Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಮರ್ಲಾನ್ ಸ್ಯಾಮುಯೆಲ್ಸ್ ನಿವೃತ್ತಿ

West Indies Marlon Samuels retires from all forms of cricket

ಪೋರ್ಟ್ ಆಫ್‌ ಸ್ಪೇನ್: ವೆಸ್ಟ್‌ ಇಂಡೀಸ್‌ನ ಬ್ಯಾಟ್ಸ್‌ಮನ್, ಆಲ್ ರೌಂಡರ್ ಮರ್ಲಾನ್ ಸ್ಯಾಮುಯೆಲ್ಸ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟಿ20ಐ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಎರಡು ಸಾರಿ ಪ್ರಶಸ್ತಿ ಗೆದ್ದಿದ್ದಾಗಲೂ ಫೈನಲ್‌ನಲ್ಲಿ ಸ್ಯಾಮುಯೆಲ್ಸ್ ಟಾಪ್‌ ಸ್ಕೋರರ್ ಆಗಿ ಗುರುತಿಸಿಕೊಂಡಿದ್ದರು.

2000ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಮರ್ಲಾನ್ ಸ್ಯಾಮುಯೆಲ್ಸ್ ಕಡೇ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದು 2018ರಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ. ಸ್ಯಾಮುಯೆಲ್ಸ್‌ಗೀಗ 39ರ ಹರೆಯ.

ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ತನ್ನ ನಿವೃತ್ತಿ ಬಗ್ಗೆ ಸ್ಯಾಮುಯೆಲ್ಸ್ ಕಳೆದ ಜೂನ್‌ನಲ್ಲೇ ಕ್ರಿಕೆಟ್ ವೆಸ್ಟ್ ಇಂಡೀಸ್‌ಗೆ ಮಾಹಿತಿ ನೀಡಿದ್ದರು. ಇದನ್ನು ವಿಂಡೀಸ್ ಕ್ರಿಕೆಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾನಿ ಗ್ರೇವ್ ಖಾತರಿಪಡಿಸಿದ್ದಾರೆ.

ವೆಸ್ಟ್ ಇಂಡೀಸ್‌ ಪರ 71 ಟೆಸ್ಟ್ ಪಂದ್ಯಗಳಲ್ಲಿ 3917 ರನ್, 41 ವಿಕೆಟ್‌, 207 ಏಕದಿನ ಪಂದ್ಯಗಳಲ್ಲಿ 5606 ರನ್, 89 ವಿಕೆಟ್, 67 ಟಿ20ಐ ಪಂದ್ಯಗಳಲ್ಲಿ 1611 ರನ್, 22 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಇನ್ನು 15 ಐಪಿಎಲ್‌ ಪಂದ್ಯಗಳಲ್ಲಿ 161 ರನ್, 9 ವಿಕೆಟ್‌ ಕೂಡ ಪಡೆದಿದ್ದಾರೆ.

Story first published: Wednesday, November 4, 2020, 12:30 [IST]
Other articles published on Nov 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+