ಮುಂಬರುವ ಬಾಂಗ್ಲಾದೇಶ ವಿರುದ್ಧದ ಸರಣಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ಸದ್ಯ ಉಭಯ ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಟೆಸ್ಟ್ ಸರಣಿ ಮುಗಿದ ಬಳಿಕ ಎರಡೂ ದೇಶಗಳು ಏಕದಿನ ಸರಣಿಯನ್ನು ಆಡಲಿವೆ. ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದ್ದು, ಶಾಯ್ ಹೋಪ್ ಅವರಿಗೆ ನಾಯಕತ್ವದ ಪಟ್ಟವನ್ನು ಕಟ್ಟಲಾಗಿದೆ. ಇನ್ನು ತಂಡದಲ್ಲಿ ಆರ್‌ಸಿಬಿ ತಂಡಕ್ಕೆ ಎಂಟ್ರಿ ನೀಡಿರುವ ಆಟಗಾರನಿಗೂ ಸ್ಥಾನ ನೀಡಲಾಗಿದೆ.
ತಂಡದ ಬ್ರೆಂಡನ್ ಕಿಂಗ್‌ಗೆ ಉಪನಾಯಕನ ಜವಾಬ್ದಾರಿ ಸಿಕ್ಕಿದೆ. ಏಕದಿನ ಕ್ರಿಕೆಟ್‌ನಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಇನ್ನು ಅನುಭವಿ ಆಟಗಾರಿಗೆ ಮಣೆ ಹಾಕಲಾಗಿದೆ. ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಇಬ್ಬರು ಆಟಗಾರರಿಗೆ ಇದೇ ಮೊದಲು ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡಲಾಗಿದೆ.

ದೇಶೀಯ ಸೀಮಿತ ಓವರ್‌ಗಳ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಮೀರ್ ಜಂಗು ಹಾಗೂ ಜಸ್ಟಿನ್ ಗ್ರೀವ್ಸ್ ಅಬ್ಬರದ ಪ್ರದರ್ಶನ ನೀಡಿದ್ದರಿಂದ ಇವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಏಕಾಂಗಿ ಹೋರಾಡಿ ಟೆಸ್ಟ್ ಶತಕವನ್ನು ಬಾರಿಸಿದ ಗ್ರೀವ್ಸ್‌ಗೆ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇನ್ನು ಮೀರ್ ಜಂಗು ಅವರು ದೇಶೀಯ ಕ್ರಿಕೆಟ್‌ನಲ್ಲಿ ರನ್ ಮಳೆ ಸುರಿಸಿದ್ದರು. ಇವರು ಏಳು ಇನ್ನಿಂಗ್ಸ್‌ಗಳಲ್ಲಿ 89.20 ಸರಾಸರಿಯಲ್ಲಿ 446 ರನ್ ಗಳಿಸಿದ್ದರು. ಇದರಲ್ಲಿ ಮೂರು ಅರ್ಧ ಶತಕಗಳು ಮತ್ತು ಒಂದು ಶತಕ ಸೇರಿದೆ. ಗ್ರೀವ್ಸ್ 401 ರನ್ ಗಳಿಸುವ ಅತಿ ಹೆಚ್ಚು ರನ್ ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಮುಂದಿನ ಬಾರಿಯ ವಿಶ್ವಕಪ್‌ನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ರಚಿಸಲಾಗಿದೆ ಎಂದು ವೆಸ್ಟ್ ಇಂಡೀಸ್ ತಂಡದ ಕೋಚ್ ಡ್ಯಾರೆನ್ ಸಾಮಿ ತಿಳಿಸಿದ್ದಾರೆ. ನಾವು ಏಕದಿನ ವಿಶ್ವಕಪ್ ಮನಸ್ಸಿನಲ್ಲಿ ಇಟ್ಟುಕೊಂಡು ಸ್ಕ್ವಾಡ್ ತಯಾರಿ ನಡೆಸಲಿದ್ದೇವೆ. ಇದೇ ತಂಡವನ್ನು ಮುಂದಿನ ದಿನಗಳಲ್ಲಿ ಕಾಣಬಹುದಾಗಿದೆ. ಅಲ್ಲದೆ ತಂಡದಲ್ಲಿ ಸ್ಥಾನ ಪಡೆದಿರುವ ಗ್ರೀವ್ಸ್ ಯಾವುದೇ ಕ್ರಮಾಂಕದಲ್ಲಿ ಬ್ಯಾಟ ಮಾಡುವ ಕ್ಷಮತೆ ಹೊಂದಿದ್ದಾರೆ. ಆಲ್‌ರೌಂಡರ್‌ಗಳು ತಂಡಕ್ಕೆ ಅಗತ್ಯ ಇರುವ ಕೊಡುಗೆ ನೀಡಬೇಕಿದೆ. ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಅಮೀರ್ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ ಎಂದು ಕೋಚ್ ತಿಳಿಸಿದ್ದಾರೆ.

ವೆಸ್ಟ್ ಇಂಡೀಸ್ ತಂಡದಲ್ಲಿ ಇತ್ತೀಚಿಗೆ ಸೌದಿಯಲ್ಲಿ ನಡೆದ ಹರಾಜಿನಲ್ಲಿ ಆರ್‌ಸಿಬಿ ತಂಡವನ್ನು ಸೇರಿರುವ ರೊಮಾರಿಯೋ ಶೆಫರ್ಡ್ ಅವರಿಗೆ ಸ್ಥಾನ ನೀಡಲಾಗಿದೆ.
ಶಾಯ್ ಹೋಪ್ (ನಾಯಕ), ಬ್ರಾಂಡನ್ ಕಿಂಗ್ (ಉಪನಾಯಕ), ಕೇಸಿ ಕಾರ್ಟಿ, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಜಸ್ಟಿನ್ ಗ್ರೀವ್ಸ್, ಶಿಮ್ರಾನ್ ಹೆಟ್ಮೆಯರ್, ಅಮೀರ್ ಜಂಗು (ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್, ಶಮರ್ ಜೋಸೆಫ್, ಎವಿನ್ ಲೆವಿಸ್, ಗುಡಕೇಶ್ ಮೋತಿ, ಶೆರ್ಫೇನ್ ರುದರ್‌ಫೋರ್ಡ್ ಜೇಡನ್ ಸೀಲ್ಸ್, ರೊಮಾರಿಯೋ ಶೆಫರ್ಡ್