Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌: ಟೀಮ್‌ ಇಂಡಿಯಾ ಕುರಿತು ಕೋಚ್‌ ರವಿ ಶಾಸ್ತ್ರಿ ಅಭಿಪ್ರಾಯವಿದು

We have got all bases covered for World Cup: Shastri

ಹೊಸದಿಲ್ಲಿ, ಮೇ 14: ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವ ಕಪ್‌ ಟೂರ್ನಿಗೆ ಭಾರತ ತಂಡ ಎಲ್ಲಾ ಮೂಲೆಗಳಿಂದಲೂ ಸಂಪೂರ್ಣ ಅಜ್ಜಾಗಿದೆ ಎಂದು ಕೋಚ್‌ ರವಿಶಾಸ್ತ್ರಿ ಹೇಳಿದ್ದಾರೆ.

ಭಾರತ ತಂಡ ಎಲ್ಲ ರೀತಿಯ ಸವಾಲಿಗಳಿಗೂ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಯಾವುದೇ ಸಂದರ್ಭದಲ್ಲಿ ದಿಟ್ಟ ಆಟವಾಡುವ ಆಟಗಾರರನ್ನು ತಂಡ ಹೊಂದಿದೆ ಎಂದು ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಶಾಸ್ತ್ರಿ ಹೇಳಿಕೊಂಡಿದ್ದಾರೆ.

"ವಿಶ್ವಕಪ್‌ಗೆ ಎಲ್ಲಾ ಮೂಲೆಗಳಿಂದಲೂ ನಮ್ಮ ತಂಡ ಸಜ್ಜಾಗಿದೆ. ವಿಶ್ವಕಪ್‌ಗೆ ಆಯ್ಕೆಯಾಗಿರುವ 15 ಆಟಗಾರರು ಯಾವುದೇ ಅಡೆ ತಡೆಗಳಿಲ್ಲದೆ ವಿಮಾನ ಹತ್ತಿದರೆ ಸಾಕು. ತಂಡದ ಆಟಗಾರರು ಯಾವುದೇ ಸಂದರ್ಭದಲ್ಲಿ ಯಾವುದೇ ಸ್ಥಿತಿಯಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದಾರೆ,'' ಎಂದು ಶಾಸ್ತ್ರಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದೇ ವೇಳೆ ತಂಡದಲ್ಲಿ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಕುರಿತಾಗಿಯೂ ಮಾತನಾಡಿರುವ ಶಾಸ್ತ್ರಿ, ಇದಕ್ಕಾಗಿ ಹೆಚ್ಚು ಆಯ್ಕೆಗಳು ಲಭ್ಯವಿದೆ ಎಂದಿದ್ದಾರೆ. ಅಂದಹಾಗೆ ನಂ.4 ಸ್ಥಾನಕ್ಕೆ ವಿಜಯ್‌ ಶಂಕರ್‌ ಸೂಕ್ತ ಆಯ್ಕೆ ಎಂದು ಬಿಸಿಸಿಐ ಈಗಾಗಲೇ ಹೇಳಿದೆ. ವಿಜಯ್‌ ಶಂಕರ್‌ "ತ್ರೀ ಡೈಮೆನ್ಷನ್‌" ಆಯ್ಕೆ ನೀಡಬಲ್ಲ ಆಟಗಾರ ಎಂದು ಈಗಾಗಲೇ ಆಯ್ಕೆ ಸಮಿತಿ ಬೆನ್ನುತ್ತಟ್ಟಿಯಾಗಿದೆ. ಆದರೆ, ಇತ್ತೀಚೆಗೆ ಅಂತ್ಯಗೊಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ವಿಜಯ್‌ ಶಂಕರ್‌ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಸನ್‌ರೈಸರ್ಸ್‌ ಹೈದರಾಬಾದ್‌ ಪರ ಅವರು ಆಡಿದ 15 ಪಂದ್ಯಗಳಿಂದ 244 ರನ್‌ಗಳನ್ನು ಮಾತ್ರವೇ ಗಳಿಸಿದ್ದಾರೆ.

"ನಮ್ಮ ತಂಡ ಸಾಕಷ್ಟು ಹೊಂದಾಣಿಕೆ ತಂದುಕೊಳ್ಳಬಲ್ಲ ಸಾಮರ್ಥ್ಯ ಹೊಂದಿದೆ. ನಾಲ್ಕನೇ ಕ್ರಮಾಂಕದಲ್ಲಿ ಆಡಬಲ್ಲಿ ಸಾಕಷ್ಟು ಆಟಗಾರರು ತಂಡದಲ್ಲಿದ್ದಾರೆ. ಹೀಗಾಗಿ ಈ ಕುರಿತು ನಾನೇನು ಹೆಚ್ಚು ತಲೆಕೆಡಿಸಿಕೊಂಡಿಲ್ಲ,'' ಎಂದು ಶಾಸ್ತ್ರಿ ವಿವರಿಸಿದ್ದಾರೆ.

ಇದೇ ವೇಳೆ ಧೋನಿ ಮತ್ತು ವಿರಾಟ್‌ ಕೊಹ್ಲಿ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿರುವ ಕೋಚ್‌ ಶಾಸ್ತ್ರಿ, "ಇಬ್ಬರೂ ಆಟಗಾರರು ಪರಸ್ಪರ ಇನ್ನಿಲ್ಲದ ಗೌರವ ಹೊಂದಿದ್ದಾರೆ. ಇದರ ಬಗ್ಗೆ ನನಗೆ ಕಿಂಚಿತ್ತೂ ಸಂಶಯವಿಲ್ಲ. ಭಾರತ ತಂಡ ಕೋಚ್‌ ಆಗಿದ್ದಾಗ ಮೊದಲ ಅವಧಿಯಲ್ಲಿ ಎಂಎಸ್‌ ನಾಯಕನಾಗಿದ್ದರು, ನಂತರ ವಿರಾಟ್‌. ಇಬ್ಬರೂ ಆಟಗಾರರು ತಂಡದ ಸಲುವಾಗಿ ಹೊಂದಿರುವ ಅಮೋಘ ರೀತಿಯ ಬದ್ಧತೆಯನ್ನು ಕಂಡಿದ್ದೇನೆ,'' ಎಂದು ಹೇಳಿದ್ದಾರೆ.

ನಿಂದನೆ ಮತ್ತು ಮಾನಸಿಕ ಕಿರುಕುಳಕ್ಕೆ RCB ಫ್ಯಾನ್‌ ಗರ್ಲ್‌ ಉತ್ತರ!
ಇದೇ ವೇಳೆ ಧೋನಿ ಅವರ ಸಾಧನೆ ಕುರಿತಾಗಿ ಪ್ರತಿಯೊಬ್ಬರಿಗೂ ಅರಿವಿದ್ದು, ಭಾರತ ತಂಡದ ಮಾಜಿ ನಾಯಕನಿಂದ ಕಲಿಯುವುದು ಸಾಕಷ್ಟಿದೆ ಎಂದು ಹೇಳಿರಉವ ಶಾಸ್ತ್ರಿ, "ಧೋನಿ ಏನೆಲ್ಲಾ ಸಾಧನೆ ಮಾಡಿದ್ದಾರೆ ಎಂಬುದನ್ನು ಎಲ್ಲರೂ ತಿಳಿದಿದ್ದಾರೆ. ಬ್ಯಾಟಿಂಗ್‌ ವೇಳೆ ಮತ್ತು ವಿಕೆಟ್‌ಕೀಪಿಂಗ್‌ ವೇಳೆ ಅವರ ಸಮ್ಯಮ ಅದ್ಭುತವಾಗಿರುತ್ತದೆ. ಅವರನ್ನು ನೋಡಿ ಕಲಿಯುವುದು ಸಾಕಷ್ಟಿರುತ್ತದೆ,'' ಎಂದು ವಿವರಿಸಿದ್ದಾರೆ.

ವಿಶ್ವಕಪ್‌ನಲ್ಲಿ ಭಾರತ ತಂಡ ಜೂನ್‌ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.

ವಿಶ್ವಕಪ್‌ಗೆ ಭಾರತ ಪ್ರಕಟಿಸಿರುವ ತಂಡ ಇಂತಿದೆ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌, ವಿಜಯ್‌ ಶಂಕರ್‌, ಕೇದಾರ್‌ ಜಾಧವ್‌, ಎಂ.ಎಸ್‌ ಧೋನಿ (ವಿಕೆಟ್‌ಕೀಪರ್‌), ದಿನೇಶ್‌ ಕಾರ್ತಿಕ್‌, ಯುಜ್ವೇಂದ್ರ ಚಹಲ್‌, ಕುಲ್ದೀಪ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ರವೀಂದ್ರ ಜಡೇಜಾ, ಹಾರ್ದಿಕ್‌ ಪಾಂಡ್ಯ.

Story first published: Tuesday, May 14, 2019, 16:28 [IST]
Other articles published on May 14, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+