ಬಾಂಗ್ಲಾದೇಶ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ

ಬಾಂಗ್ಲಾದೇಶ ವಿಂಡೀಸ್ ಪ್ರವಾಸ ಕೈಗೊಂಡಿದ್ದು ಟೆಸ್ಟ್ ಸರಣಿ ಮುಕ್ತಾಯವಾಗಿದೆ. ಇದೀಗ ಎರಡು ತಂಡಗಳು ಕೂಡ ವೈಟ್‌ಬಾಲ್ ಸರಣಿಗ ಸಜ್ಜಾಗಿದ್ದು ಆತಿಥೆಯ ವೆಸ್ಟ್ ಇಂಡೀಸ್ ತಂಡದ ಸ್ಕ್ವಾಡ್ ಪ್ರಕಟವಾಗಿದೆ. ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಬಲಿಷ್ಠ ಆಟಗಾರರ ತಂಡವನ್ನು ಪ್ರಕಟಿಸಲಾಗಿದೆ. ಈ ಸರಣಿಯ ಮೂಲಕ ಒಬೆಡ್ ಮೆಕ್‌ಕಾಯ್ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ.
ಇನ್ನು ಇದಕ್ಕೂ ಮುನ್ನ ನಡೆದ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡ ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ಬಾಂಗ್ಲಾದೇಶ ತಂಡವನ್ನು ಸಂಪೂರ್ಣವಾಗಿ ಕೆಡವುವಲ್ಲಿ ವಿಂಡಿಸ್ ಪಡೆ ಯಶಸ್ವಿಯಾಗಿದ್ದ 2-0 ಅಂತರದಿಂದ ವಶಕ್ಕೆ ಪಡೆದಿದೆ. ಹೀಗಾಗಿ ವೈಟ್‌ಬಾಲ್ ಸರಣಿಯ ಮೇಲೆಯೂ ಕಣ್ಣಿಟ್ಟಿದೆ.

ನಿಕೋಲಸ್ ಪೂರನ್ ನೇತೃತ್ವದ ಬಲಿಷ್ಠ ಪಡೆ
ವೈಟ್‌ಬಾಲ್ ತಂಡದ ನಾಯಕನಾಗಿ ಇತ್ತೀಚೆಗಷ್ಟೇ ನೇಮಕವಾಗಿರುವ ನಿಕೋಲಸ್ ಪೂರನ್ ನೇತೃತ್ವದ ಬಲಿಷ್ಠ ತಂಡ ಬಾಂಗ್ಲಾದೇಶ ವಿರುದ್ಧ ಸೆಣೆಸಾಟಕ್ಕೆ ಇಳಿಯಲಿದೆ. ರೋಮನ್ ಪೋವೆಲ್ ಉಪನಾಯಕನಾಗಿ ನೇಮಕವಾಗಿದ್ದಾರೆ. ಶಮ್ರಾ ಬ್ರೂಕ್ಸ್, ಅಲ್ಜರಿ ಜೋಸೆಪ್, ಕೀಮೋ ಪೌಲ್ ಮತ್ತೊ ಡೆವೋನ್ ಥೋಮಸ್ ಈ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರೆ ಫಾನಿಯನ್ ಅಲೆನ್, ಓಸ್ಟನ್ ಚೇಸ್, ಮತ್ತು ಶೆಲ್ಡನ್ ಕಾಟ್ರೆಲ್ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.

ಟಿ20 ತಂಡ ಹೀಗಿದೆ
ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್ (ವಿಕೆಟ್ ಕೀಪರ್), ಶಮರ್ ಬ್ರೂಕ್ಸ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಓಬೆಡ್ ಮೆಕಾಯ್, ಕೀಮೋ ಪಾಲ್, ರೊಮಾರಿಯೋ ಶೆಫರ್ಡ್, ಓಡಿಯನ್ ಸ್ಮಿತ್, ಡೆವೊನ್ ಥಾಮಸ್, ಹೇಡನ್ ವಾಲ್ಷ್ ಜೂನಿಯರ್. : ಡೊಮಿನಿಕ್ ಡ್ರೇಕ್ಸ್

ಏಕದಿನ ತಂಡ ಹೀಗಿದೆ
ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್ (ವಿಕೆಟ್ ಕೀಪರ್), ಶಮರ್ ಬ್ರೂಕ್ಸ್, ಕೀಸಿ ಕಾರ್ಟಿ, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಕೇಶ್ ಮೋಟಿ, ಕೀಮೋ ಪಾಲ್, ಆಂಡರ್ಸನ್ ಫಿಲಿಪ್, ರೋವ್ಮನ್ ಪೊವೆಲ್, ಜೇಡನ್ ಸೀಲ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications