Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಗೆ ವಿಂಡೀಸ್ ಸ್ಟಾರ್ ಬ್ಯಾಟ್ಸ್ಮನ್ ಗೇಲ್ ನಿರ್ಧಾರ!

ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಗೆ ವಿಂಡೀಸ್ ಸ್ಟಾರ್ ಬ್ಯಾಟ್ಸ್ಮನ್ ಗೇಲ್ ನಿರ್ಧಾರ! | Oneindia Kannada
West Indies batsman Chris Gayle to retire from ODIs after World Cup

ಆ್ಯಂಟಿಗುವಾ, ಫೆಬ್ರವರಿ 18: ವೆಸ್ಟ್ ಇಂಡೀಸ್‌ನ ಅನುಭವಿ, ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್‌ ಗೇಲ್‌ ಅವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಗೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಈ ವಿಚಾರವನ್ನು ಭಾನುವಾರ (ಫೆಬ್ರವರಿ 17) ತಿಳಿಸಿದೆ.

ಸಿಕ್ಸ್ ಬಾರಿಸುವುದಕ್ಕೆ ಖ್ಯಾತಿಯಾಗಿದ್ದ ವಿಂಡೀಸ್ ದೈತ್ಯ, 39ರ ಹರೆಯದ ಗೇಲ್, ಈ ವರ್ಷ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಬಳಿಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಕಳೆದ ಜುಲೈನಲ್ಲಿ ಕಡೆಯಸಾರಿ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದ ಗೇಲ್, ಬುಧವಾರ (ಫೆ.20) ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯಕ್ಕಾಗಿ ಮೈದಾನಕ್ಕಿಳಿಯಲಿದ್ದಾರೆ.

ಒಟ್ಟು 284 ಏಕದಿನ ಪಂದ್ಯಗಳಲ್ಲಿ 9,727 ರನ್ ಗಳಿಸಿದ ದಾಖಲೆ ಯುನಿವರ್ಸ್ ಬಾಸ್ ಕ್ರಿಸ್ ಹೆಸರಿನಲ್ಲಿದೆ. ಇನ್ನು 677 ರನ್ ಗಳಿಸಿದರೆ ಗೇಲ್ ಅವರು ವೆಸ್ಟ್ ಇಂಡೀಸ್ ದಂತಕತೆ ಬ್ರಿಯಾನ್ ಲಾರಾ ಅವರ ಏಕದಿನ ಸರ್ವಕಾಲಿಕ ದಾಖಲೆಯನ್ನು ಹಿಮ್ಮೆಟ್ಟಿಸಲಿದ್ದಾರೆ. ಮೇ 30ರಂದು ಆರಂಭಗೊಳ್ಳುವ ವಿಶ್ವಕಪ್ ವೇಳೆ ಈ ಸಾಧನೆ ಮೆರೆಯುವ ಯೋಜನೆ ಗೇಲ್ ಅವರದ್ದು.

ಟಿ20 ಸ್ಪೆಷಾಲಿಸ್ಟ್ ಆಗಿ ಗುರುತಿಸಿಕೊಂಡಿರುವ ಕ್ರಿಸ್‌ಗೇಲ್ 2014ರಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು. ಈ ತಿಂಗಳಾರಂಭದಲ್ಲಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ ಟಿ20 ಪಂದ್ಯದಲ್ಲಿ ಗೇಲ್ ಪಾಲ್ಗೊಂಡಿದ್ದರು. 1999ರಲ್ಲಿ ಅಂತಾರಾಷ್ಟ್ರೀಯ ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದ ಕ್ರಿಸ್ ಒಟ್ಟು 23 ಏಕದಿನ ಶತಕಗಳನ್ನು ಬಾರಿಸಿದ್ದಾರೆ. ನಾಲ್ಕು ವರ್ಷಗಳಿಗೆ ಹಿಂದೆ ಜಿಂಬಾಬ್ವೆ ವಿರುದ್ಧ ಬಾರಿಸಿದ್ದ ಚೊಚ್ಚಲ ವಿಶ್ವಕಪ್ ದ್ವಿಶತಕವೂ ಇದರಲ್ಲಿ ಸೇರಿದೆ.

Story first published: Monday, February 18, 2019, 10:08 [IST]
Other articles published on Feb 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+