ನಾವು ಈ ತಂಡದೊಂದಿಗೆ ಫೈನಲ್ ಆಡಲು ಬಯಸುತ್ತೇವೆ ಎಂದ ಪಾಕ್ ತಂಡದ ಮೆಂಟರ್

ಪಾಕಿಸ್ತಾನ ತಂಡದ ಮೆಂಟರ್ ಮ್ಯಾಥ್ಯೂ ಹೇಡನ್ ಫೈನಲ್‌ನಲ್ಲಿ ಭಾರತದ ವಿರುದ್ಧ ಆಡಬೇಕು ಎಂದು ಹೇಳಿದ್ದಾರೆ. ಭಾರತ-ಪಾಕಿಸ್ತಾನದ ನಡುವಿನ ಪಂದ್ಯ ಸಾಕಷ್ಟು ಕುತೂಹಲಕಾರಿಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಗುಂಪು ಹಂತದ ಭಾರತ-ಪಾಕಿಸ್ತಾನದ ಮೊದಲನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿಯವರ ಅದ್ಭುತ ಇನ್ನಿಂಗ್ಸ್ ಸಹಾಯದಿಂದ ಭಾರತ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು. ಪಾಕಿಸ್ತಾನವು ನ್ಯೂಜಿಲೆಂಡ್ ವಿರುದ್ಧ ಏಳು ವಿಕೆಟ್‌ಗಳ ಆರಾಮದಾಯಕ ಜಯದೊಂದಿಗೆ ಫೈನಲ್‌ಗೆ ಪ್ರವೇಶಿಸಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್‌ನಲ್ಲಿ ಜಯಗಳಿಸುವ ತಂಡಕ್ಕಾಗಿ ಕಾಯುತ್ತಿದೆ.
ಫೈನಲ್‌ನಲ್ಲಿ ಯಾವ ತಂಡದೊಂದಿಗೆ ಆಡಲು ಬಯಸುತ್ತೀತಾ ಎಂದು ಕೇಳಿದ ಪ್ರಶ್ನೆಗೆ "ನಾನು ಭಾರತದ ವಿರುದ್ಧ ಫೈನಲ್‌ನಲ್ಲಿ ಆಡಲು ಬಯಸುತ್ತೇವೆ" ಎಂದು ಉತ್ತರಿಸಿದ್ದಾರೆ.
ಭಾರತ ಮತ್ತು ಜಿಂಬಾಬ್ವೆ ವಿರುದ್ಧದ ಸೋಲಿನ ನಂತರ ಪಾಕಿಸ್ತಾನವು ಆರಂಭಿಕ ನಿರ್ಗಮನದ ಅಂಚಿನಲ್ಲಿತ್ತು ಆದರೆ ನೆದರ್ಲ್ಯಾಂಡ್ಸ್ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಅದೃಷ್ಟ ಪಾಕಿಸ್ತಾನದ ಕಡೆ ತಿರುಗಿತು. ಬಾಬರ್ ಅಜಮ್ ಪಡೆ ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್‌ಗೆ ಅರ್ಹತೆ ಗಳಿಸಿತು.

ಮೂರನೇ ಬಾರಿ ಫೈನಲ್ ಪ್ರವೇಶಿಸಿದ ಪಾಕಿಸ್ತಾನ
ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮೂರನೇ ಬಾರಿ ಪ್ರವೇಶಿಸಿದೆ, ಅವರು 2007 ರ ಉದ್ಘಾಟನಾ ಆವೃತ್ತಿಯಲ್ಲಿ ಭಾರತದ ವಿರುದ್ಧ ಫೈನಲ್‌ನಲ್ಲಿ ಆಡಿದ್ದ ಪಾಕಿಸ್ತಾಸ ಸೋಲನುಭವಿಸಿತ್ತು. 2009ರಲ್ಲಿ ಮತ್ತೆ ಫೈನಲ್ ಪ್ರವೇಶಿಸಿದ ಪಾಕಿಸ್ತಾನ ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಫೈನಲ್‌ಗೆ ಮುನ್ನ ಮ್ಯಾಥ್ಯೂ ಹೇಡರ್ ತಮ್ಮ ಮುಂದಿನ ಪ್ರತಿಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದರು. ಪಾಕಿಸ್ತಾನದ ಬೌಲಿಂಗ್ ದಾಳಿಯು ಇನ್ನೂ ಅತ್ಯುತ್ತಮವಾಗಿ ಹೊರಹೊಮ್ಮಿಲ್ಲ ಎಂದು ಹೇಳಿದರು.
"ಇಂದು ರಾತ್ರಿ ಬಹಳ ವಿಶೇಷವಾಗಿತ್ತು. ನೀವು ನೋಡಿದ ವೇಗದ ಬೌಲಿಂಗ್ ದಾಳಿಯು ನಂಬಲಸಾಧ್ಯವಾದ ಕೆಲಸವನ್ನು ಮಾಡಿದೆ. ನಾವು ಇನ್ನೂ ನಮ್ಮ ಅತ್ಯುತ್ತಮ ಪ್ರದರ್ಶನವನ್ನು ನೋಡಿಲ್ಲ ಎಂದು ನಾನು ಭಾವಿಸುತ್ತೇನೆ, ಇದು ಬಹುಶಃ ನಮ್ಮನ್ನು ಫೈನಲ್ ಪಂದ್ಯದಲ್ಲಿ ಎದುರಿಸುವವರಿಗೆ ಭಯಾನಕ ಭಾಗವಾಗಿದೆ" ಎಂದು ಹೇಡನ್ ಹೇಳಿದರು.
"ಬೌಲರ್‌ಗಳು ಈ ಪಿಚ್‌ಗೆ ಹೊಂದಿಕೊಳ್ಳಬೇಕು ಮತ್ತು ನಿಧಾನಗತಿಯ ಚೆಂಡುಗಳನ್ನು ಬೌಲ್ ಮಾಡಬೇಕಾಗಿತ್ತು ಮತ್ತು ಅವರು ಚೆನ್ನಾಗಿ ಮಾಡಿದರು. ಹ್ಯಾರಿಸ್ ರೌಫ್ ಸ್ಥಿರವಾದ 150 ಬೌಲಿಂಗ್ ಮಾಡುತ್ತಿದ್ದಾರೆ. ಶಾದಾಬ್ ಒಬ್ಬ ಶ್ರೇಷ್ಠ ಹೋರಾಟಗಾರ. ಯಾವುದೇ ಪಂದ್ಯಾವಳಿಯನ್ನು ಗೆಲ್ಲಲು ನೀವು ಹೋರಾಡಬೇಕು." ಎಂದು ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications