WI vs BAN: ವೆಸ್ಟ್ ಇಂಡೀಸ್ ಕ್ಲೀನ್ ಸ್ವೀಪ್ ಸಾಧನೆ: ಅಮೀರ್ ಜಾಂಗೂ ಶತಕ
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಬಾಂಗ್ಲಾದೇಶ ಈ ವೇಳೆ ಮೂರನೇ ಏಕದಿನ ಪಂದ್ಯವನ್ನು ಆಡಿತು. ಗುರುವಾರ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ, ವೆಸ್ಟ್ ಇಂಡೀಸ್ 4 ವಿಕೆಟ್ ಜಯ ಸಾಧಿಸಿದೆ. ಬಾಂಗ್ಲಾದೇಶ ನೀಡಿದ್ದ ಬೃಹತ್ ಮೊತ್ತವನ್ನು ಸುಲಭವಾಗಿ ಹಿಂಬಾಲಿಸಿದ ವಿಂಡೀಸ್ ಅಬ್ಬರಿಸಿತು. ಇದೇ ವೇಳೆ ವಿಂಡೀಸ್ ತಂಡದ ಅಮೀರ್ ಜಾಂಗೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಸಾಧನೆ ಮಾಡಿದರು. ಇನ್ನೋಬ್ಬ ಭರವಸೆಯ ಆಟಗಾರ ಕೀಸಿ ಕಾರ್ಟಿ ಶತಕ ಅಂಚಿನಲ್ಲಿ ಔಟ್ ಆದರು. ಪಂದ್ಯದ ಚಿತ್ರಣದ ವರದಿ ಇಲ್ಲಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 321 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ವಿಂಡೀಸ್ 45.5 ಓವರ್‌ಗಳಲ್ಲಿ 6 ವಿಕೆಟ್‌ಗೆ 325 ರನ್ ಕಲೆ ಹಾಕಿ ಅಬ್ಬರಿಸಿತು.

ಗುರಿಯನ್ನು ಹಿಂಬಾಲಿಸಿದ ವಿಂಡೀಸ್ ತಂಡದ ಆರಂಭ ಕಳಪೆಯಾಗಿತ್ತು. ಬ್ರಾಂಡನ್ ಕಿಂಗ್ (7) ಹಾಗೂ ಅಲಿಕ್ ಅಥಾನಾಜೆ (15) ಹಾಗೂ ಶಾಯ್ ಹೋಪ್ (3) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ನಾಲ್ಕನೇ ವಿಕೆಟ್‌ಗೆ ಕೀಸಿ ಕಾರ್ಟಿ ಹಾಗೂ ಶೆರ್ಫೇನ್ ರುದರ್ಫೋರ್ಡ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 57 ಎಸೆತಗಳಲ್ಲಿ 55 ರನ್ ಸೇರಿಸಿತು.
ಐದನೇ ವಿಕೆಟ್‌ಗೆ ಶತಕದ ಜೊತೆಯಾಟ
86 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಕೀಸಿ ಕಾರ್ಟಿ ಹಾಗೂ ಅಮೀರ್ ಜಾಂಗೂ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಐದನೇ ವಿಕೆಟ್‌ಗೆ 115 ಎಸೆತಗಳಲ್ಲಿ 132 ರನ್ ಜೊತೆಯಾಟದ ಕಾಣಿಕೆ ನೀಡಿತು. ಕೀಸಿ ಕಾರ್ಟಿ 10 ಬೌಂಡರಿ, 2 ಸಿಕ್ಸರ್ ಸಹಾಯದಿಂದ 95 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಭರವಸೆಯ ಆಟಗಾರ ರೋಸ್ಟನ್ ಚೇಸ್ 12 ರನ್ ಸಿಡಿಸಿದರು. ಏಳನೇ ವಿಕೆಟ್‌ಗೆ ಗುಡಾಕೇಶ್ ಮೋತಿ ಹಾಗೂ ಅಮೀರ್ ಜೊತೆಗೂಡಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. 53 ಎಸೆತಗಳಲ್ಲಿ ಅಜೇಯ 91 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದ ಜೋಡಿ ಅಬ್ಬರಿಸಿತು.
ಅಮೀರ್ ಶತಕ
ವಿಂಡೀಸ್ ತಂಡದ ಪರ 27 ವರ್ಷದ ಯುವ ಆಟಗಾರ ಅಮೀರ್ ಜಾಂಗೂ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಇವರು 83 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 104 ರನ್ ಸಿಡಿಸಿದರು.
ಭರವಸೆಯ ಆಟಗಾರರ ಜವಾಬ್ದಾರಿಯುತ ಆಟ
ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡದ ಭರವಸೆಯ ಆಟಗಾರರು ತಂಡದ ಪರ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಬಾಂಗ್ಲಾ ಪರ ಸೌಮ್ಯಾ ಸರ್ಕಾರ 6 ಬೌಂಡರಿ, 4 ಸಿಕ್ಸರ್ ಸಹಾಯದಿಂದ 73 ರನ್ ಸಿಡಿಸಿದರು. ನಾಯಕ ಮೆಹದಿ ಹಸನ್ ಮಿರ್ಜಾ 73 ಎಸೆತಗಳಲ್ಲಿ 77 ರನ್ ನೀಡಿ ತಂಡಕ್ಕೆ ನೆರವಾದರು. ಭರವಸೆಯ ಆಟಗಾರ ಮಹಮದುಲ್ಲಾ 63 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 84 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications