ಬೇಡಿ, ಪ್ರಸನ್ನ ಮೂಲಕ ನಾವು ಭಾರತದಿಂದ ಗೆಲುವು ಕದ್ದಿದ್ದೆವು: ಜಾವೆದ್

ಕರಾಚಿ, ಮೇ 4: 1978-79ರಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದ್ದನ್ನು ಪಾಕ್ ಮಾಜಿ ನಾಯಕ ಮತ್ತು ಕೋಚ್ ಜಾವೆದ್ ಮಿಯಾಂದಾದ್ ಸ್ಮರಿಸಿಕೊಂಡಿದ್ದಾರೆ. ಆವತ್ತು ಭಾರತದ ಸ್ಪಿನ್ನರ್‌ಗಳಾದ ಬಿಶಾನ್ ಸಿಂಗ್ ಬೇಡಿ, ಭಗ್ವಂತ್ ಚಂದ್ರಶೇಖರ್ ಮತ್ತು ಎರಪಲ್ಲಿ ಪ್ರಸನ್ನ ಅವರೇ ಪಾಕ್ ಗೆಲುವಿಗೆ ಕಾರಣರಾಗಿದ್ದರು ಎಂದು ಮಿಯಾಂದಾದ್ ಹೇಳಿದ್ದಾರೆ.
ಆವತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ, ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. ಈ ವೇಳೆ ಪಾಕ್ ಆಟಗಾರರಾದ ಜಾವೆದ್ ಮಿಯಾಂದಾದ್ ಮತ್ತು ಝಹೀರ್ ಅಬ್ಬಾಸ್ ಪಾರಮ್ಯ ಮೆರೆದಿದ್ದರು. ಮಿಯಾಂದಾದ್ ಹೇಳಿದಂತೆ ಭಾರತ ಸ್ಪಿನ್ನರ್‌ಗಳಾದ ಬೇಡಿ, ಚಂದ್ರಶೇಖರ್, ಪ್ರಸನ್ನ ಭಾರತದ ಸೋಲಿಗೆ ನೆಪವಾಗಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಜಾವೆದ್ ಮಿಯಾಂದಾದ್ 1978-79ರ ಸರಣಿಯಲ್ಲಿ ಅಬ್ಬಾಸ್ ಜೊತೆಗೆ ಅದ್ಭುತ ಪ್ರದರ್ಶನ ನೀಡಿದ್ದರು. ಅದರಲ್ಲೂ ಅಬ್ಬಾಸ್, ಭಾರತದ ಮೂವರು ಸ್ಪಿನ್ನರ್‌ಗಳ ಎಸೆಗಳಿಗೆ ದಿಟ್ಟ ಉತ್ತರ ನೀಡಿದ್ದರು. ಮೂರು ಪಂದ್ಯಗಳ ಈ ಸರಣಿಯಲ್ಲಿ ಪಾಕಿಸ್ತಾನ 2-0ಯ ಗೆಲುವನ್ನಾಚರಿಸಿತ್ತು.
'ಚಂದ್ರಶೇಖರ್, ಬೇಡಿ, ಪ್ರಸನ್ನ ಇವರೆಲ್ಲ ಭಾರತದ ಶಕ್ತಿ. ವಿಶ್ವದಗಲಕ್ಕೂ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ಬಂದಿದ್ದಾಗ ಈ ಮೂವರು ಸ್ಪಿನ್ನರ್‌ಗಳನ್ನು ನಾವೇ ನಮ್ಮ ಗೆಲುವಿನ ರುವಾರಿಗಳಾಗಿ ಬಳಸಿಕೊಂಡೆವು. ನಾವು ಅವರಿಂದ ರನ್‌ಗಳನ್ನು ಕದ್ದಿದ್ದೆವು,' ಎಂದು ಯೂ ಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತ ಮಿಯಾಂದಾದ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications