ಎಂಗೇಜ್ಮೆಂಟ್ ಫೋಟೋ ಹಂಚಿಕೊಂಡ ಸ್ಪಿನ್ನರ್ ಯುಜುವೇಂದ್ರ ಚಾಹಲ್

ನವದೆಹಲಿ, ಆಗಸ್ಟ್ 8: ಭಾರತದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಶನಿವಾರ (ಆಗಸ್ಟ್ 8) ತನ್ನ ಸಂಗಾತಿಯನ್ನು ಪರಿಚಯಿಸಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿರಿಸಲು ಸಿದ್ಧವಾಗಿರುವ ಚಾಹಲ್, ಸಾಮಾಜಿಕ ಜಾಲತಾಣದಲ್ಲಿ ತನ್ನ ಜೊತೆಗಾತಿಯ ಚಿತ್ರ ಶೇರ್ ಮಾಡಿದ್ದಾರೆ.
ಅಧಿಕೃತ ಟ್ವಿಟರ್ ಖಾತೆಯಲ್ಲಿ ಭಾವಿ ಪತ್ನಿ ಧನಶ್ರೀ ವರ್ಮಾ ಅವರೊಂದಿಗಿನ ಫೋಟೋ ಶೇರ್ ಮಾಡಿರುವ ಚಾಹಲ್, 'ನಾವು ನಮ್ಮ ಕುಟುಂಬಗಳೊಂದಿಗೆ "ಹೌದು" ಎಂದು ಹೇಳಿದ್ದೇವೆ (ನಮ್ಮ ಕುಟುಂಬದವರ ಜೊತೆಗೆ ನಾವು ಮದುವೆಯಾಗಲು ಒಪ್ಪಿಕೊಂಡಿದ್ದೇವೆ),' ಎಂದು ಬರೆದಿದ್ದಾರೆ. ಜೊತೆಗೆ ಇದೇ ಚಿತ್ರದಲ್ಲಿ #rokaceremony ಎಂದು ಬರೆಯಲಾಗಿದೆ.
ಯುಜುವೇಂದ್ರ ಚಾಹಲ್ ವರಿಸಲಿರುವ ಧನಶ್ರೀ ವರ್ಮಾ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ. ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ವರ್ಮಾ ತನ್ನನ್ನು 'ಡಾಕ್ಟರ್, ಕೊರಿಯೋಗ್ರಾಫರ್, ಯೂಟ್ಯೂಬರ್ ಮತ್ತು ಧನಶ್ರೀ ಕಂಪನಿಯ ಸ್ಥಾಪಕಿ' ಎಂದು ಹೇಳಿಕೊಂಡಿದ್ದಾರೆ.
ಚಾಹಲ್ ಶೇರ್ ಮಾಡಿರುವ ಈ ನಿಶ್ಚಿತಾರ್ಥದ (ರೋಕ ಸಮಾರಂಭ) ಫೋಟೋಗೆ ಅನೇಕ ಕ್ರಿಕೆಟಿಗರು, ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಭಾರತ ತಂಡದ ಪರ ಚಾಹಲ್ 52 ಏಕದಿನ ಪಂದ್ಯಗಳಲ್ಲಿ 91 ವಿಕೆಟ್, 42 ಟಿ20ಐ ಪಂದ್ಯಗಳಲ್ಲಿ 55 ವಿಕೆಟ್ ದಾಖಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications