ಟೆಸ್ಟ್ ತಂಡದಿಂದ ಕುಲದೀಪ್ ಕೈಬಿಟ್ಟಿದ್ದಕ್ಕೆ ಪ್ರತಿಕ್ರಿಯಿಸಿದ ದೀಪ್‌ದಾಸ್

ನವದೆಹಲಿ: ಕಳೆದ ಕೆಲವು ವರ್ಷಗಳಿಂದ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರ ಅದೃಷ್ಟ ಚೆನ್ನಾಗಿರುವಂತೆ ಕಾಣುತ್ತಿಲ್ಲ. ಒಂದು ಕಾಲದಲ್ಲಿ ಯಾದವ್‌ಗೆ ತಂಡದಲ್ಲಿ ಒಂದು ಸ್ಥಾನ ಖಾತರಿಯಾಗಿ ಇದ್ದೇ ಇರುತ್ತಿತ್ತು. ಆದರೆ ಈಚೀಚೆಗೆ ಯಾದವ್ ಯಾಕೋ ಮೂಲೆಗುಂಪಾಗುತ್ತಿದ್ದಾರೆ.
ಇತ್ತೀಚೆಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ)ಯು ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಿತ್ತು. ಈ ತಂಡದಲ್ಲಿ ಯಾದವ್ ಇರಲಿಲ್ಲ. ಇದಕ್ಕೆ ಭಾರತದ ಮಾಜಿ ಆಟಗಾರ ದೀಪ್ ದಾಸ್‌ಗುಪ್ತಾ ಪ್ರತಿಕ್ರಿಯಿಸಿದ್ದಾರೆ.
'ಕುಲದೀಪ್ ಯಾದವ್ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಆಯ್ಕೆಯಾಗದಿದ್ದಿದ್ದು ನೋಡಿ ನನಗೆ ಅಚ್ಚರಿಯಾಯ್ತು. ಯಾಕೆಂದರೆ ಕೆಲ ವರ್ಷಗಳ ಹಿಂದೆ ಆತ ನಂ.1 ಸ್ಪಿನ್ನರ್ ಆಗಿದ್ದ. ಒಂದು ವರ್ಷದೊಳಗೆ ಆತನೀಗ ಕಾಂಟ್ರ್ಯಾಕ್ಟ್ ಲಿಸ್ಟ್‌ನಲ್ಲೇ ಇಲ್ಲ. ಆದರೆ ನನಗನ್ನಿಸುತ್ತಿದೆ, ಆತ ಈಗಲೂ ತುಂಬಾ ಸ್ಪೆಷಲ್. ಆತನನ್ನು ನಾವು ಬೆಂಬಲಿಸಬೇಕು,' ಎಂದು ದೀಪ್ ದಾಸ್‌ಗುಪ್ತಾ ಹೇಳಿದ್ದಾರೆ.
ಇಂಗ್ಲೆಂಡ್‌ಗೆ ಆಯ್ಕೆಯಾಗಿರುವ ಭಾರತ ಟೆಸ್ಟ್ ತಂಡ
ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ , ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ಉಮೇಶ್ ಯಾದವ್, ಕೆ.ಎಲ್ ರಾಹುಲ್(ಫಿಟ್‌ನೆಸ್ ಪರೀಕ್ಷೆಗೆ ಒಳಪಡಬೇಕಿದೆ) ಮತ್ತು ವೃದ್ಧಿಮಾನ್ ಸಾಹಾ (ಫಿಟ್‌ನೆಸ್ ಪರೀಕ್ಷೆಗೆ ಒಳಪಡಬೇಕಿದೆ)
ಮೀಸಲು ಆಟಗಾರರು: ಅಭಿಮನ್ಯು ಈಶ್ವರನ್, ಪ್ರಸಿದ್ಧ್ ಕೃಷ್ಣ, ಆವೇಶ್ ಖಾನ್, ಅರ್ಜಾನ್ ನಾಗ್ವಾಸ್ವಲ್ಲಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications