For Quick Alerts
ALLOW NOTIFICATIONS  
For Daily Alerts
 

ಹೋಲ್ಡರ್ ದಾಳಿಗೆ ನಲುಗಿದ ಬಾಂಗ್ಲಾ: ವಿಂಡೀಸ್‌ಗೆ ಬೃಹತ್ ಮುನ್ನಡೆ

west indies bangladesh 2nd test day 2 report

ಜಮೈಕಾ, ಜುಲೈ 14: ವೆಸ್ಟ್ ಇಂಡೀಸ್ ವಿರುದ್ಧದ ಎರಡನೆಯ ಟೆಸ್ಟ್‌ನಲ್ಲಿಯೂ ಬಾಂಗ್ಲಾದೇಶದ ಕಳಪೆ ಪ್ರದರ್ಶನ ಮುಂದುವರಿದಿದೆ.

ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ಅವರ ವೇಗದ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ, ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 149 ರನ್‌ಗಳಿಗೆ ಆಲೌಟ್ ಆಗಿದೆ.

ಶುಕ್ರವಾರದ ದಿನದಾಂತ್ಯಕ್ಕೆ ಎರಡನೆಯ ಇನ್ನಿಂಗ್ಸ್ ಆರಂಬಿಸಿರುವ ವೆಸ್ಟ್ ಇಂಡೀಸ್ 1 ವಿಕೆಟ್ ಕಳೆದುಕೊಂಡು 19 ರನ್ ಗಳಿಸಿದ್ದು, 224 ರನ್‌ಗಳ ಮುನ್ನಡೆ ಸಾಧಿಸಿದೆ.

ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಟಗಾರ ಕ್ರೆಗ್ ಬ್ರಾಥ್‌ವೇಟ್ ಅವರ ಶತಕ ಹಾಗೂ ಶಿಮ್ರೊನ್ ಹೆಟ್ಮೇರ್ ಅವರ ಅರ್ಧಶತಕದ ನೆರವಿನಿಂದ 354 ರನ್‌ ಗಳಿಸಿತು.

ಮೊದಲ ಟೆಸ್ಟ್‌ನಲ್ಲಿ ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಬಾಂಗ್ಲಾ ಆಟಗಾರರು, ಎರಡನೆಯ ಪಂದ್ಯದಲ್ಲಿಯೂ ಅದೇ ಕಳಪೆಯಾಟ ಮುಂದುವರಿಸಿದರು.

ಜೇಸನ್ ಹೋಲ್ಡರ್ ದಾಳಿ ಎದುರಿಸುವಲ್ಲಿ ವಿಫಲವಾದ ಬಾಂಗ್ಲಾ, ಎದುರಾಳಿಗಳಿಗೆ ಬೃಹತ್ ಮುನ್ನಡೆ ಬಿಟ್ಟುಕೊಟ್ಟಿತು.

ಆರಂಭಿಕ ಆಟಗಾರ ತಮಿಮ್ ಇಕ್ಬಾಲ್ ಮಾತ್ರ 47 ರನ್ ಗಳಿಸಿ ಕೊಂಚ ಪ್ರತಿರೋಧ ತೋರಿದರು.

205 ರನ್‌ಗಳ ಮುನ್ನಡೆ ಪಡೆದುಕೊಂಡ ವಿಂಡೀಸ್, ಫಾಲೊಆನ್ ಹೇರದೆ ಎರಡನೆಯ ಇನ್ನಿಂಗ್ಸ್‌ ಆರಂಭಿಸಿತು. ಆರಂಭದಲ್ಲಿಯೇ ಕ್ರೆಗ್ ಬ್ರಾಥ್‌ವೇಟ್ ಅವರ ವಿಕೆಟ್ ಕಳೆದುಕೊಂಡಿದ್ದರೂ ವಿಂಡೀಸ್ ಸುಸ್ಥಿತಿಯಲ್ಲಿದೆ.

ಇನ್ನೂ ಮೂರು ದಿನಗಳ ಆಟ ಬಾಕಿ ಇರುವುದರಿಂದ ಬಾಂಗ್ಲಾದೇಶ ಈ ಪಂದ್ಯವನ್ನು ಉಳಿಸಿಕೊಳ್ಳಲು ಭಾರಿ ಹೋರಾಟ ನಡೆಸಬೇಕಿದೆ.

ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್: 354/10 (112 ಓವರ್) & 19/1 (9 ಓವರ್) ಕ್ರೆಗ್ ಬ್ರಾಥ್‌ವೇಟ್ 110, ಶಿಮ್ರೊನ್ ಹೆಟ್ಮೇರ್ 86, ಜೇಸನ್ ಹೋಲ್ಡರ್ 33*, ಮೆಹದಿ ಹಸನ್ 93/5, ಅಬು ಜಾಯೆದ್ 38/3, ತೈಜುಲ್ ಇಸ್ಲಾಮ್ 82/2

ಬಾಂಗ್ಲಾದೇಶ: 149/10 (46.1 ಓವರ್) ತಮಿಮ್ ಇಕ್ಬಾಲ್ 47, ಶಕಿಬ್ ಅಲ್ ಹಸನ್ 32, ಮುಷ್ಪೀಕುರ್ ರಹೀಮ್ 24, ಜೇಸನ್ ಹೋಲ್ಡರ್ 44/5, ಶನೊನ್ ಗ್ಯಾಬ್ರಿಯಲ್ 19/2, ಕೀಮೊ ಪೌಲ್ 25/2

Story first published: Saturday, July 14, 2018, 12:18 [IST]
Other articles published on Jul 14, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+