Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಂ ಇಂಡಿಯಾ ವಿರುದ್ಧದ ಸರಣಿಗೆ ವಿಂಡೀಸ್ ತಂಡ ಪ್ರಕಟ

ಕಿಂಗ್ಸ್ ಟನ್, ಜೂನ್ 19 : ಇದೇ ಜೂನ್ 23ರಿಂದ ಭಾರತದ ವಿರುದ್ಧ ಆರಂಭಗೊಳ್ಳಲಿರುವ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗೆ ವೆಸ್ಟ್‌ ಇಂಡೀಸ್ ಕ್ರಿಕೆಟ್ ಮಂಡಳಿ 13 ಆಟಗಾರರ ತಂಡವನ್ನು ಪ್ರಕಟಿಸಿದೆ.

ವಿಂಡೀಸ್ ತಂಡದ ನಾಯಕರಾಗಿ ಜೇಸನ್ ಹೋಲ್ಡರ್ ಮುಂದುವರಿದಿದ್ದು, ಆಫ್ಘಾನಿಸ್ತಾನ ಸರಣಿಗೆ ಆಯ್ಕೆ ಮಾಡಲಾಗಿದ್ದ ತಂಡವನ್ನೇ ಪ್ರಕಟಿಸಲಾಗಿದೆ. ಆಫ್ಘಾನಿಸ್ತಾನ ಸರಣಿ ವೇಳೆ ಗಾಯಗೊಂಡಿದ್ದ ವೇಗಿ ಶಾನನ್ ಗೇಬ್ರಿಯಲ್‌ ಗೆ ವಿಶ್ರಾಂತಿ ನೀಡಲಾಗಿದೆ.

West Indies announces squad for first two ODIs against India

ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಭಾರತ ಸೋಲಿನ ಬಳಿಕ ವೆಸ್ಟ್ ಇಂಡಿಸ್ ಸರಣಿಯತ್ತ ಗಮನ ಹರಿಸಿದೆ. ವೆಸ್ಟ್ ಇಂಡಿಸ್ ತಂಡ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಅರ್ಹತೆಯನ್ನೇ ಕಳೆದುಕೊಂಡಿತ್ತು.

ಮೇಲ್ನೋಟಕ್ಕೆ ವೆಸ್ಟ್ ಇಂಡಿಸ್ ತಂಡವು ಸಾಕಷ್ಟು ಯುವ ಆಟಗಾರರನ್ನು ಹೊಂದಿದ್ದರೂ, ಯಾವುದೇ ಸಂದರ್ಭದಲ್ಲೂ ಅಚ್ಚರಿ ಫಲಿತಾಂಶ ನೀಡುವ ಸಾಮರ್ಥ್ಯ ಹೊಂದಿದೆ. ವಿಂಡೀಸ್ ತನ್ನ ತವರಿನಲ್ಲಿ ವಿರಾಟ್ ಕೊಹ್ಲಿ ಪಡೆ ವಿರುದ್ಧ 5 ಏಕದಿನ ಹಾಗೂ ಒಂದು ಟಿ20 ಪಂದ್ಯದ ಸರಣಿಯನ್ನು ಆಡಲಿದೆ.

ವಿಂಡೀಸ್ ತಂಡದ : ಜೇಸನ್ ಹೋಲ್ಡರ್ (ನಾಯಕ), ದೇವೇಂದ್ರ ಬಿಶೊ, ಜೋನಾಥಾನ್ ಕಾರ್ಟರ್, ರಸ್ಟನ್ ಚೇಸ್, ಮಿಗುಯೆಲ್ ಕಮಿನ್ಸ್, ಶಾಯಿ ಹೋಪ್ (ಕೀಪರ್), ಅಲ್ಜಾರಿ ಜೋಸೆಫ್, ಇವಿನ್ ಲೂಯಿಸ್, ಜೇಸನ್ ಮೊಹಮ್ಮದ್, ಆಶ್ಲೆ ನರ್ಸ್, ಕೀರನ್ ಪೊವೆಲ್, ರೊವ್ಮನ್ ಪೊವೆಲ್, ಕೆಸ್ರಿಕ್ ವಿಲಿಯಮ್ಸ್.

ಭಾರತ ತಂಡದ : ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರಿಶಬ್ ಪಂತ್, ಅಜಿಂಕ್ಯ ರಹಾನೆ, ಎಂ.ಎಸ್ ಧೋನಿ, ಯುವರಾಜ್ ಸಿಂಗ್, ಕೇದಾರ್ ಜಾಧವ್, ಹಾರ್ಧಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ದಿನೇಶ್ ಕಾರ್ತಿಕ್.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+