For Quick Alerts
ALLOW NOTIFICATIONS  
For Daily Alerts
 

ವೆಸ್ಟ್‌ ಇಂಡೀಸ್‌ ಮಹಿಳಾ ವಿಶ್ವಕಪ್‌ ಕ್ವಾಲಿಫೈಗೆ 4 ಎಸೆತದ ಕಂಟಕ...ಕಣ್ಣೀರು

ಕ್ರಿಕೆಟ್‌ನಲ್ಲಿ ನೆಟ್‌ ರನ್‌ರೇಟ್‌ ಎಷ್ಟು ಇಂಪಾರ್ಟೆಂಟ್‌ ಅನ್ನೋದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ. ಶನಿವಾರ ಇದಕ್ಕೆ ಮತ್ತೊಂದು ಪಂದ್ಯ ಸಾಕ್ಷಿಯಾಗಿದೆ. ವೆಸ್ಟ್‌ ಇಂಡೀಸ್‌ ಮಹಿಳಾ ತಂಡದ ರನ್‌ ರೇಟ್‌ 0.014 ಕಡಿಮೆ ಇದ್ದಿದಕ್ಕಾಗಿ ಅವರು ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇದಾದ ಬಳಿಕ ಆಟಗಾರ್ತಿಯರು ಮೈದಾನದಲ್ಲಿ ಕಣ್ಣೀರು ಇಟ್ಟಿದ್ದಾರೆ.

ಭಾರತದಲ್ಲಿ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್‌ ಕ್ವಾಲಿಫೈಯರ್‌ ಪಂದ್ಯಗಳು ನಡೆದಿವೆ. ಈ ವೇಳೆ ವೆಸ್ಟ್‌ ಇಂಡೀಸ್ ಹಾಗೂ ಥಾಯ್ಲೆಂಡ್ ತಂಡಗಳು ಕಾದಾಟ ನಡೆಸಿದವು. ಮೊದಲು ಬ್ಯಾಟ್ ಮಾಡಿದ ಥಾಯ್ಲೆಂಡ್ ನಥಕನ್ ಚಾಂತಮ್ ಅವರ 66 ರನ್‌ಗಳ ಕೊಡುಗೆಯಿಂದ 46.1 ಓವರ್‌ಗಳಲ್ಲಿ 166 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ವಿಂಡೀಸ್‌ 10.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 168 ರನ್‌ ಸೇರಿಸಿತು. ವೆಸ್ಟ್ ಇಂಡೀಸ್ ತಂಡದ ಪರ ಹ್ಯಾಲಿ ಮ್ಯಾಥ್ಯೂಸ್‌ 70 ಹಾಗೂ ಚಿನ್ಲೆ ಹೆನ್ರಿ 48 ರನ್‌ ಬಾರಿಸಿ ಮಿಂಚಿದರು. ಈ ಪಂದ್ಯ ಗೆದ್ದರೂ ವಿಂಡೀಸ್‌ ವಿಶ್ವ ಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.

West Indies Miss World Cup Spot Despite Win Fall Short by 0 014 NRR

ವೆಸ್ಟ್ ಇಂಡೀಸ್ ಮಹಿಳಾ ತಂಡ ಐಸಿಸಿ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಥಾಯ್ಲೆಂಡ್‌ ವಿರುದ್ಧ 10.1 ಓವರ್‌ಗಳಲ್ಲಿ ಜಯ ಸಾಧಿಸಬೇಕಿತ್ತು. ಆದರೆ 4 ಎಸೆತಗಳು ಹೆಚ್ಚಾಗಿ ತೆಗೆದುಕೊಂಡಿದ್ದರಿಂದ ಇವರ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಕನಸು ನುಚ್ಚು ನೂರಾಗಿದೆ. ಇದರ ಪರಿಣಾಮ ರನ್‌ ರೇಟ್‌ ವಿಚಾರದಲ್ಲಿ ವಿಂಡೀಸ್‌ಗಿಂತ ಕೊಂಚ ಮುಂದಿದ್ದ ಬಾಂಗ್ಲಾದೇಶ ಕ್ವಾಲಿ ಫೈ ಆಗಿದೆ.

ಬಾಂಗ್ಲಾ ಕ್ವಾಲಿಫೈ

ಪಾಕಿಸ್ತಾನ ಆಡಿದ 5 ಅರ್ಹತಾ ಪಂದ್ಯಗಳಲ್ಲೂ ಜಯ ಸಾಧಿಸಿ, ಐಸಿಸಿ ಮಹಿಳಾ ಏಕದಿನ ಕ್ರಿಕೆಟ್‌ ಟೂರ್ನಿಗೆ ಕ್ವಾಲಿಫೈ ಆಗಿದೆ. ಇನ್ನು ಬಾಂಗ್ಲಾದೇಶದ ಆಡಿದ 5 ಪಂದ್ಯಗಳಲ್ಲಿ 3 ಜಯ ಸಾಧಿಸಿದ್ದು, 6 ಅಂಕಗಳೊಂದಿಗೆ 0.639 ರನ್‌ ರೇಟ್‌ನೊಂದಿಗೆ ಮುಂದಿನ ಹಂತ ತಲುಪಿದೆ. ವೆಸ್ಟ್‌ ಇಂಡೀಸ್‌ ಸಹ ಬಾಂಗ್ಲಾದಷ್ಟೇ ಪಂದ್ಯಗಳನ್ನು ಆಡಿದ್ದು, ಅಷ್ಟೇ ಗೆಲುವು ದಾಖಲಿಸಿದ್ದರೂ 0.626 ರನ್‌ ರೇಟ್‌ ಹೊಂದಿದ್ದರಿಂದ ಟೂರ್ನಿಯಿಂದ ಹೊರ ನಡೆದಿದೆ. 2000 ಇಲ್ಲಿಯವರೆಗೆ ಆಡಿದ ಆರು ಏಕದಿನ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಬಾಂಗ್ಲಾದೇಶ ಮಹಿಳಾ ತಂಡ ಎರಡನೇ ಬಾರಿಗೆ ವಿಶ್ವಕಪ್‌ನಲ್ಲಿ ಭಾಗವಹಿಸಲಿದೆ.

167 ರನ್‌ಗಳ ಗುರಿಯನ್ನು ಬೇಗ ಮುಟ್ಟಬೇಕು ಎಂಬ ಕನಸಿನಲ್ಲಿದ್ದ ವೆಸ್ಟ್‌ ಇಂಡೀಸ್ ತಂಡದ ಆರಂಭ ಸಹ ಆರಂಭಿಕರಾದ ಹ್ಯಾಲಿ ಹಾಗೂ ಕ್ವಿಯಾನಾ ಜೋಸೆಫ್ ಅಬ್ಬರದ ಆರಂಭವನ್ನು ನೀಡಿದರು. ಈ ಜೋಡಿ 5.3 ಓವರ್‌ಗಳಲ್ಲಿ 81 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಪಂದ್ಯದ ಒತ್ತಡವನ್ನು ಗಮನಿಸಿದ ವೆಸ್ಟ್‌ ಇಂಡೀಸ್ ಮಹಿಳಾ ತಂಡ, ಮೂರನೇ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟರ್‌ ಚಿನ್ಲೆ ಹೆನ್ರಿ ಅವರಿಗೆ ಅವಕಾಶ ನೀಡಿತು. ಇವರು 17 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ ಸಹಾಯದಿಂದ 48 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಆದರೆ ತಂಡವನ್ನು ವಿಶ್ವಕಪ್‌ಗೆ ಕ್ವಾಲಿಫೈ ಮಾಡಿಸುವಲ್ಲಿ ವಿಫಲರಾದರು.

Story first published: Sunday, April 20, 2025, 9:44 [IST]
Other articles published on Apr 20, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+