ಬಾಂಗ್ಲಾ ವಿರುದ್ಧ ವಿಂಡೀಸ್‌ಗೆ "ಸೂಪರ್" ಗೆಲುವು
ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ನಡುವಣ ಮೀರ್‌ಪೂರ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಪಂದ್ಯದ ಫಲಿತಾಂಶವನ್ನು ಅರಿಯಲು ಸೂಪರ್ ಓವರ್ ಮೊರೆ ಹೊಗಲಾಯಿತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ವಿಂಡೀಸ್ 1 ಓವರ್‌ಗಳಲ್ಲಿ 10 ರನ್ ಕಲೆ ಹಾಕಿತು. ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ಕೇವಲ 9 ರನ್ ಕಲೆ ಹಾಕಿ ಸೋಲು ಕಂಡಿತು. ಈ ಮೂಲಕ ವಿಂಡೀಸ್ ಮೂರು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡದ ಆರಂಭ ಕಳಪೆಯಾಗಿತ್ತು. ತಂಡದ ಸ್ಟಾರ್ ಆಟಗಾರರಾದ ಸೈಫ್ ಹಸನ್ (6) ಹಾಗೂ ತೌಹಿದ್ ಹೃದೋಯಿ (12) ರನ್ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕ ಸೌಮ್ಯ ಸರ್ಕಾರ ಹಾಗೂ ನಜ್ಮುಲ್ ಹೊಸೇನ್ ಶಾಂತೊ (15) ಜೊಡಿ ಮೂರನೇ ವಿಕೆಟ್‌ಗೆ 41 ಎಸೆತಗಳಲ್ಲಿ 27 ರನ್ ಕಾಣಿಕೆ ನೀಡಿತು. ನಾಲ್ಕನೇ ವಿಕೆಟ್‌ಗೆ ಸರ್ಕಾರ ಹಾಗೂ ಮಹಿದುಲ್ ಇಸ್ಲಾಂ ಅಂಕನ್ (17) ಜೋಡಿ ಸಹ 28 ರನ್ ಸೇರಿಸಿತು. ಆರಂಭಿಕ ಸೌಮ್ಯಾ ಸರ್ಕಾರ 89 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 45 ರನ್ ಬಾರಿಸಿ ಔಟ್ ಆದರು.

ಮಧ್ಯಮ ಕ್ರಮಾಂಕದಲ್ಲಿ ಮೆಹದಿ ಹಸನ್ ಮಿರ್ಜಾ 1 ಬೌಂಡರಿ ನೆರವಿನಿಂದ ಅಜೇಯ 32 ರನ್ ಸಿಡಿಸಿದರು.
ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳು ಕೊನೆಯ ಓವರ್‌ನಲ್ಲಿ 5 ರನ್‌ಗಳನ್ನು ಗಳಿಸುವಲ್ಲಿ ವಿಫಲರಾದರು. ನೂರುಲ್ ಹಸನ್ (23) ಹಾಗೂ ರಿಷಾದ್ ಹೊಸೇನ್ (ಅಜೇಯ 39) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ನೆರವಾದರು. ಅಂತಿಮವಾಗಿ ಬಾಂಗ್ಲಾದೇಶ 7 ವಿಕೆಟ್‌ಗೆ 213 ರನ್ ಸೇರಿಸಿತು. ವಿಂಡೀಸ್ ಪರ ಗುಡಕೇಶ್ ಮೋತಿ ಮೂರು ವಿಕೆಟ್ ಕಬಳಿಸಿದರು.
ಕೊನೆಯ ಓವರ್
ವೆಸ್ಟ್ ಇಂಡೀಸ್ ಒಂದು ಹಂತದಲ್ಲಿ ಸುಲಭವಾಗಿ ಪಂದ್ಯವನ್ನು ಗೆಲ್ಲ ಬಹುದಾದ ಸ್ಥಿತಿಯಲ್ಲಿತ್ತು. ಈ ವೇಳೆ ವಿಂಡೀಸ್ ಕೊನೆಯ ಓವರ್‌ನಲ್ಲಿ ಜಯಕ್ಕೆ ಕೇವಲ 5 ರನ್ ಕಲೆ ಹಾಕುವಕ ಅವಶ್ಯಕತೆ ಇತ್ತು. ಈ ಹಂತದಲ್ಲಿ ಸೈಫ್ ಹಸನ್ ಬಿಗುವಿನ ದಾಳಿ ಸಂಘಟಿಸಿದರು. ಇವರ ಮೊದಲ ಎರಡು ಎಸೆತವನ್ನು ಅಕೀಲ್ ಹೊಸೈನ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಮೂರನೇ ಹಾಗೂ ನಾಲ್ಕನೇ ಎಸೆತದಲ್ಲಿ ತಲಾ ಒಂದು ರನ್ ದಾಖಲಾದವು. ಐದನೇ ಎಸೆತದಲ್ಲಿ ಒಂದು ವಿಕೆಟ್ ಬಿದ್ದಿತು. ಅಲ್ಲದೆ ಕೊನೆಯ ಎಸೆತದಲ್ಲಿ ಮೂರು ರನ್ ಅವಶ್ಯಕತೆ ಇದ್ದಾಗ, 2 ರನ್ ಪಡೆದು ಪಂದ್ಯವನ್ನು ಡ್ರಾ ಮಾಡಿಕೊಳ್ಳಲಾಯಿತು.
214 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ಪರ ಶೈ ಹೋಪ್ ಅದ್ಭುತ ಅರ್ಧಶತಕ ಗಳಿಸಿದರೆ, ಕೇಸಿ ಕಾರ್ಟಿ 35 ರನ್‌ಗಳ ಕೊಡುಗೆ ನೀಡಿದರು. ಆದರೂ ತಂಡ ಬಾಂಗ್ಲಾ ನೀಡಿದ್ದ ಗುರಿಯನ್ನು ದಾಟಿ ನಿಲ್ಲಲು ಸಾಧ್ಯವೇ ಆಗಲಿಲ್ಲ. ಬಾಂಗ್ಲಾ ಪರ ರಿಷಾದ್ ಹೊಸೇನ್ ಮೂರು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications