ನಾವು ವಿಶ್ವ ಶ್ರೇಷ್ಟ ಟಾಪ್ 3 ಬ್ಯಾಟರ್ ಅನ್ನು ಹೊಂದಿದ್ದೇವೆ: ರಾಹುಲ್ ದ್ರಾವಿಡ್

ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಗುರುವಾರದಿಂದ ಆರಂಭಗೊಳ್ಳಲಿರುವ ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ಕುರಿತಾಗಿ ಕುತೂಹಲಕಾರಿ ಹೇಳಿಕೆ ನೀಡಿದ್ದು, ಹೈ ಸ್ಕೋರ್ ಪಂದ್ಯವಾದಲ್ಲಿ ಟೀಂ ಇಂಡಿಯಾ ಆಟಗಾರರು ಉತ್ತಮ ಸ್ಟ್ರೈಕ್‌ರೇಟ್ ನಿರ್ಹಹಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಅಗ್ರಕ್ರಮಾಂಕದ ಬ್ಯಾಟರ್ ಕುರಿತು ಹೊಗಳಿಕೆಯ ಮಾತನಾಡಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಗುರುವಾರದಿಂದ (ಜೂ. 08) ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತದ ತಯಾರಿ ಕುರಿತು ಮಾತನಾಡುವಾಗ ದ್ರಾವಿಡ್ ಈ ವಿಚಾರವನ್ನ ತಿಳಿಸಿದ್ದಾರೆ.
ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಈಗಾಗಲೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿರಂತಹ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಿದೆ. ಐಪಿಎಲ್ 2022ರ ಸೀಸನ್‌ನಲ್ಲಿ ಕೊಹ್ಲಿ ಹಾಗೂ ರೋಹಿತ್ ಕಳಪೆ ಪ್ರದರ್ಶನ ನೀಡಿದ ಬಳಿಕ ಐದು ಪಂದ್ಯಗಳ ಚುಟುಕು ಸರಣಿಯಿಂದ ಹೊರಗಿಡಲಾಗಿದೆ.

ಐಪಿಎಲ್‌ನಲ್ಲಿ ರನ್ ಗಳಿಸಲು ಪರದಾಡಿದ ರೋಹಿತ್ ಮತ್ತು ಕೊಹ್ಲಿ
ರೋಹಿತ್ ಶರ್ಮಾ ಐಪಿಎಲ್ 2022ರಲ್ಲಿ ತಂಡವನ್ನ ಪ್ಲೇ ಆಫ್‌ಗೆ ತಲುಪಿಸುವಲ್ಲಿ ವಿಫಲರಾಗಿದ್ದರ ಜೊತೆಗೆ ವೈಯಕ್ತಿಕವಾಗಿಯು ರನ್‌ಗಳಿಸಲು ಪರದಾಡಿದರು. ರೋಹಿತ್ ಇಡೀ ಸೀಸನ್‌ನಲ್ಲಿ ಕೇವಲ ಒಂದು ಅರ್ಧಶತಕ ಸಹಿತ 268 ರನ್ ಕಲೆಹಾಕಿದರು. ಇವರ ಸ್ಟ್ರೈಕ್‌ರೇಟ್ 120.17ರಷ್ಟಿದೆ.
ಇನ್ನು ವಿರಾಟ್ ಕೊಹ್ಲಿ ಕೂಡ ಕಳಪೆ ಫಾರ್ಮ್‌ನಿಂದ ಹೊರತಾಗಿಲ್ಲ. ಗುಜರಾತ್ ಟೈಟನ್ಸ್ ವಿರುದ್ಧ 73ರನ್‌ಗಳ ಹೊರತಾಗಿಯೂ 115.99ರ ಸ್ಟ್ರೈಕ್‌ರೇಟ್‌ನಲ್ಲಿ ವಿರಾಟ್ ಗಳಿಸಿದ್ದು ಕೇವಲ 341 ರನ್.

ಟೀಂ ಇಂಡಿಯಾ ಆಟಗಾರರಿಗೆ ರಾಹುಲ್ ದ್ರಾವಿಡ್ ಅಮೂಲ್ಯ ಸಲಹೆ
ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಆಟಗಾರರಿಗೆ ಉತ್ತಮ ಸಲಹೆ ನೀಡಿದ್ದು, ಚುಟುಕು ಫಾರ್ಮೆಟ್‌ನಲ್ಲಿ ಯಶಸ್ಸು ಸಾಧಿಸಲು ಉತ್ತಮ ಸ್ಟ್ರೈಕ್‌ರೇಟ್ ನಿಭಾಯಿಸಬೇಕು ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ತಂಡವು ಈಗಾಗಲೇ ಬಲಿಷ್ಠ ಸ್ಕ್ವಾಡ್ ಅನ್ನು ಘೋಷಿಸಿದ್ದು, ವಿಶ್ವದ ನಂಬರ್ ಒನ್ ಟೀಂ ಭಾರತಕ್ಕೆ ಕಠಿಣ ಪೈಪೋಟಿ ನೀಡುವ ಸಾಧ್ಯತೆ ಹೆಚ್ಚಿದೆ.
"ಇದು ಹೆಚ್ಚು ಸ್ಕೋರಿಂಗ್ ಆಟವಾಗಿದ್ದರೆ, ನಿಸ್ಸಂಶಯವಾಗಿ ಆಟಗಾರರು ಸ್ಟ್ರೈಕ್ ರೇಟ್ ಅನ್ನು ಕಾಪಾಡಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ವಿಕೆಟ್ ಹೆಚ್ಚು ಸವಾಲಿನದ್ದಾಗಿದ್ದರೆ, ಅದಕ್ಕೂ ಅವರು ಪ್ರತಿಕ್ರಿಯಿಸಬೇಕಾಗುತ್ತದೆ "ಎಂದು ದ್ರಾವಿಡ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಭಾರತದ ಟಾಪ್ 3 ಬ್ಯಾಟರ್ ಕುರಿತು ರಾಹುಲ್ ದ್ರಾವಿಡ್ ವಿಶ್ವಾಸ
ಟೀಂ ಇಂಡಿಯಾದ ಟಾಪ್ 3 ಬ್ಯಾಟ್ಸ್‌ಮನ್‌ಗಳ ಮೇಲೆ ಕೋಚ್ ದ್ರಾವಿಡ್ ಹೆಚ್ಚು ವಿಶ್ವಾಸ ಹೊಂದಿದ್ದಾರೆ. ವಿಶ್ವದ ಶ್ರೇಷ್ಟ ಲಿಮಿಟೆಡ್ ಓವರ್ ಕ್ರಿಕೆಟ್ ಬ್ಯಾಟರ್‌ಗಳು ಟೀಂ ಇಂಡಿಯಾದ ಅಗ್ರ ಕ್ರಮಾಂಕದಲ್ಲಿ ಆಡುತ್ತಿರುವುದು ಟಿ20 ವಿಶ್ವಕಪ್ ದೃಷ್ಟಿಯಿಂದ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.
"ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಅಗ್ರ ಮೂರು ಸ್ಥಾನದಲ್ಲಿರುವ ಆಟಗಾರರು ತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ನನಗೆ ವಿಶ್ವಾಸವಿದೆ. ನಮ್ಮ ಅಗ್ರ ಮೂರು ಗುಣಮಟ್ಟ(ಆಟಗಾರರು) ನಮಗೆ ತಿಳಿದಿದ್ದು, ಅವರು ಉನ್ನತ ದರ್ಜೆಯವರು. ಈ ಸರಣಿಯಲ್ಲಿ ಸ್ವಲ್ಪ ವಿಭಿನ್ನವಾದ ಅಗ್ರ ಮೂರು ಆಟಗಾರರನ್ನ ಕಾಣಬಹುದು ಆದರೆ ನಾವು (ಸಾಮಾನ್ಯವಾಗಿ) ಉತ್ತಮ ಧನಾತ್ಮಕ ಆರಂಭವನ್ನು ಪಡೆಯಲಿದ್ದೇವೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಆಡುತ್ತೇವೆ, " ಎಂದು ಅವರು ದ್ರಾವಿಡ್ ಅಭಿಪ್ರಾಯ ಪಟ್ಟಿದ್ದಾರೆ.
ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಸಹಜವಾಗಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳಾಗಿದ್ದಾರೆ. ಆದ್ರೆ ರೋಹಿತ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕೆ.ಎಲ್ ರಾಹುಲ್ ಜೊತೆಗೆ ರುತುರಾಜ್ ಗಾಯಕ್ವಾಡ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ. ಇನ್ನು ಶ್ರೇಯಸ್ ಅಯ್ಯರ್ ಮೂರನೇ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20ಯಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications