SA20: ಬಂದೂಕು ತೋರಿಸಿ ಆಟಗಾರನ ದರೋಡೆ: ಹೃದಯ ವಿದ್ರಾವಕ ಘಟನೆ
ಎಸ್‌ಎ20 ಲೀಗ್ ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ. ಈ ಲೀಗ್‌ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಎಸ್‌ಎ20 ಲೀಗ್‌ನ ನಡುವೆ ಒಬ್ಬ ಆಟಗಾರನಿಗೆ ಬಂದೂಕು ತೋರಿಸಿ ದರೋಡೆ ಮಾಡಲಾಗಿದೆ. ಈ ಘಟನೆ ಜೋಹಾನ್ಸ್‌ಬರ್ಗ್‌ನಿಂದ ವರದಿಯಾಗಿದೆ.
28 ವರ್ಷದ ಆಟಗಾರನನ್ನು ಹೋಟೆಲ್ ಹೊರಗೆ ಟಾರ್ಗೆಟ್ ಮಾಡಲಾಗಿದೆ. ಈ ಆಟಗಾರ ಎಸ್‌ಎ20 ಲೀಗ್‌ನಲ್ಲಿ ಪಾರ್ಲ್ ರಾಯಲ್ಸ್ ತಂಡದ ಭಾಗವಾಗಿದ್ದಾರೆ. ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಈ ಘಟನೆಗೆ ವೆಸ್ಟ್ ಇಂಡೀಸ್ ಅಂತಾರಾಷ್ಟ್ರೀಯ ಕ್ರಿಕೆಟಿಗ ಫ್ಯಾಬಿಯನ್ ಅಲೆನ್ ಬಲಿಯಾಗಿದ್ದಾರೆ.
ಕ್ರಿಕ್‌ಬಜ್ ವರದಿಯ ಪ್ರಕಾರ, ಜೋಹಾನ್ಸ್‌ಬರ್ಗ್‌ನ ಪ್ರಸಿದ್ಧ ಸ್ಯಾಂಡ್‌ಟನ್ ಸನ್ ಹೋಟೆಲ್ ಬಳಿ ಬಂದೂಕು ಹಿಡಿದ ದರೋಡೆಕೋರರು ಫ್ಯಾಬಿಯನ್ ಅಲೆನ್ ಅವರನ್ನು ತಡೆದಿದ್ದಾರೆ. ಅಲ್ಲದೆ ಅವರ ಫೋನ್ ಮತ್ತು ಬ್ಯಾಗ್ ಸೇರಿದಂತೆ ಅವರ ವೈಯಕ್ತಿಕ ವಸ್ತುಗಳನ್ನು ಬಲವಂತವಾಗಿ ಕಸಿದುಕೊಂಡು ಓಡಿ ಹೋಗಿದ್ದಾರೆ.

ಪಾರ್ಲ್ ರಾಯಲ್ಸ್ ತಂಡ, ಎಸ್‌ಎ20 ಲೀಗ್ ಮತ್ತು ಕ್ರಿಕೆಟ್ ವೆಸ್ಟ್ ಇಂಡೀಸ್ ತಮ್ಮ ಆಟಗಾರ ದರೋಡೆಗೆ ಒಳಗಾಗಿದ್ದನ್ನು ಧೃಡ ಪಡಿಸಿದ್ದಾರೆ. ಆದಾಗ್ಯೂ, ಅಲೆನ್‌ಗೆ ಯಾವುದೇ ಹಾನಿಯಾಗಲಿಲ್ಲ.
ಜಮೈಕಾದಿಂದ ಬಂದಿರುವ ಮುಖ್ಯ ಕೋಚ್ ಆಂಡ್ರೆ ಕೋಲಿ ಅವರು ಫ್ಯಾಬಿಯನ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್‌ನ ಉನ್ನತ ಅಧಿಕಾರಿಯೊಬ್ಬರು ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ. ಫಿನ್ ಅಲೆನ್ ಚೆನ್ನಾಗಿಯೇ ಇದ್ದಾನೆ. ಈ ಘಟನೆಯು ಇತ್ತೀಚಿನ ದಿನಗಳಲ್ಲಿ ಎಸ್‌ಎ20 ಆಟಗಾರರನ್ನು ಒಳಗೊಂಡ ಎರಡನೇ ಭದ್ರತಾ ಸಂಬಂಧಿತ ಘಟನೆಯಾಗಿದೆ.
ಆಟಗಾರರ ಸುರಕ್ಷತೆಯಲ್ಲಿ ಲೋಪ
ಇತ್ತೀಚಿನ ದಿನಗಳಲ್ಲಿ ಎಸ್‌ಎ20 ಆಟಗಾರರ ಭದ್ರತೆಯಲ್ಲಿ ಲೋಪವಾದ ಎರಡನೇ ಪ್ರಕರಣ ಇದಾಗಿದೆ. ಈ ಹಿಂದೆಯೂ ಒಂದು ಘಟನೆ ನಡೆದಿದೆ. ಇದು ಲೀಗ್‌ನ ಎರಡನೇ ಸೀಸನ್ ಆಗಿದ್ದು, ಪ್ಲೇಆಫ್ ಹಂತ ತಲುಪಿದೆ. ಈ ಘಟನೆಯಲ್ಲಿ ಕೆರಿಬಿಯನ್ ಕ್ರಿಕೆಟಿಗನಿಗೆ ಯಾವುದೇ ಹಾನಿಯಾಗಿಲ್ಲ. ಅಲೆನ್ ಗೆ ಯಾವುದೇ ಹಾನಿಯಾಗಿಲ್ಲ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮೂಲವೊಂದು ಧೃಡ ಪಡಿಸಿವೆ.
ರಾಯಲ್ಸ್ ಆಡಳಿತ ಮೌನ
ಈ ಸಂಪೂರ್ಣ ವಿಚಾರದಲ್ಲಿ ಪಾರ್ಲ್ ರಾಯಲ್ಸ್ ಮ್ಯಾನೇಜ್‌ಮೆಂಟ್ ಮೌನ ವಹಿಸಿದೆ. ಎಸ್‌ಎ20 ಲೀಗ್ ವಕ್ತಾರರು, ಪೊಲೀಸರೊಂದಿಗೆ ಮಾತನಾಡಲು ಸಲಹೆ ನೀಡಿದ್ದಾರೆ. ಘಟನೆ ನಡೆದ ಬಳಿಕ ಮ್ಯಾನೇಜ್ಮೆಂಟ್ ಸುಮ್ಮನೆ ಕುತಿದೆ.

ಫ್ಯಾಬಿಯನ್ ಅಲೆನ್ ವೆಸ್ಟ್ ಇಂಡೀಸ್ ಪರ ಇದುವರೆಗೆ 20 ಏಕದಿನ ಮತ್ತು 34 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ 20 ಏಕದಿನ ಪಂದ್ಯಗಳಲ್ಲಿ 200 ರನ್ ಹಾಗೂ 7 ವಿಕೆಟ್ ಪಡೆದಿದ್ದಾರೆ. ಅದೇ ಸಮಯದಲ್ಲಿ, ಟಿ20ಯಲ್ಲಿ ಅವರು 267 ರನ್‌ಗಳೊಂದಿಗೆ 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಫ್ಯಾಬಿಯನ್ ಅಲೆನ್ ಐಪಿಎಲ್‌ನಲ್ಲೂ ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications