For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ವೆಸ್ಟ್ ಇಂಡೀಸ್‌ ತಂಡಕ್ಕೆ ಆಘಾತ; ಪ್ರಮುಖ ಆಟಗಾರ ವಿಶ್ವಕಪ್‌ನಿಂದಲೇ ಔಟ್!

West Indies Fabian Allen has been ruled out of the T20 WC 2021 due to an ankle injury

ಟಿ20 ಕ್ರಿಕೆಟ್‌ನ ಹಾಲಿ ಚಾಂಪಿಯನ್ ತಂಡವಾಗಿರುವ ವೆಸ್ಟ್ ಇಂಡೀಸ್ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿಯೂ ಗೆದ್ದು ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಆದರೆ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಅಭಿಯಾನ ಆರಂಭವಾಗುವುದಕ್ಕೂ ಮುನ್ನವೇ ತಂಡಕ್ಕೆ ಆಘಾತ ಉಂಟಾಗಿದೆ. ತಂಡದ ಪ್ರಮುಖ ಆಟಗಾರನೋರ್ವ ಗಾಯದ ಕಾರಣದಿಂದ ಟೂರ್ನಿಯಿಂದ ಹೊರಗುಳಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ವೆಸ್ಟ್ ಇಂಡೀಸ್ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ಫ್ಯಾಬಿಯನ್ ಅಲೆನ್ ಈ ಬಾರಿಯ ಟಿ20 ವಿಶ್ವಕಪ್‌ನಿಂದ ಹೊರಗುಳಿದಿರುವ ಆಟಗಾರನಾಗಿದ್ದಾರೆ. ಪಾದದ ಗಾಯಕ್ಕೆ ಒಳಗಾಗಿರುವ ಫ್ಯಾಬಿಯನ್ ಅಲೆನ್ ಇಡೀ ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಅಲೆನ್ ಸ್ಥಾನಕ್ಕೆ ವೆಸ್ಟ್ ಇಂಡೀಸ್ ತಂಡ ಹೊಸ ಆಟಗಾರನನ್ನು ಸೇರ್ಪಡೆಗೊಳಿಸಿದೆ.

ಫ್ಯಾಬಿಯನ್ ಅಲೆನ್ 2018ರಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಪದಾರ್ಪಣೆ ಮಾಡಿದರು. ನಂತರ ತಂಡದ ಪರವಾಗಿ 28 ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆಡಿದ ಅನುಭವ ಹೊಂದಿದ್ದರು. ಸ್ಪಿನ್ ಬೌಲಿಂಗ್ ಜೊತೆಗೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ.

ಎಡಗೈ ಸ್ಪಿನ್ನರ್ ಆಗಿರುವ ಅಕೀಲ್ ಹುಸೈನ್ ಗಾಯಗೊಂಡಿರುವ ಫ್ಯಾಬಿಯನ್ ಅಲೆನ್ ಸ್ಥಾನಕ್ಕೆ ಬದಲಿ ಆಟಗಾರನಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಹೆಸರಿಸಿದೆ. ಹುಸೈನ್ ವೆಸ್ಟ್ ಇಂಡೀಸ್ ತಂಡವನ್ನು 9 ಏಕದಿನ ಪಂದ್ಯಗಳಲ್ಲಿ ಹಾಗೂ 6 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ ಅನುಭವ ಹೊಂದಿದ್ದಾರೆ. ಹೊಸೈನ್ ವೆಸ್ಟ್ ಇಂಡೀಸ್ ತಂಡದ ಜೊತೆಗೆ ಮೀಸಲು ಆಟಗಾರನಾಗಿದ್ದರು. ಇದೀಗ 15 ಸ್ಕ್ವಾಡ್‌ಗೆ ಸೇರ್ಪಡೆಯಾಗಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಈ ಸೇರ್ಪಡೆಗೆ ಐಸಿಸಿ ಕೂಡ ಅನುಮತಿಯನ್ನು ನೀಡಿದೆ.

ವೆಸ್ಟ್ ಇಂಡೀಸ್ ತಂಡ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಸೆಣೆಸಾಡಲಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದ ಮುಂದಿನ ಶನಿವಾರ ನಡೆಯಲಿದೆ.

ವೆಸ್ಟ್ ಇಂಡೀಸ್ ತಂಡದ ಪರಿಷ್ಕೃತ ಸ್ಕ್ವಾಡ್ ಹೀಗಿದೆ: ಕೀರನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪ ನಾಯಕ), ಅಕೆಲ್ ಹೊಸೈನ್, ಡ್ವೇಯ್ನ್ ಬ್ರಾವೊ, ರೋಸ್ಟನ್ ಚೇಸ್, ಆಂಡ್ರೆ ಫ್ಲೆಚರ್, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಲೇಯರ್, ಎವಿನ್ ಲೂಯಿಸ್, ಓಬೇಡ್ ಮೆಕಾಯ್, ಲೆಂಡಲ್ ಸಿಮನ್ಸ್, ರವಿ ರಾಂಪಾಲ್, ಆಂಡ್ರೆ ರಸೆಲ್, ಓಶನ್ ಥಾಮಸ್, ಹೇಡನ್ ವಾಲ್ಷ್ ಜೂನಿಯರ್

ಮೀಸಲು ಆಟಗಾರರು: ಡ್ಯಾರೆನ್ ಬ್ರಾವೊ, ಶೆಲ್ಡನ್ ಕಾಟ್ರೆಲ್, ಜೇಸನ್ ಹೋಲ್ಡರ್
ವೆಸ್ಟ್ ಇಂಡೀಸ್ ತಂಡದ ವೇಳಾಪಟ್ಟಿ: 24 ಅಕ್ಟೋಬರ್‌ vs ಇಂಗ್ಲೆಂಡ್, 26 ಅಕ್ಟೋಬರ್‌ vs ದಕ್ಷಿಣ ಆಫ್ರಿಕಾ, 29 ಅಕ್ಟೋಬರ್‌ vs ಬಿ2, 5 ನವೆಂಬರ್ vs ಎ1, 6 ನವೆಂಬರ್‌ vs ಆಸ್ಟ್ರೇಲಿಯಾ

Story first published: Wednesday, October 20, 2021, 16:15 [IST]
Other articles published on Oct 20, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+