ಪ್ರವಾಸ ಸರಣಿಗಾಗಿ ಇಂಗ್ಲೆಂಡ್‌ಗೆ ಬಂದಿಳಿದ ವೆಸ್ಟ್ ಇಂಡೀಸ್ ತಂಡ

ಲಂಡನ್, ಜೂನ್ 9: ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಮಂಗಳವಾರ (ಜೂನ್ 9) ಇಂಗ್ಲೆಂಡ್‌ಗೆ ಬಂದಿಳಿದಿದೆ. ಸರಣಿಯ ಮೂರೂ ಟೆಸ್ಟ್ ಪಂದ್ಯಗಳು ವೀಕ್ಷರಿಲ್ಲದ ಮೈದಾನದಲ್ಲಿ ನಡೆಯಲಿದೆ. ಪ್ರವಾಸ ಸರಣಿಗಾಗಿ ಬಂದಿರುವ 39 ಮಂದಿಯ (25 ಜನ ಆಟಗಾರರು ಸೇರಿ) ಕೊರೊನಾ ಪರೀಕ್ಷಾ ಫಲಿತಾಂಶ ನೆಗೆಟಿವ್ ಬಂದಿದೆ.
ವೆಸ್ಟ್ ಇಂಡೀಸ್ ಪ್ರವಾಸ ತಂಡದಲ್ಲಿರುವ ಎಲ್ಲರೂ ಅವರ ಹೊಸ ಬೇಸ್ ಓಲ್ಡ್ ಟ್ರಾಫರ್ಡ್‌ನಲ್ಲಿ ಮತ್ತೆ ಕೊರೊನಾವೈರಸ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಆಟಗಾರರೆಲ್ಲ ತಮ್ಮ 7 ವಾರಗಳ ತಂಗುವಿಕೆಯಲ್ಲಿ ಜೈವಿಕ ಸುರಕ್ಷಿತ ಪರಿಸರದಲ್ಲಿ ಇರಲಿದ್ದಾರೆ ಮತ್ತು ಅಭ್ಯಾಸ ನಡೆಸಲಿದ್ದಾರೆ.
ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್‌ಗೆ ಬಂದಿಳಿದಿರುವುದನ್ನು ಇಂಗ್ಲೆಂಡ್ ಕ್ರಿಕೆಟ್ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ತಿಳಿಸಿದೆ. 'ಇಂಗ್ಲೆಂಡ್‌ಗೆ ಬಂದಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಸ್ವಾಗತ. ನೀವು ಇಲ್ಲಿಗೆ ಬಂದಿರುವುದಕ್ಕೆ ನಾವು ಸಂತೋಷಪಡುತ್ತೇವೆ ಮತ್ತು ನಮ್ಮ ಟೆಸ್ಟ್ ಸರಣಿಯನ್ನು ಪ್ರಾರಂಭಿಸಲು ಕಾತರದಿಂದ ಕಾಯುತ್ತಿದ್ದೇವೆ,' ಎಂದು ಟ್ವೀಟ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ಬರೆದುಕೊಂಡಿದೆ.
ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್, ಟೆಸ್ಟ್ ಸರಣಿ ಪೂರ್ಣ ವೇಳಾಪಟ್ಟಿ
• 1ನೇ ಟೆಸ್ಟ್: 8-12 ಜುಲೈ, ಏಜಸ್ ಬೌಲ್.
• 2ನೇ ಟೆಸ್ಟ್: 16-20 ಜುಲೈ, ಎಮಿರೇಟ್ಸ್ ಓಲ್ಡ್ ಟ್ರ್ಯಾಫೋರ್ಡ್.
• 3ನೇ ಟೆಸ್ಟ್: 24-28 ಜುಲೈ, ಎಮಿರೇಟ್ಸ್ ಓಲ್ಡ್ ಟ್ರ್ಯಾಫೋರ್ಡ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications