ ಹಂತದಲ್ಲಿ ಅದ್ಭುತವಾಗಿ ಆಡಿದೆ. ಅದರಲ್ಲೂ ಸೆಮಿಫೈನಲ್ಸ್‌ನಲ್ಲಿ ಅತ್ಯಂತ ಬಲಿಷ್ಠ ತಂಡವಾಗಿದ್ದು ಭಾರತ ವಿರುದ್ಧ ದಿಟ್ಟ ಪ್ರದರ್ಶನ ನೀಡಿತ್ತು," ಎಂದರು.

ಇನ್ನು ಫೈನಲ್‌ ಪಂದ್ಯದಲ್ಲಿನ ಅದೃಷ್ಟದ ಕುರಿತಾಗಿ ಮಾತನಾಡಿದ ಕ್ಯಾಪ್ಟನ್‌ ಮಾರ್ಗನ್‌, "ನಮಗೆ ಅಲ್ಲಾ ಬೆಂಬಲವಿತ್ತು. ನಾನು ಆದಿಲ್‌ ರಶೀದ್‌ ಬಳಿ ಮಾತನಾಡುವಾಗ ರಶೀದ್‌ ನಮ್ಮ ಪಾಲಿಗೆ ಅಲ್ಲಾ ಖಂಡಿತಾ ಇದ್ದಾನೆ ಎಣದಿದ್ದರು. ನಾನು ಖಂಡಿತಾ ಅದೃಷ್ಟ ನಮ್ಮ ಬಳಿ ಇದೆ ಎಂದಿದ್ದೆ," ಎಂದು ನಗುತ್ತಲೇ ಮಾರ್ಗನ್‌ ತಮ್ಮ ಗೆಲುವಿನ ಹಿಂದಿರುವ ಬಲವನ್ನು ವಿವರಿಸಿದರು.

ಸೂಪರ್‌ ಓವರ್‌ನಲ್ಲಿ ವಿಶ್ವಕಪ್‌ ಗೆದ್ದು ಇತಿಹಾಸ ಬರೆದ ಇಂಗ್ಲೆಂಡ್‌

ಭಾನುವಾರ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಟ್ರೋಫಿ ಗೆದ್ದ ಇಂಗ್ಲೆಂಡ್‌ ತಂಡ 44 ವರ್ಷಗಳ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಮೊದಲ ಬಾರಿ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿತು. ನ್ಯೂಜಿಲೆಂಡ್‌ ತಂಡ ಸತತ ಎರಡನೇ ಬಾರಿ ರನ್ನರ್ಸ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತು.

Story first published: Monday, July 15, 2019, 15:01 [IST]
Other articles published on Jul 15, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+