For Quick Alerts
ALLOW NOTIFICATIONS  
For Daily Alerts
 

WI vs AUS Test: ಮೊದಲ ದಿನ ಬಿದ್ದ 14 ವಿಕೆಟ್‌

ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ರನ್ನರ್‌ ಅಪ್‌ ಆಸ್ಟ್ರೇಲಿಯಾ, ವೆಸ್ಟ್‌ ಇಂಡೀಸ್‌ ವಿರುದ್ಧ ರನ್‌ ಕಲೆ ಹಾಕಲು ಪರದಾಟ ನಡೆಸಿದೆ. ಬ್ರಿಡ್ಜ್‌ಟೌನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟ್ ಮಾಡಿತು. ಮೊದಲ ದಿನದಾಟದಲ್ಲಿ ಒಟ್ಟು 14 ವಿಕೆಟ್‌ಗಳು ಬಿದ್ದವು. ಈ ಪಂದ್ಯದಲ್ಲಿ ಬೌಲರ್‌ಗಳು ಮೆರೆದಾಟ ನಡೆಸಿದರು. ಆತಿಥೇಯ ತಂಡದ ಜೇಡನ್ ಸೀಲ್ಸ್, ಶಮರ್ ಜೋಸೆಫ್ ಬಿಗುವಿನ ದಾಳಿಗೆ ಆಸೀಸ್‌ ಬ್ಯಾಟರ್‌ಗಳು ಕಂಗಾಲಾದರು.

ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 180 ರನ್‌ ಕಲೆ ಹಾಕಿತು. ಮೊದಲ ಇನಿಂಗ್ಸ್‌ ಆರಂಭಿಸಿರುವ ವಿಂಡೀಸ್‌ 57 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿತು. ಆತಿಥೇಯ ತಂಡದ ಪರ ಬ್ರೆಂಡನ್‌ ಕಿಂಗ್‌ (ಅಜೇಯ 20) ಹಾಗೂ ರೋಸ್ಟನ್‌ ಚೇನ್‌ (ಅಜೇಯ 1) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

West Indies Bowlers Dominate Australia on Day 1 of Bridgetown Test

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾದ ಟಾಪ್ ಆರ್ಡರ್‌ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಆಸೀಸ್‌ 3 ವಿಕೆಟ್‌ಗೆ 22 ರನ್‌ ಸೇರಿಸಿ ಸಂಕಷ್ಟದಲ್ಲಿತ್ತು. ಆಗ ತಂಡಕ್ಕೆ ಆಧಾರವಾಗಿದ್ದು ಭರವಸೆಯ ಬ್ಯಾಟರ್ ಉಸ್ಮಾನ್‌ ಖವಾಜ ಹಾಗೂ ಟ್ರಾವಿಸ್ ಹೆಡ್‌. ಈ ಜೋಡಿ ತಂಡ ಉತ್ತಮ ಮೊತ್ತ ಕಲೆ ಹಾಕಬಹುದು ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ ಈ ಜೋಡಿಗೆ ಜೋಸೆಫ್‌ ಬ್ರೇಕ್‌ ಹಾಕಿದರು.

4ನೇ ವಿಕೆಟ್‌ಗೆ 89 ರನ್ ಜೊತೆಯಾಟ

ನಾಲ್ಕನೇ ವಿಕೆಟ್‌ಗೆ ಟ್ರಾವಿಸ್ ಹೆಡ್‌ ಹಾಗೂ ಖವಾಜ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 147 ಎಸೆತಗಳಲ್ಲಿ 89 ರನ್‌ ಸೇರಿಸಿತು. ಖವಾಜ 4 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 47 ರನ್‌ ಬಾರಿಸಿ ಔಟ್ ಆದರು. ಸ್ಟಾರ್ ಆಟಗಾರ ಟ್ರಾವಿಸ್ ಹೆಡ್‌ ಸಹ 9 ಬೌಂಡರಿಗಳ ನೆರವಿನಿಂದ 59 ರನ್‌ ಬಾರಿಸಿದರು. ಉಳಿದಂತೆ ಆಸೀಸ್‌ ಪರ ಬ್ಯೂ ವೆಬ್‌ಸ್ಟಾರ್‌ 11, ನಾಯಕ ಪ್ಯಾಟ್‌ ಕಮಿನ್ಸ್‌ 28 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಜೇಡನ್ ಸೀಲ್ಸ್‌ಗೆ 5 ವಿಕೆಟ್‌

ವೆಸ್ಟ್‌ ಇಂಡೀಸ್‌ ಪರ ಜೇಡನ್ ಸೀಲ್ಸ್ ಅಮೋಘ ಬೌಲಿಂಗ್‌ ನಡೆಸಿ ತಂಡಕ್ಕೆ ನೆರವಾದರು. ಇವರು 15.5 ಓವರ್‌ ಬೌಲ್ ಮಾಡಿ 60 ರನ್‌ ನೀಡಿ 5 ವಿಕೆಟ್‌ ಕಬಳಿಸಿದರು. ಶಮರ್ ಜೋಸೆಫ್ 46 ರನ್‌ ನೀಡಿ 4 ವಿಕೆಟ್‌ ಪಡೆದರು.

ಆರಂಭಿಕ ಆಘಾತ

ಮೊದಲ ಇನಿಂಗ್ಸ್‌ ಆರಂಭಿಸಿದ ವೆಸ್ಟ್‌ ಇಂಡೀಸ್ ತಂಡದ ಆರಂಭ ಸಹ ಕಳಪೆಯಾಗಿತ್ತು. ಯಾವೊಬ್ಬ ಆರಂಭಿಕ ಆಟಗಾರ ಡಬಲ್‌ ಡಿಜಿಟ್ ಮುಟ್ಟಲೇ ಇಲ್ಲ. ಮೂರನೇ ವಿಕೆಟ್‌ಗೆ ಕೀಸಿ ಕಾರ್ಟಿ (20) ಹಾಗೂ ಕಿಂಗ್‌ ಜೋಡಿ 36 ರನ್‌ ಸೇರಿಸಿ ಭರವಸೆ ಮೂಡಿಸಿತು. ಆದರೆ ಈ ಜೋಡಿ ದೊಡ್ಡ ಆಟ ಆಡಲಿಲ್ಲ.

Story first published: Thursday, June 26, 2025, 8:50 [IST]
Other articles published on Jun 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+