Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂದಿನ ಬೇಸಿಗೆಗೆ ನಾವು ರೆಡಿ ಎಂದ ಚೆನ್ನೈ ಸೂಪರ್ ಕಿಂಗ್ಸ್ !

ಚೆನ್ನೈ, ಮೇ 22: ಇಂಡಿಯನ್ ಪ್ರೀಮಿಯರ್ ಲೀಗ್ ನ 10ನೇ ಸಂಭ್ರಮಾಚರಣೆ ಮುಕ್ತಾಯ ಕಂಡಿದೆ ಐಪಿಎಲ್ 2018ರಲ್ಲಿ ಹಳೆ ತಂಡಗಳ ಮರು ಸೇರ್ಪಡೆ, ತಂಡಗಳಲ್ಲಿ ಹೊಸ ಆಟಗಾರರನ್ನು ಕಾಣಬಹುದಾಗಿದೆ.

ಮುಂದಿನ ಬೇಸಿಗೆಗೆ ನಾವು ರೆಡಿ ಎಂದು ಚೆನ್ನೈ ತಂಡ ಈಗಲೇ ಟ್ವೀಟ್ ಮಾಡಿದೆ. ಚೆನ್ನೈ ತಂಡದ ಬರ್ಥ್ ಡೇಗೆ ಶುಭ ಹಾರೈಕೆ ವಿಷಲ್ ಹೊಡೆಯಿರಿ ಎಂದು ಎಂದಿನ ಶೈಲಿಯಲ್ಲಿ ಟ್ವೀಟ್ ಕಾಣಿಸಿಕೊಂಡಿದೆ.[ಧೋನಿಗೆ ಸಿಗುತ್ತಿದ್ದ ಸಂಬಳ ವಿವರ ಬಹಿರಂಗಪಡಿಸಿದ ಮೋದಿ]

We will be back in IPL 2018, announce Chennai Super Kings (CSK)


ಭ್ರಷ್ಟಾಚಾರದ ಆರೋಪ ಹೊತ್ತು ಎರಡು ವರ್ಷಗಳ ಕಾಲ ಅಮಾನತುಗೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ಹಾಗೂ ರಾಜಸ್ಥಾನ್ ರಾಯಲ್ಸ್ (ಆರ್ ಆರ್) ತಂಡಗಳು ಮುಂದಿನ ಸೀಸನ್ ನಲ್ಲಿ ಪುನರ್ ಪ್ರವೇಶ ಪಡೆಯಲಿವೆ.


ಈ ಎರಡು ತಂಡಗಳ ಅನುಪಸ್ಥಿತಿಯಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದ ಗುಜರಾತ್ ಲಯನ್ಸ್ (ಜಿಎಲ್) ಹಾಗೂ ರೈಸಿಂಗ್ ಸೂಪರ್ ಜೈಂಟ್ (ಆರ್ ಪಿಎಸ್) ತಂಡಗಳು ಮುಂದಿನ ವರ್ಷದಿಂದ ಐಪಿಎಲ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ.[10 ವರ್ಷ ಪೂರೈಸಿದ ಸಿಎಸ್ಕೆಗೆ ಅಭಿಮಾನದ ಮಹಾಪೂರ]

#ManyHappyReturnsOfCSK ಎಂಬ ಹ್ಯಾಶ್ ಟ್ಯಾಗ್ ಬಳಸಿ ಚೆನ್ನೈ ಸೂಪರ್ ಕಿಂಗ್ಸ್ ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಎಂಎಸ್ ಧೋನಿ ನೇತೃತ್ವದ ಚೆನ್ನೈ ತಂಡ ಎರಡು ಬಾರಿ ಐಪಿಎಲ್ ಟ್ರೋಫಿ ಎತ್ತಿತ್ತು. ಧೋನಿ ಅವರು ಕಳೆದ ಎರಡು ವರ್ಷ ರೈಸಿಂಗ್ ಪುಣೆ ಸೂಪರ್ ಜೈಂಟ್ ಪರ ಆಡಿದ್ದರು.[ಧೋನಿಯ ಬೆಸ್ಟ್ ಫಿನಿಷಿಂಗ್ ಮ್ಯಾಚ್ ಗಳು]

ಮೊದಲ ವರ್ಷ ನಾಯಕರಾಗಿದ್ದರು. ಈ ಬಾರಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಕಾಣಿಸಿಕೊಂಡಿದ್ದರು. ಐಪಿಎಲ್ 10ರ ಫೈನಲ್ ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಏಕೈಕ ರನ್ ನಿಂದ ಪುಣೆ ಸೋಲು ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+