Kieron Pollard Retirement : ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ವಿಂಡೀಸ್ ದಿಗ್ಗಜ ಕೀರನ್ ಪೊಲಾರ್ಡ್

ವೆಸ್ಟ್ ಇಂಡೀಸ್ ತಂಡದ ಸೀಮಿತ ಓವರ್‌ಗಳ ನಾಯಕ ಕೀರನ್ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸುದೀರ್ಘ 15 ವರ್ಷಗಳ ಅಂತಾರಾಷ್ಟ್ರೀ ಕ್ರಿಕೆಟ್‌ಗೆ ವಿದಾಯವನ್ನು ಹೇಳುತ್ತಿರುವುದಾಗಿ ಕೀರನ್ ಪೊಲಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದ್ದಾರೆ. ಪೊಲಾರ್ಡ್ ಪ್ರಸ್ತುತ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ. "ನಾನು ಎಲ್ಲಾ ಆಯ್ಕೆಗಾರರಿಗೆ ಮ್ಯಾನೇಜ್‌ಮೆಂಟ್ ತಂಡಗಳಿಗೆ ವಿಶೇಷವಾಗಿ ಕೋಚ್ ಫಿಲ್ ಸೈಮನ್ಸ್‌ಗೆ ಆಭಾರಿಯಾಗಿದ್ದೇನೆ. ಕೋಚ್ ಸೈಮನ್ಸ್ ಅವರು ನನ್ನಲ್ಲಿರುವ ಸಾಮರ್ಥ್ಯವನ್ನು ಗುರುತಿಸಿದರು. ನನ್ನ ವೃತ್ತಿ ಜೀವನದುದ್ದಕ್ಕೂ ನನ್ನ ಮೇಲೆ ಅಪಾರ ನಂಬಿಕೆಯಿಟ್ಟುಕೊಂಡಿದ್ದರು. ಇನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಕೂಡ ನನ್ನ ಮೇಲೆ ದೊಡ್ಡ ಪ್ರಮಾಣದ ನಂಬಿಕೆಯಿಟ್ಟು ನನಗೆ ನಾಯಕತ್ವದ ಜವಾಬ್ಧಾರಿ ನೀಡಿದೆ"
"ಆ ಕಾರಣದಿಂದಾಗಿಯೇ ನಾನು ನಾಯಕತ್ವವನ್ನು ವಹಿಸಿಕೊಂಡಿದ್ದೆ. ಕ್ರಿಕೆಟ್ ವೆಸ್ಟ್ ಇಂಡೀಸ್‌ನ ಅಧ್ಯಕ್ಷ ರಿಕಿ ಸ್ಕೆರಿಟ್ ಅವರಿಗೆ ನನ್ನ ಅನಂತ ಧನ್ಯವಾದವನ್ನು ತಿಳಿಸುತ್ತೇನೆ. ನನ್ನ ನಾಯಕತ್ವದ ಅವಧಿಯಲ್ಲಿ ಅವರಿಂದ ದೊರೆತ ಬೆಂಬಲಕ್ಕೆ ನಾನು ಸದಾ ಋಣಿಯಾಗಿರುತ್ತೇನೆ" ಎಂದು ಕೀರನ್ ಪೊಲಾರ್ಡ್ ವಿದಾಯದ ಪ್ರಕಟಣೆಯಲ್ಲಿ ಬರೆದುಕೊಂಡಿದ್ದಾರೆ.
2007ರಲ್ಲಿ ಕೀರನ್ ಪೊಲಾರ್ಡ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನವನ್ನು ಆರಂಭಿಸಿದ್ದರು. ಈವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 123 ಏಕದಿನ ಪಂದ್ಯಗಳನ್ನು ಆಡಿರುವ ಪೊಲಾರ್ಡ್ 101 ಟಿ20 ಪಂದ್ಯಗಳನ್ನು ಆಡಿದ್ದಾರೆ. 34ರ ಹರೆಯದ ಪೊಲಾರ್ಡ್ ಅಂತಿಮ ಅಂತಾರಾಷ್ಟ್ರೀಯ ಸರಣಿಯನ್ನು ಭಾರತದ ವಿರುದ್ಧ ಆಡಿದ್ದಾರೆ.
ಟಿ20 ಕ್ರಿಕೆಟ್ ಮಾದರಿಯಲ್ಲಿ ವಿಶ್ವದ ಸ್ಪೋಟಕ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ ಕೀರನ್ ಪೊಲಾರ್ಡ್. ಆಡಿರುವ 123 ಏಕದಿನ ಪಂದ್ಯಗಳಲ್ಲಿ 2706 ರನ್‌ಗಳಿಸಿರುವ ಪೊಲಾರ್ಡ್ 55 ವಿಕೆಟ್ ಸಂಪಾದಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ 101 ಪಂದ್ಯಗಳಲ್ಲಿ 1569 ರನ್‌ಗಳನ್ನು ಗಳಿಸಿದ್ದು 44 ವಿಕೆಟ್ ಸಂಪಾದಿಸಿದ್ದಾರೆ.
ಕೀರನ್ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯವನ್ನು ಹೇಳಿದ್ದರೂ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಮುಂದುವರಿಯುವುದು ನಿಶ್ಚಿತ. ವಿಶ್ವದಾದ್ಯಂತ ಐಪಿಎಲ್ ಸೇರಿದಂತೆ ಹಲವಾರು ಟಿ20 ಲೀಗ್‌ಗಳಲ್ಲಿ ಪೊಲಾರ್ಡ್ ಪ್ರಮುಖ ಆಕರ್ಷಣೆಯಾಗಿದ್ದು ಈ ಮಾದರಿಯಲ್ಲಿ ಅಭಿಮಾನಿಗಳು ಮತ್ತಷ್ಟು ವರ್ಷಗಳ ಕಾಲ ಪೊಲಾರ್ಡ್ ಆಟವನ್ನು ವೀಕ್ಷಿಸಬಹುದು. ಆದರೆ ವಿಂಡೀಸ್ ಪರವಾಗಿ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನು ಮುಂದುವರಿಯುವುದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications