ಭಾರತ ವಿರುದ್ಧದ 2 ಏಕದಿನ ಪಂದ್ಯಗಳಿಂದ ಸ್ಟುವರ್ಟ್ ಲಾ ಅಮಾನತು!

ಬೆಂಗಳೂರು, ಅಕ್ಟೋಬರ್ 16: ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ವೆಸ್ಟ್ ಇಂಡೀಸ್ ಕೋಚ್ ಸ್ಟುವರ್ಟ್ ಲಾ ಅವರು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಎರಡು ಏಕದಿನ ಪಂದ್ಯಗಳಿಂದ ಅಮಾನತುಗೊಂಡಿದ್ದಾರೆ. ನಿಯಮ ಉಲ್ಲಂಘಿಸಿದಕ್ಕಾಗಿ ಸ್ಟುವರ್ಟ್ 3 ಡಿಮೆರಿಟ್ ಪಾಯಿಂಟ್ಸ್ ಪಡೆದಿದ್ದಾರೆ.
24 ತಿಂಗಳ ಕಾಲಾವಧಿಯಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದಕ್ಕಾಗಿ ಸ್ಟುವರ್ಟ್ ಅವರ ಡಿ-ಮೆರಿಟ್ ಪಾಯಿಂಟ್ಸ್ (ನಕಾರಾತ್ಮಕ ಅಂಕಗಳು) ನಾಲ್ಕಕ್ಕೇರಿರುವುದು ಎರಡು ಪಂದ್ಯಗಳಿಂದ ಅವರನ್ನು ಅಮಾನತುಗೊಳಿಸುತ್ತಿರುವುದಕ್ಕೆ ಕಾರಣ. ಹೀಗಾಗಿ ಸ್ಟುವರ್ಟ್ ಅವರನ್ನು ಗುವಾಹಟಿ ಮತ್ತು ವಿಶಾಖಪಟ್ನಂ ನಲ್ಲಿ ಕ್ರಮವಾಗಿ 21 ಮತ್ತು 24ನೇ ಅಕ್ಟೋಬರ್ ನಂದು ನಡೆಯಲಿದ್ದ ಏಕದಿನ ಪಂದ್ಯಗಳಿಂದ ಹೊರಗಿಡಲಾಗಿದೆ.
ಹೈದರಾಬಾದ್ ನಲ್ಲಿ ಭಾನುವಾರ (ಅಕ್ಟೋಬರ್ 14) ನಡೆದ ಪಂದ್ಯದ ವೇಳೆ ಲಾ, ನೀತಿ ಸಂಹಿತೆ ಉಲ್ಲಂಘಿಸಿದ್ದರು. ನೀತಿ ಸಂಹಿತೆಯ ಪ್ರಕಾರ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಯಾವುದೇ ಆಟಗಾರ, ಕೋಚ್ ಅಥವಾ ಅಧಿಕಾರಿ ಸಾರ್ವಜನಿಕ ಟೀಕೆ ಅಥವಾ ನಿಂದನೆ ಮಾಡುವಂತಿಲ್ಲ.
ಈ ಮೊದಲು ಡೊಮಿನಿಕಾದಲ್ಲಿ ಮೇ 2017ರಂದು ನಡೆದಿದ್ದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಸ್ಟುವರ್ಟ್ ಲಾ ಅವರು ನಿಯಮ ಉಲ್ಲಂಘಿಸಿ ಶೇ. 25ರ ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ಪಡೆದಿದ್ದರು. ಈ ಬಾರಿ ಅವರಿಗೆ ಶೇ. 100 ದಂಡ ಮತ್ತು 3 ಡಿಮೆರಿಟ್ ಪಾಯಿಂಟ್ಸ್ ನೀಡಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications