Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೇಯಸಿಯೊಂದಿಗೆ ಎಂಗೇಜ್ ಆದ ವೆಸ್ಟ್ ಇಂಡೀಸ್ ಕ್ರಿಕೆಟಿಗ ನಿಕೋಲಸ್ ಪೂರನ್

West Indies Cricketer Nicolos Pooran announces engagement, shares picture

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಆಟಗಾರ ನಿಕೋಲಸ್ ಪೋರನ್ ತಮ್ಮ ಗೆಳತೊಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರೇಯಸಿ ಅಲಿಸ್ಸಾ ಮೈಗಲ್‌ಗೆ ಉಂಗುರ ತೊಡಿಸುತ್ತಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಈ ಸಂತಸದ ಸಂಗತಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಕಳೆದ ಎರಡು ತಿಂಗಳಿನಿಂದ ನಿಕೋಲಸ್ ಪೂರನ್ ಐಪಿಎಲ್‌ನಲ್ಲಿ ತೊಡಗಿಸಿಕೊಂಡಿದ್ದರು. ಯುಎಇನಲ್ಲಿ ನಡೆದ ಐಪಿಎಲ್‌ನಲ್ಲಿ ಪೂರನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಟೂರ್ನಿ ಮುಗಿಸಿದ ಬಳಿಕ ತಮ್ಮ ನಿಶ್ಚಿತಾರ್ಥವನ್ನು ಪೂರನ್ ಮಾಡಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ನಿಕೋಲಸ್ ಪೂರನ್ ನೇತೃತ್ವದ ಕೆಎಲ್ ರಾಹುಲ್ ಮುನ್ನಡೆಸುತ್ತಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ಲೇ ಆಫ್‌ಗೆ ಟಿಕೆಟ್ ಪಡೆಯುವಲ್ಲಿ ವಿಫವಾಗಿತ್ತು. ಆದರೆ ನಿಕೋಲಸ್ ಪೂರನ್ ಕೆಲ ಮ್ಯಾಚ್ ವಿನ್ನಿಂಗ್ ಪ್ರದರ್ಶನದ ಮೂಲಕ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಜೊತೆಗೆ ತಮ್ಮ ಅದ್ಭುತ ಫೀಲ್ಡಿಂಗ್ ಮೂಲಕ ಸಚಿನ್ ತೆಂಡೂಲ್ಕರ್ ಅವರಂತಾ ದಿಗ್ಗಜ ಆಟಗಾರನ್ನೇ ಮೆಚ್ಚಿಕೊಳ್ಳುವಂತೆ ಮಾಡಿದ್ದಾರೆ.

ಪೋರನ್ ತಮ್ಮ ನಿಶ್ಚಿತಾರ್ಥದ ಬಗ್ಗೆ ಸಂತಸವನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ "ನಮ್ಮನ್ನು ದೇವರು ಆಶೀರ್ವದಿಸಿದ್ದಾರೆ. ನಾನು ಮತ್ತು ಅಲಿಸ್ಸಾ ಮೈಗಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ನಿನ್ನನ್ನು ಇಷ್ಟಪಡುತ್ತೇನೆ ಮೈಗ್ಸ್. ನಿನ್ನನ್ನು ಪಡೆದುಕೊಮಡಿರುವೆ" ಎಂದು ಪೂರನ್ ಟ್ವೀಟ್ ಮಾಡಿದ್ದಾರೆ.

ಪೂರನ್ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಪೋಸ್ಟ್‌ಗೆ ಕ್ರಿಕೆಟ್ ದಿಗ್ಗಜರು ಶುಭಾಶಯ ಕೋರಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಅನಿಲ್ ಕುಂಬ್ಳೆ , ಜೇಸನ್ ಹೋಲ್ಡರ್, ಕಿರಾನ್ ಪೊಲಾರ್ಡ್ ಸೇರಿದಂತೆ ಹಾಲಿ ಮಾಜಿ ಆಟಗಾರರು ಶುಭ ಹಾರೈಸಿದ್ದಾರೆ.

Story first published: Tuesday, November 17, 2020, 11:29 [IST]
Other articles published on Nov 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+