Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸೀಸ್‌ ತಂಡವನ್ನು ತವರಿನಲ್ಲಿ ಕಟ್ಟಿ ಹಾಕಲು ತಂಡ ಘೋಷಿಸಿದ ವಿಂಡೀಸ್‌

ಇಂಗ್ಲೆಂಡ್‌ ಪ್ರವಾಸದಲ್ಲಿ ವೆಸ್ಟ್‌ ಇಂಡೀಸ್‌ ತಂಡ ಏಕದಿನ ಹಾಗೂ ಟ20 ಸರಣಿಗಳನ್ನು ಸೋತಿದೆ. ಈ ಸರಣಿಯ ಬಳಿಕ ವೆಸ್ಟ್‌ ಇಂಡೀಸ್‌ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಗೆ ಸಿದ್ಧತೆ ನಡೆಸಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಗೆ ವಿಂಡೀಸ್‌ ತಂಡವನ್ನು ಪ್ರಕಟಿಸಲಾಗಿದೆ.ಈ ತಂಡದ ನಾಯಕರನ್ನಾಗ ರೋಸ್ಟನ್ ಚೇಸ್ ಅವರನ್ನು ನೇಮಿಸಲಾಗಿದೆ. ಭರವಸೆಯ ಆಟಗಾರ ಜೋಮೆಲ್ ವಾರಿಕನ್ ಅವರ ಹೆಗಲಿಗೆ ಉಪಾಯಕ ಪಟ್ಟವನ್ನು ಕಟ್ಟಲಾಗಿದೆ. ಮುಂದಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಋತುವಿನ ಆರಂಭವನ್ನು ಉಭಯ ತಂಡಗಳು ಈ ಸರಣಿಯಿಂದ ಮಾಡಲಿವೆ.

ಇಂಗ್ಲೆಂಡ್‌ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿದ ವೆಸ್ಟ್‌ ಇಂಡೀಸ್‌ ತಂಡಕ್ಕೆ ಈ ಸರಣಿ ಮಹತ್ವದಾಗಿದೆ. ಟೆಸ್ಟ್‌ ಸ್ವರೂಪದಲ್ಲಿ ಸ್ಥಿರ ಪ್ರದರ್ಶನ ನೀಡುವತ್ತ ವಿಂಡೀಸ್ ತಂಡ ಚಿತ್ತ ನೆಟ್ಟಿದೆ. ಆಸ್ಟ್ರೇಲಿಯಾ ಸತತ ಎರಡು ಬಾರಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ ಪ್ರವೇಶಿಸಿದೆ. ಹೀಗಾಗಿ ಈ ತಂಡವನ್ನು ಮಣಿಸುವುದು ಸುಲಭವಲ್ಲ. ಆಸೀಸ್‌ ತಂಡವನ್ನು ಕಟ್ಟಿ ಹಾಕಲು ವಿಂಡೀಸ್‌ ಬಲಿಷ್ಠ ಬೌಲರ್‌ಗಳ ತಂಡಕ್ಕೆ ಸೇರ್ಪಡೆಗೊಳಿಸಿದೆ.

West Indies Announce Squad for Australia Test Series Roston Chase Named Captain

ವಿಂಡೀಸ್ ತಂಡ ಜೇಡನ್ ಸೀಲ್ಸ್, ಅಲ್ಜಾರಿ ಜೋಸೆಫ್ ಮತ್ತು ಶಮರ್ ಜೋಸೆಫ್ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲ ಬೌಲರ್ಸ್‌. ಇನ್ನುಜೋಹಾನ್ ಲೇನ್ ಮತ್ತು ಆಂಡರ್ಸನ್ ಫಿಲಿಪ್ ತಂಡದ ಭಾಗವಾಗಿದ್ದಾರೆ. ಇದೇ ಮೊದಲ ಬಾರಿಗೆ ಕೇವನ್‌ ಆಂಡರ್ಸನ್‌ ತಂಡಕ್ಕೆ ಸೇರಿಕೊಂಡಿದ್ದಾರೆ. ಇನ್ನು ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಕೇಸಿ ಕಾರ್ಟಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಲಭಿಸಿದೆ. ಏಕದಿನ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಬ್ರಾಂಡನ್‌ ಕಿಂಗ್ ಅವರಿಗೂ ವೈಟ್‌ ಜೆರ್ಸಿ ನೀಡಲ ಮ್ಯಾನೇಜ್ಮೆಂಟ್‌ ತೀರ್ಮಾನಿಸಿದೆ.

ಕೋಚ್‌ ಹೇಳಿದ್ದೇನು?

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತಂಡವನ್ನು ಪ್ರಕಟಿಸಿದ ಬಳಿಕ ಕೋಚ್ ಡ್ಯಾರೆನ್ ಸ್ಯಾಮಿ, ಮುಂದಿನ ಸವಾಲನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. ಮುಂಬರುವ ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್ ಭಾಗವಾಗಿರುವ ಈ ಸರಣಿಯಲ್ಲಿ ವಿಂಡೀಸ್‌ ಸ್ಥಿರ ಪ್ರದರ್ಶನ ನೀಡುವ ಇರಾದೆ ಹೊಂದಿದ್ದು, ತವರಿನ ಲಾಭ ಪಡೆಯಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ವೆಸ್ಟ್ ಇಂಡೀಸ್ ಟೆಸ್ಟ್ ತಂಡ: ರೋಸ್ಟನ್ ಚೇಸ್ (ನಾಯಕ), ಜೋಮೆಲ್ ವಾರಿಕನ್ (ಉಪನಾಯಕ), ಕೆವಲನ್ ಆಂಡರ್ಸನ್, ಕ್ರೇಗ್ ಬ್ರಾಥ್‌ವೈಟ್, ಜಾನ್ ಕ್ಯಾಂಪ್‌ಬೆಲ್, ಕೀಸ್ ಕಾರ್ಟಿ, ಜಸ್ಟಿನ್ ಗ್ರೀವ್ಸ್, ಶೈ ಹೋಪ್, ಟೆವಿನ್ ಇಮ್ಲಾಚ್, ಅಲ್ಜಾರಿ ಜೋಸೆಫ್, ಶಮರ್ ಜೋಸೆಫ್, ಬ್ರಾಂಡನ್ ಕಿಂಗ್, ಜೋಹಾನ್ ಲೇನ್, ಮೈಕೆಲ್ ಲೂಯಿಸ್, ಆಂಡರ್ಸನ್ ಫಿಲಿಪ್, ಜೇಡನ್ ಸೀಲ್ಸ್.

ಟೆಸ್ಟ್ ಸರಣಿ ವೇಳಾಪಟ್ಟಿ

ಮೊದಲ ಟೆಸ್ಟ್,ಜೂ.25 ರಿಂದ ಜೂ.29, ಕೆನ್ಸಿಂಗ್ಟನ್ ಓವಲ್,
2ನೇ ಟೆಸ್ಟ್: ಜು.3 ರಿಂದ ಜು.7 ಗ್ರೆನಡಾ
3ನೇ ಟೆಸ್ಟ್: ಜು.12 ರಿಂದ ಜು.16 ಜಮೈಕಾ

Story first published: Wednesday, June 11, 2025, 16:02 [IST]
Other articles published on Jun 11, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+