ಭರವಸೆಯ ಆಲ್‌ರೌಂಡರ್ ಜೇಸನ್ ಹೋಲ್ಡರ್ ಅವರು ಬಿಗುವಿನ ದಾಳಿ ಹಾಗೂ ಶಾಯ್ ಹೋಪ್ ಅವರ ಅರ್ಧಶತಕದ ಬಲದಿಂದ ಟಿ20 ವಿಶ್ವಕಪ್‌ನ ಸಿ ಗುಂಪಿನ ಪಂದ್ಯದಲ್ಲಿ 9 ವಿಕೆಟ್ ಗಳಿಂದ ನೇಪಾಳ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡದ ಆರಂಭಿಸಿದ ನೇಪಾಳ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಕುಶಾಲ್ ಭುರ್ಟೆಲ್ (1), ಆಸಿಫ್ ಶೇಖ್ (11), ರೋಹಿತ್ ಪೌಡೆಲ್ (5) ಆರಿಫ್ ಶೇಖ್ (2) ರನ್ ಕಲೆ ಹಾಕುವಲ್ಲಿ ವಿಫಲರಾದರು. ತಂಡದ ಮೊತ್ತ 24 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ದೀಪೇಂದ್ರ ಸಿಂಗ್ ಐರಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 58 ರನ್ ಸಿಡಿಸಿದರು. ಲೋಕೇಶ್ ಬಾಂ 13 ರನ್ ಬಾರಿಸಿದರು. ಗುಲ್ಸನ್ ಝಾ (11), ಸೋಂಪಲ್ ಕಾಮಿ ಅಜೇಯ 26 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ನೇಪಾಳ 8 ವಿಕೆಟ್‌ಗೆ 133 ರನ್ ಸೇರಿಸಿತು. ವೆಸ್ಟ್ ಇಂಡೀಸ್ ಪರ ಜೇಸನ್ ಹೋಲ್ಡರ್ 4 ವಿಕೆಟ್ ಪಡೆದು ಆರ್ಭಟಿಸಿದರು.
ಗುರಿಯನ್ನು ಬೆನ್ನಟ್ಟಿದ ನೇಪಾಳ ತಂಡದ ಬ್ರಾಂಡನ್ ಕಿಂಗ್ ಹಾಗೂ ಶೈ ಹೋಪ್ ಜೋಡಿ 41 ರನ್‌ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಬ್ರಾಂಡನ್ ಕಿಂಗ್ 4 ಬೌಂಡರಿ ನೆರವಿನಿಂದ 22 ರನ್ ಸಿಡಿಸಿದರು. 43 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಶಾಯ್ ಹೋಪ್ ಹಾಗೂ ಶಿಮ್ರೋನ್ ಹೆಟ್ಮೆಯರ್ ಸೊಗಸಾದ್ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಈ ಜೋಡಿ ತಂಡದ ಗೆಲುವಿಗೆ ಅಗತ್ಯವಿದ್ದ ರನ್‌ಗಳನ್ನು ಕಲೆ ಹಾಕಿತು. ಆರಂಭಿಕ ಶಾಯ್ ಹೋಪ್ 5 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅಜೇಯ 61 ರನ್ ಚಚ್ಚಿದರು. ಶ್ರಿಮ್ರೋನ್ ಹೆಟ್ಮೆಯರ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 46 ರನ್ ಬಾರಿಸಿದರು. ಅಂತಿಮವಾಗಿ ವೆಸ್ಟ್ ಇಂಡೀಸ್ 15.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 134 ರನ್ ಸೇರಿಸಿ ಜಯ ಸಾಧಿಸಿತು.
ನಮೀಬಿಯಾ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಯುಎಸ್‌ಎ ಮೋನಾಕ್ ಪಟೇಲ್ ಹಾಗೂ ಶಯಾನ್ ಜಹಾಂಗೀರ್ (22) ಜೋಡಿ 68 ರನ್ ಸೇರಿಸಿತು. ಆರಂಭಿಕ ಮೋನಾಕ್ ಪಟೇಲ್ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 52 ರನ್ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕರ್ನಾಟಕ ಮೂಲದ ಸಂಜಯ್ ಕೃಷ್ಣಮೂರ್ತಿ 4 ಬೌಂಡರಿ, 6 ಸಿಕ್ಸರ್ ನೆರವಿನಿಂದ 68 ರನ್ ಸಿಡಿಸಿದರು. ಅಂತಿಮವಾಗಿ ಯುಎಸ್‌ಎ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 199 ರನ್ ಸೇರಿಸಿತು.

ನಮೀಬಿಯಾ ಪರ ಲಾರೆನ್ ಸ್ಟೀನ್‌ಕ್ಯಾಂಪ್ (58), ಜಾನ್ ಫ್ರೈಲಿಂಕ್ (19), ಜಾನ್ ನಿಕೋಲ್ ಲೋಫ್ಟಿ-ಈಟನ್ (28),
ಜೆಜೆ ಸ್ಮಿತ್ (31), ಝೇನ್ ಗ್ರೀನ್ (18) ಕೊಂಚ ಯುಎಸ್‌ಎ ಬೌಲರ್‌ಗಳನ್ನು ಕಾಡಿದರು. ಅಂತಿಮವಾಗಿ ನಮೀಬಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 168 ರನ್ ಸೇರಿಸಿ ಸೋಲು ಕಂಡಿತು.
ಈ ಪಂದ್ಯದಲ್ಲಿ ಗೆಲುವಿನ ಮೂಲಕ ಯುಎಸ್‌ಎ ತಂಡ ಮುಂದಿನ ಹಂತ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಯುಎಸ್‌ಎ ಸದ್ಯ ಅಂಕ ಪಟ್ಟಿಯಲ್ಲಿ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.