IPL 2024: ನಾವು 15 ರಿಂದ 20 ರನ್ ಕಡಿಮೆ ಮಾಡಿದೆವು: ಫಾಫ್ ಡುಪ್ಲೇಸಿಸ್
17ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಗೆಲುವಿನ ಅಭಿಯಾನವನ್ನು ಆರಂಭಿಸುವ ಆಸೆಗೆ ಪೆಟ್ಟು ಬಿದ್ದಿದೆ. 16 ವರ್ಷದಲ್ಲಿ ಒಂದೇ ಒಂದು ಬಾರಿ ಚೆನ್ನೈ ಅಂಗಳದಲ್ಲಿ ಗೆಲುವಿನ ನಗೆ ಬೀರುವ ಆರ್‌ಸಿಬಿ ಆಸೆ ನುಚ್ಚು ನೂರಾಗಿದೆ. ಆರ್‌ಸಿಬಿ ಮಾಡಿಕೊಂಡ ಎಡವಟ್ಟು ಏನು ಎಂಬ ಬಗ್ಗೆ ಪಂದ್ಯದ ಬಳಿಕ ಆರ್‌ಸಿಬಿ ನಾಯಕ ಫಾಫ್ ಡುಪ್ಲೇಸಿಸ್ ಮಾತನಾಡಿದ್ದಾರೆ.
ಐಪಿಎಲ್ 2024ರಲ್ಲಿ ಆರ್‌ಸಿಬಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಫಾಫ್ ಪಡೆ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಸೇರಿಸಲಷ್ಟೇ ಶಕ್ತವಾಯಿತು. ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸಿದ ಸಿಎಸ್‌ಕೆ ಇನ್ನು ಎಂಟು ಎಸೆತಗಳು ಬಾಕಿ ಇರುವಂತೆ ಆರು ವಿಕೆಟ್ ಜಯ ಸಾಧಿಸಿತು. ಈ ಪಂದ್ಯದಲ್ಲಿ ಆರ್‌ಸಿಬಿಯ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಂತೆ ಆಗಿದೆ.

ಪಂದ್ಯವನ್ನು ಸೋತ ಬಳಿಕ ಮಾತನಾಡಿರುವ ಫಾಫ್, ಚೆನ್ನೈ ಮಧ್ಯಮ ಓವರ್‌ಗಳಲ್ಲಿ ಉತ್ತಮವಾಗಿ ಆಡಿತು. ಅಲ್ಲದೆ ಸಿಎಸ್‌ಕೆ ಸ್ಪಿನ್ ಬೌಲರ್‌ಗಳನ್ನು ಬಳಸಿ ನಮ್ಮ ಮೇಲೆ ಒತ್ತಡವನ್ನು ಹೇರಿತು. ದುರದೃಷ್ಟವಶಾತ್, ನಾವು ಮೊದಲ 6-7 ಓವರ್‌ಗಳಲ್ಲಿ ಸಾಕಷ್ಟು ವಿಕೆಟ್‌ಗಳನ್ನು ಕಳೆದುಕೊಂಡಿವು ಎಂದಿದ್ದಾರೆ.
ಆರಂಭದಲ್ಲಿ ವಿಕೆಟ್ ಪತನವಾಯಿತು ಎಂದರೇ, ಮಿಡ್ಲ್ ಆರ್ಡರ್ ಬ್ಯಾಟರ್‌ಗಳ ಮೇಲೆ ಖಂಡಿತವಾಗಿಯೂ ಒತ್ತಡ ಬೀಳುತ್ತದೆ. ಅಲ್ಲದೆ ಒತ್ತಡವನ್ನು ಮೆಟ್ಟಿನಿಂತು ಸ್ಥಿರ ಪ್ರದರ್ಶನ ನೀಡುವುದು ಅನಿವಾರ್ಯವಾಗಿತ್ತು. ಪಿಚ್ ಸಾಕಷ್ಟು ಉತ್ತಮವಾಗಿತ್ತು, ಆದರೆ ನಾವು 15-20 ರನ್ ಕಡಿಮೆ ಗಳಿಸಿದ್ದೇವೆ ಎಂದು ಫಾಫ್ ತಿಳಿಸಿದ್ದಾರೆ.

ನಮ್ಮ ಬೌಲರ್‌ಗಳು ಸಹ ಉತ್ತಮ ಪ್ರದರ್ಶನ ನೀಡಿದರು. ಆದರೆ ಚೆನ್ನೈನ ಬ್ಯಾಟರ್‌ಗಳು ಉತ್ತಮ ತಂತ್ರಗಾರಿಕೆಯೊಂದಿಗೆ ಆಟವನ್ನು ಆಡಿದರು. ನಾವು ಶಾರ್ಟ್ ಬಾಲ್‌ಗಳಲ್ಲಿಯೂ ವಿಕೆಟ್ ಪಡೆಯಲು ಪ್ರಯತ್ನಿಸಿದೆವು. ಮಿಡ್ಲ್ ಓವರ್‌ಗಳಲ್ಲಿ ಚೆನ್ನೈ ಕಟ್ಟಿ ಹಾಕುವಲ್ಲಿ ನಾವು ಎಡವಿದೆವು ಎಂದು ಡುಪ್ಲೇಸಿಸ್ ತಿಳಿಸಿದ್ದಾರೆ.
ರುತುರಾಜ್ ಹೇಳಿದ್ದೇನು?
ನಾನು ನಾಯಕತ್ವವನ್ನು ನಿಭಾಯಿಸುವ ಅನುಭವವನ್ನು ಹೊಂದಿದ್ದೇನೆ. ಪಂದ್ಯದ ವೇಳೆ ಯಾವುದೇ ಒತ್ತಡವನ್ನು ಅನುಭವಿಸಲಿಲ್ಲ. ನಮ್ಮ ತಂಡದಲ್ಲಿರುವ ಪ್ರತಿಯೊಬ್ಬರೂ ಸಹ ಸ್ಟ್ರೋಕ್ ಪ್ಲೇಯರ್‌ಗಳಾಗಿದ್ದಾರೆ. ಅಜಿಂಕ್ಯ ರಹಾನೆ ಉತ್ತಮವಾಗಿ ತಂಡಕ್ಕೆ ನೆರವಾಗಿದ್ದಾರೆ. ಪ್ರತಿಯೊಬ್ಬ ಆಟಗಾರ ಅವರ ಪಾತ್ರವನ್ನು ಅಚ್ಚು ಕಟ್ಟಾಗಿ ನಿಭಾಯಿಸಾದ್ದಾರೆ. ಇನ್ನು ಎರಡು-ಮೂರು ವಿಷಯಗಳ ಮೇಲೆ ಕೆಲಸವನ್ನು ನಮ್ಮ ತಂಡ ಮಾಡಬೇಕಿದೆ. ಎಲ್ಲರೂ ಚೆನ್ನಾಗಿ ಬ್ಯಾಟ್ ಮಾಡಿದರು ಆದರೆ ಟಾಪ್ 3 ರಲ್ಲಿ ಯಾರಾದರೂ 15 ನೇ ಓವರ್ ವರೆಗೆ ಬ್ಯಾಟ್ ಮಾಡಿದ್ದರೆ, ಅದು ಸುಲಭವಾಗುತ್ತಿತ್ತು ಎಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications