Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಮೂರನೇ ಟ್ರೋಫಿ ಮೇಲೆ ಕಣ್ಣಿಟ್ಟ ವೆಸ್ಟ್ ಇಂಡೀಸ್; ಈ ಬಾರಿ ಚಾಂಪಿಯನ್ ಆಗುವ ಸಾಧ್ಯತೆ!

ಜೂನ್‌ 18 ಮಂಗಳವಾರ, ಟಿ20 ವಿಶ್ವಕಪ್ 2024ರಲ್ಲಿ ಗುಂಪು ಹಂತದ ಪಂದ್ಯಗಳು ಮುಗಿದಿವೆ. ಕೊನೆಯ ಗುಂಪು ಹಂತದ ಪಂದ್ಯ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ನಡುವೆ ನಡೆದಿತ್ತು.

ಈ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಗೆಲುವು ಸಾಧಿಸಿರುವುದು ಅಚ್ಚರಿ ಮೂಡಿಸಿದೆ. ವೆಸ್ಟ್ ಇಂಡೀಸ್ ಗೆ ಇದು ಗ್ರೂಪ್ ಹಂತದ ಗೆಲುವಾಗಿದ್ದರೂ ಇತಿಹಾಸದ ಪುಟಗಳನ್ನು ತಿರುವಿ ಹಾಕುತ್ತಿದ್ದಂತೆ ವಿಚಿತ್ರ ಕಾಕತಾಳೀಯವೊಂದು ನಡೆಯುತ್ತಿರುವಂತಿದೆ.

West Indies are likely to become T20 champions for the 3rd time this year

ವೆಸ್ಟ್ ಇಂಡೀಸ್ ತಂಡ ಈ ಬಾರಿ ಚಾಂಪಿಯನ್ ಆಗುತ್ತಿದೆ ಎನ್ನುವುದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿಯಾಗಿವೆ. ವಿಂಡೀಸ್ ತಂಡ ಗ್ರೂಪ್ ಹಂತದಲ್ಲಿ 4 ಪಂದ್ಯಗಳಲ್ಲಿ ಒಂದೂ ಸೋತಿಲ್ಲ. ಅಲ್ಲದೇ ಕೆರಿವಿಯನ್‌ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ತವರಿನಲ್ಲಿ 3ನೇ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ.

ತನ್ನ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ವಿಂಡೀಸ್ ತಂಡವು‌ ಅಫ್ಘಾನಿಸ್ತಾನ ವಿರುದ್ಧ 104 ರನ್ ಗಳ ಜಯ ಸಾಧಿಸಿದೆ. ನಿಕೋಲಸ್ ಪೂರನ್‌ ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದರು.

ಪೂರನ್‌ ಕೇವಲ 53 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 6 ಬೌಂಡರಿಗಳನ್ನು ಸಿಡಿಸುವ ಮೂಲಕ 98 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಪರಿಣಾಮ ಕೆರಿಬಿಯನ್ ತಂಡವು ಈ ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರ್ (218) ಗಳಿಸಿತು.

ಈ ಗುರಿ ಬೆನ್ನಟ್ಟಿ ಅಫ್ಘಾನಿಸ್ತಾನ ತಂಡ ಕೇವಲ 114 ರನ್‌ಗಳಿಗೆ ಆಲೌಟ್‌ ಆಯಿತು. ಇತ್ತ ಟಿ20 ವಿಶ್ವಕಪ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ಸತತ 4 ಪಂದ್ಯಗಳನ್ನು ಗೆದ್ದ ದಾಖಲೆ ಬರೆಯಿತು.

ಸತತ ಎರಡಕ್ಕಿಂತ ಹೆಚ್ಚು ಗೆಲುವು ಸಾಧಿಸಿದರೆ ಟ್ರೋಫಿ ಪಕ್ಕಾ!

ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ವೆಸ್ಟ್ ಇಂಡೀಸ್‌ನ ಸತತ ಎರಡು ಗೆಲುವುಗಳು ಯಾವಾಗಲೂ ಎದುರಾಳಿಗಳಿಗೆ ಎಚ್ಚರಿಕೆಯಾಗಿವೆ. 2012ರ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಕೆರಿಬಿಯನ್ ತಂಡ ಸತತ 3 ಪಂದ್ಯಗಳನ್ನು ಗೆದ್ದು ಪ್ರಶಸ್ತಿ ಜಯಿಸಿತ್ತು.

ಇದಾದ ಬಳಿಕ 2014ರಲ್ಲಿ ವಿಂಡೀಸ್‌ ಹ್ಯಾಟ್ರಿಕ್ ಗೆಲುವಿನೊಂದಿಗೆ ಸೆಮಿಫೈನಲ್ ತನಕ ಟಿಕೆಟ್ ಪಡೆದಿತ್ತು. ಅಷ್ಟೇ ಅಲ್ಲ, 2016ರಲ್ಲಿ ಮತ್ತೊಮ್ಮೆ ಹ್ಯಾಟ್ರಿಕ್ ಗೆಲುವಿನ ಮೂಲಕ ಟ್ರೋಫಿ ಗೆದ್ದುಕೊಂಡಿತ್ತು.

ಈ ಬಾರಿ ವಿಂಡೀಸ್ ತಂಡ ಗೆಲುವಿನ ಫೋರ್ ಬಾರಿಸಿದ್ದು, ಇದೇ ರೀತಿ ವಿಂಡೀಸ್‌ ಗೆಲುವಿನ ಯಾತ್ರೆ ಮುಂದುವರಿದರೆ ಈ ಬಾರಿಯೂ ಆತಿಥೇಯರು ಟ್ರೋಫಿ ಕೈವಶ ಮಾಡಿಕೊಳ್ಳಲುವುದರಲ್ಲಿ ಯಾವುದೇ ಅನುಮಾನವಿಲ್ಲ.

ಟಿ20 ವಿಶ್ವಕಪ್‌ನಲ್ಲಿ ವಿಂಡೀಸ್ ಸತತ ಗೆಲುವುಗಳು

2024- 4* ಗೆಲುವು

2012- 3 ಗೆಲುವು (ಚಾಂಪಿಯನ್)

2014- 3 ಗೆಲುವು (ಸೆಮಿಫೈನಲ್)

2016- 3 ಗೆಲುವು (ಚಾಂಪಿಯನ್)

Story first published: Tuesday, June 18, 2024, 19:49 [IST]
Other articles published on Jun 18, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+