ಯುಜವೇಂದ್ರ ಚಹಾಲ್ ಪ್ರದರ್ಶನಕ್ಕೆ 'ಭೇಷ್' ಎಂದ ಗೌತಮ್ ಗಂಭೀರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸ್ಪಿನ್ನರ್ ಯುಜವೇಂದ್ರ ಚಹಾಲ್ ಕುರಿತು ಮಾಜಿ ಟೀಮ್ ಇಂಡಿಯಾ ಓಪನರ್ ಗೌತಮ್ ಗಂಭೀರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಐಪಿಎಲ್ 13ನೇ ಆವೃತ್ತಿಯಲ್ಲಿ ಕೇವಲ ವಿದೇಶಿ ಬೌಲರ್‌ಗಳ ಪ್ರದರ್ಶನ ಕುರಿತು ಮಾತನಾಡುತ್ತಿದ್ದೇವೆ. ಆದರೆ ಆರ್‌ಸಿಬಿಯ ಸಿನ್ನರ್ ಯುಜವೇಂದ್ರ ಚಹಾಲ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಎಂದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚಹಾಲ್ ಮೂರು ಓವರ್‌ಗಳಲ್ಲಿ 29 ರನ್ ನೀಡಿ ಸ್ವಲ್ಪ ದುಬಾರಿಯೆನಿಸಿದರೂ ಈ ಸೀಸನ್‌ನಲ್ಲಿ ಅವರ ಪ್ರದರ್ಶನವು ಅತ್ಯುತ್ತಮವಾಗಿದೆ. ಯುಜವೇಂದ್ರ ಚಹಾಲ್ ಇದುವರೆಗೆ ಐದು ಇನ್ನಿಂಗ್ಸ್‌ಗಳಲ್ಲಿ ಎಂಟು ವಿಕೆಟ್‌ಗಳನ್ನು ಪಡೆದಿದ್ದಾರೆ. ಕುತೂಹಲಕಾರಿ ವಿಷಯ ಏನಂದ್ರೆ ಅಗ್ರ ವಿಕೆಟ್ ಟೇಕರ್‌ಗಳಲ್ಲಿ ಚಹಾಲ್ ಒಬ್ಬನೇ ಸ್ಪಿನ್ನರ್ ಆಗಿದ್ದು, ಉಳಿದವರು ಬೌಲರ್‌ಗಳು.
ಗೌತಮ್ ಗಂಭೀರ್ ಅವರ ಪ್ರಕಾರ, ''ಈ ಋತುವಿನಲ್ಲಿ ರಬಾಡ ಮತ್ತು ಬುಮ್ರಾ ಅವರ ಬಗ್ಗೆ ಹೆಚ್ಚು ಮಾತನಾಡಲಾಗುತ್ತಿದೆ, ಹರಿಯಾಣ ಲೆಗ್ಗಿ ಆರ್‌ಸಿಬಿಗೆ ಸದ್ದಿಲ್ಲದೆ ತನ್ನ ಕೆಲಸವನ್ನು ನೀಡಿದ್ದಾನೆ. "ಯುಜ್ವೇಂದ್ರ ಚಹಲ್ ಅದ್ಭುತ. ನಾವು ರಶೀದ್ ಖಾನ್, ಜೋಫ್ರಾ ಆರ್ಚರ್, ಕಗಿಸೊ ರಬಾಡಾ, ಪ್ಯಾಟ್ ಕಮ್ಮಿನ್ಸ್ ಬಗ್ಗೆ ಮಾತನಾಡುತ್ತೇವೆ, ಆದರೆ ಐಪಿಎಲ್‌ನಲ್ಲಿ ಚಹಲ್, ವಿಶೇಷವಾಗಿ ಈ ಋತುವಿನಲ್ಲಿ ವಿಶೇಷ ಪ್ರದರ್ಶನ ನೀಡುತ್ತಿದ್ದಾರೆ.'' ಎಂದಿದ್ದಾರೆ.
ಈ ಋತುವಿನಲ್ಲಿ ಆರ್‌ಸಿಬಿಯ ಸಾಧನೆಯನ್ನು ಗಣನೆಗೆ ತೆಗೆದುಕೊಂಡರೆ, ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದಾಗಲೆಲ್ಲಾ ತಂಡವು ಗೆದ್ದಿದೆ. ಉಭಯ ತಂಡಗಳು 201 ರನ್ ಗಳಿಸಿದ ನಂತರ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧದ ಪಂದ್ಯವು ಸೂಪರ್ ಓವರ್‌ಗೆ ಹೋಯಿತು. ನವದೀಪ್ ಸೈನಿ ಅವರಿಂದಾಗಿ ಆರ್‌ಸಿಬಿ ಪಂದ್ಯ ಗೆದ್ದುಕೊಂಡಿತು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್‌ಗಳಿಂದ ಪಂದ್ಯ ಸೋತಿದ್ದು, ಮುಂದಿನ ದಿನಗಳಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications