ವಿಶ್ವಕಪ್‌ನಲ್ಲಿ ಸ್ಥಾನ ಪಡೆದ ವಿಂಡೀಸ್, ಜಿಂಬಾಬ್ವೆಗೂ ಇದೆ ಅವಕಾಶ

ಹರಾರೆ, ಮಾರ್ಚ್ 22: ವಿಶ್ವಕಪ್ ಅರ್ಹತಾ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ನಿನ್ನೆ ಸ್ಕಾಟ್‌ಲೆಂಡ್ ಅನ್ನು ಮಣಿಸಿದ ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್‌ನಲ್ಲಿ ಮುಂದಿನ ವರ್ಷ ನಡೆಯುವ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಸ್ಥಾನವನ್ನು ಭಧ್ರ ಪಡಿಸಿಕೊಂಡಿತು.
ಈ ಬಾರಿ ವಿಶ್ವಕಪ್‌ನಲ್ಲಿ 14 ತಂಡಗಳ ಬದಲಿಗೆ 10 ತಂಡಗಳಷ್ಟೆ ಆಡುವಂತೆ ನಿಯಮ ಬದಲಾಯಿಸಿದ ಕಾರಣ ಏಕದಿನ ಪಂದ್ಯದಲ್ಲಿ ಕಡಿಮೆ ರ್ಯಾಂಕಿಂಗ್ ಹೊಂದಿದ್ದ ವೆಸ್ಟ್ ಇಂಡೀಸ್‌ಗೆ ನೇರ ಪ್ರವೇಶ ನೀಡಲಾಗಿರಲಿಲ್ಲ. ಹಾಗಾಗಿ ವಿಂಡೀಸ್ ತಂಡವು ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ವರ್ಲ್ಡ್ ಕಪ್ ಅರ್ಹತಾ ಪಂದ್ಯವಾಳಿಯಲ್ಲಿ ಪಾಲ್ಗೊಂಡು ಅಲ್ಲಿಂದ ವರ್ಲ್ಡ್ ಕಪ್ ಆಡಲು ಅರ್ಹತೆ ಗಿಟ್ಟಿಸಿಕೊಂಡಿದೆ.
ನಿನ್ನೆ ಹರಾರೆಯಲ್ಲಿ ನಡೆದ ಸೂಪರ್ ಸಿಕ್ಸರ್ ರೌಂಡ್‌ನ ಕೊನೆಯ ಪಂದ್ಯದಲ್ಲಿ ಸ್ಕಾಟ್‌ಲೆಂಡ್ ತಂಡವನ್ನು 5 ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ತಂಡವು ಸೋಲಿಸಿದೆ. ವಿಶ್ವಕಪ್ ಅರ್ಹತಾ ಪಂದ್ಯಾವಳಿಯಲ್ಲಿ ಈ ವರೆಗೆ 9 ಪಂದ್ಯ ಆಡಿರುವ ವಿಂಡೀಸ್ ತಂಡ ಕೇವಲ ಒಂದು ಪಂದ್ಯವನ್ನು ಮಾತ್ರ ಸೋತಿದ್ದು, ಟೂರ್ನಿಯ ಫೈನಲ್ ಪ್ರವೇಶಿಸಿದೆ ಆ ಮೂಲಕ ವಿಶ್ವಕಪ್‌ಗೆ ಅರ್ಹತೆ ಗಳಿಸಿದ ಮೊದಲ ತಂಡ ಎನಿಸಿಕೊಂಡಿದೆ.

ಇನ್ನೊಂದು ತಂಡ ವಿಶ್ವಕಪ್‌ಗೆ ಅರ್ಹತೆ ಗಳಿಸಿಕೊಳ್ಳುವ ಅವಕಾಶ ಇದ್ದು, ಇಂದು ಜಿಂಬಾಬ್ವೆ ಮತ್ತು ಯುಎಇ (ಅರಬ್ ಎಮರೈಟ್ಸ್) ನಡೆಯುವ ಪಂದ್ಯದಲ್ಲಿ ಜಿಂಬಾಬ್ವೆ ಗೆದ್ದಲ್ಲಿ ಅದು ಸಹ ವಿಶ್ವಕಪ್‌ಗೆ ಅರ್ಹತೆ ಗಳಿಸಲಿದೆ.
ಮತ್ತೊಂದು ಕಡೆ ಅಪ್ಘಾನಿಸ್ತಾನ ಮತ್ತು ಐರ್ಲೆಂಡ್ ನಡುವೆ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಅಪ್ಘಾನಿಸ್ತಾನ ಗೆಲ್ಲುವ ವಿಶ್ವಾದಲ್ಲಿದೆ. ಆದರೆ ಅರಬ್ ವಿರುದ್ಧ ಜಿಂಬಾಬ್ವೆ ಸೋತರೆ ಮಾತ್ರ ಅಪ್ಘಾನಿಸ್ತಾನ ತಂಡ ವಿಶ್ವಕಪ್‌ಗೆ ಅರ್ಹತೆ ಗಳಿಸಲಿದೆ. ಆದರೆ ಸೂಪರ್ ಸಿಕ್ಸ್ ನಲ್ಲಿ ಒಂದೂ ಪಂದ್ಯ ಗೆದ್ದಿರದ ಯುಎಇ ವಿರುದ್ಧ ಜಿಂಬಾಬ್ವೆ ಸುಲಭ ಗೆಲವು ಸಾಧಿಸುವ ನಿರೀಕ್ಷೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications