Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜನವರಿಯಿಂದಲೂ ವಿಂಡೀಸ್ ಆಟಗಾರರಿಗೆ ಪಂದ್ಯದ ಸಂಭಾವನೆ ದೊರೆತಿಲ್ಲ!

West Indies cricketers not paid match fees since January

ಪೋರ್ಟ್ ಆಫ್‌ ಸ್ಪೇನ್, ಏಪ್ರಿಲ್ 23: ವೆಸ್ಟ್ ಇಂಡೀಸ್ ಆಟಗಾರರಿಗೆ ಜನವರಿ ತಿಂಗಳಿನಿಂದಲೂ ಪಂದ್ಯಗಳ ವೇತನವನ್ನೇ ನೀಡಿಲ್ಲ. ಅಲ್ಲಿನ ಆಡಳಿತ ಮಂಡಳಿ ಆರ್ಥಿಕ ಸಮಸ್ಯೆ ಎದುರಿಸುತ್ತಿರುವುದರಿಂದ ಆಟಗಾರರಿಗೆ ವೇತನ ನೀಡಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಆಟಗಾರರಿಗೆ ಪಂದ್ಯದ ವೇತನ ಪಾವತಿಸದಿರುವುದನ್ನು ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯೂಐ) ಕೂಡ ಒಪ್ಪಿಕೊಂಡಿದೆ. 'ತಿಂಗಳ ಸಂಬಳ ಮತ್ತು ಭತ್ಯೆಯನ್ನು ನೀಡಲಾಗಿದೆ. ಉಳಿಸಿಕೊಳ್ಳಲಾದ ಆಟಗಾರರು ಮತ್ತು ಪ್ರಥಮದರ್ಜೆ ಕ್ರಿಕೆಟ್‌ನ ಸುಮಾರು 8 ಸುತ್ತುಗಳ ಪಂದ್ಯಗಳಿಗೆ ಸಂಭಾವನೆ ನೀಡಲಾಗಿಲ್ಲ,' ಎಂದು ವೆಸ್ಟ್ ಇಂಡೀಸ್ ಪ್ಲೇಯರ್ಸ್ ಅಸೋಸಿಯೇಶನ್ ಮಾಹಿತಿ ನೀಡಿದೆ.

ದೊರೆತ ಮಾಹಿತಿ ಪ್ರಕಾರ, ಪುರುಷರ ರಾಷ್ಟ್ರೀಯ ತಂಡದ ಆಟಗಾರರಿಗೆ ತವರಿನಲ್ಲಿ ನಡೆದ ಪಂದ್ಯಗಳ ಸಂಭಾವನೆ ನೀಡಲಾಗಿಲ್ಲ. ಜನವರಿಯಲ್ಲಿ ಐರ್ಲೆಂಡ್‌ ವಿರುದ್ಧ ನಡೆದಿದ್ದ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳ ಸರಣಿ, ಫೆಬ್ರವರಿ-ಮಾರ್ಚ್‌ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ (3 ಏಕದಿನ, 2 ಟಿ20ಐ) ಸರಣಿಯ ಸಂಭಾವನೆ ನೀಡಲಾಗಿಲ್ಲ.

ವೆಸ್ಟ್ ಇಂಡೀಸ್ ಮಹಿಳಾ ತಂಡಕ್ಕೆ ಕೂಡ ಕಳೆದ ಫೆಬ್ರವರಿ-ಮಾರ್ಚ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಪಂದ್ಯದ ನಾಲ್ಕು ಪಂದ್ಯಗಳಿಗೆ ವೇತನ ನೀಡುವುದು ಬಾಕಿಯಿದೆ ಎಂದು ತಿಳಿದುಬಂದಿದೆ. 2018ರಲ್ಲಿ ಬಾಂಗ್ಲಾ ಮತ್ತು ಶ್ರೀಲಂಕಾದ ಆತಿಥ್ಯ ವಹಿಸಿಕೊಂಡಿದ್ದರಿಂದ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಕ್ರಿಕೆಟ್ ವಿಂಡೀಸ್‌ನ ಸಿಇಒ ಜಾನಿ ಗ್ರೇವ್ ತಿಳಿಸಿದ್ದಾರೆ.

Story first published: Thursday, April 23, 2020, 18:05 [IST]
Other articles published on Apr 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+