
ಸೇಂಟ್ ಜೋನ್ಸ್: ಮುಂದಿನ ತಿಂಗಳು ಬಾಂಗ್ಲಾದೇಶಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಪ್ರವಾಸ ಹೋಗಲಿದೆ. ಜನವರಿ ತಿಂಗಳಿನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಎರಡು ಟೆಸ್ಟ್ ಪಂದ್ಯಗಳಿಗಾಗಿ ಬಾಂಗ್ಲಾ ಪ್ರವಾಸ ಹೊರಡಲು ವೆಸ್ಟ್ ಇಂಡೀಸ್ ಕ್ರಿಕೆಟ್ ಸಮ್ಮತಿಸಿದೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಮರು ತಯಾರಿಸಿರುವ ವೇಳಾಪಟ್ಟಿಯ ಪ್ರಕಾರ, ಏಕದಿನ ಸರಣಿಯೊಂದಿಗೆ ಧಾಕಾದಲ್ಲಿ ಜನವರಿ 20ರಿಂದ ಪ್ರವಾಸ ಸರಣಿಗಳು ಆರಂಭಗೊಳ್ಳಲಿದೆ. ದ್ವಿತೀಯ ಮತ್ತು ತೃತೀಯ ಏಕದಿನ ಪಂದ್ಯಗಳು ಕ್ರಮವಾಗಿ ಜನವರಿ 22 ಮತ್ತು 25ರಂದು ನಡೆಯಲಿದೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಫೆಬ್ರವರಿ 3ರಿಂದ 7ರ ವರೆಗೆ, ದ್ವಿತೀಯ ಪಂದ್ಯ ಫೆಬ್ರವರಿ 11ರಿಂದ 15ರ ವರೆಗೆ ಕ್ರಮವಾಗಿ ಚತ್ತಿಂಗಾಂಗ್ ಮತ್ತು ಧಾಕಾದಲ್ಲಿ ನಡೆಯಲಿದೆ. ಇದರರ್ಥ ಇದಕ್ಕೂ ಮುನ್ನ ನೆಡೆಸಲು ಯೋಚಿಸಲಾಗಿದ್ದ ಟಿ20ಐ ಸರಣಿ ನಡೆಯುತ್ತಿಲ್ಲ. ಬರೀ ಟೆಸ್ಟ್ ಮತ್ತು ಏಕದಿನ ಸರಣಿಗಳು ಮಾತ್ರ ನಡೆಯಲಿವೆ.
ಇತ್ತೀಚೆಗೆ ನ್ಯೂಜಿಲೆಂಡ್‌ಗೆ ಪ್ರವಾಸ ಹೋಗಿದ್ದ ವೆಸ್ಟ್ ಇಂಡೀಸ್ ತಂಡ ಅಲ್ಲಿ ಮೂರು ಪಂದ್ಯಗಳ ಟಿ20 ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಿತ್ತು. ಇದರಲ್ಲಿ ಟಿ20 ಸರಣಿಯನ್ನು 2-0 (1 ಪಂದ್ಯ ರದ್ದು), ಟೆಸ್ಟ್ ಸರಣಿಯನ್ನು 2-0ಯಿಂದ ವಿಂಡೀಸ್ ಸೋತಿತ್ತು.