ಐಪಿಎಲ್ ಮುಂದೂಡಿಕೆ: ಸುರಕ್ಷಿತವಾಗಿ ತವರಿಗೆ ಮರಳಿದ ವೆಸ್ಟ್ ಇಂಡೀಸ್ ಕ್ರಿಕೆಟಿಗರು

ಇತ್ತೀಚೆಗಷ್ಟೇ ಮುಂದೂಡಿಕೆಯಾದ ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗಿದ್ದ ವೆಸ್ಟ್ ಇಂಡೀಸ್ ಕ್ರಿಕೆಟಿಗರು ತವರಿಗೆ ವಾಪಾಸಾಗಿದ್ದಾರೆ. ಈ ಬಗ್ಗೆ ಕ್ರಿಕೆಟ್ ವೆಸ್ಟ್ ಇಂಡೀಸ್‌ನ ಸಿಇಒ ಜಾನಿ ಗ್ರೇವ್ ಪ್ರತಿಕ್ರಿಯಿಸಿದ್ದು ಬಿಸಿಸಿಐ ಹಾಗೂ ಆಯಾದ ಫ್ರಾಂಚೈಸಿಗಳ ಪ್ರಯತ್ನದಿಂದಾಗಿ ಆಟಗಾರರು ಸುರಕ್ಷಿತವಾಗಿ ತವರಿಗೆ ತಲುಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಾರಿಯ ಐಪಿಎಲ್‌ಅನ್ನು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಿಕೊಂಡು ಆಯೋಜಿಸಲಾಗಿತ್ತು. ಆದರೆ ಬಯೋಬಬಲ್‌ನ ಒಳಗೆ ಕೊರೊನಾ ವೈರಸ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿಮೇ 4ರಂದು ಈ ಬಾರಿಯ ಐಪಿಎಲ್ ಟೂರ್ನಿಯನ್ನು ಮುಂದೂಡುವ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದೆ.
ವೆಸ್ಟ್ ಇಂಡೀಸ್ ತಂಡದ ಕ್ರಿಕೆಟಿಗರಾದ ಕಿರಾನ್ ಪೊಲಾರ್ಡ್, ಜೇಸನ್ ಹೋಲ್ಡರ್, ಸುನಿಲ್ ನರೈನ್, ಆಂಡ್ರೆ ರಸೆಲ್, ಡ್ವೇಯ್ನ್ ಬ್ರಾವೋ, ನಿಕೋಲಸ್ ಪೂರನ್, ಶಿಮ್ರಾನ್ ಹೇಟ್ಮೇಯರ್, ಫ್ಯಾಬಿಯನ್ ಅಲೆನ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗಿದ್ದರು.
"ನಮ್ಮ ಆಟಗಾರರು ಹಾಗೂ ಐಪಿಎಲ್‌ನಲ್ಲಿ ಭಾಗಿಯಾಘಿದ್ದ ಇತರೆ ಸಿಬ್ಬಂದಿಗಳು ಕೆರಿಬಿಯನ್ ನಾಡಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಅತಿ ಶೀಘ್ರವಾಗಿ ಇವರೆಲ್ಲರೂ ತವರಿಗೆ ಮರಳಲು ಸಾಧ್ಯವಾಗುವಂತೆ ಮಾಡಿದ ಬಿಸಿಸಿಐ ಹಾಗೂ ಫ್ರಾಂಚೈಸಿಗಳಿಗೆ ನಾವು ಆಭಾರಿಗಳಾಗಿದ್ದೇವೆ" ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಟ್ವೀಟ್ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications