ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ವೆಸ್ಟ್ ಇಂಡೀಸ್ ತಾತ್ಕಾಲಿಕ ತಂಡ ಪ್ರಕಟ

ಪೋರ್ಟ್ ಆಫ್ ಸ್ಪೇನ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ 17 ಜನರ ತಾತ್ಕಾಲಿಕ ತಂಡ ಪ್ರಕಟಿಸಿದೆ. ತಂಡದಲ್ಲಿ ಯುವ ವೇಗಿ ಜೇಡನ್ ಸೀಲ್ಸ್‌ಗೂ ಸ್ಥಾನ ನೀಡಲಾಗಿದೆ. ಗುರುವಾರ (ಜೂನ್ 10) ಈ ಟೆಸ್ಟ್ ಸರಣಿ ಆರಂಭವಾಗಲಿದೆ.
ಸೋಮವಾರ (ಜೂನ್ 7) ಈ ತಂಡವನ್ನು 13ಕ್ಕೆ ಇಳಿಸುವ ನಿರೀಕ್ಷೆಯಿದೆ. ವೇಗಿ ಕೆಮರ್ ಹೋಲ್ಡರ್ ಗಾಯದ ಕಾರಣ ಆಯ್ಕೆಗೆ ಲಭ್ಯರಿಲ್ಲ ಎಂದು ಆಯ್ಕೆ ಸಮಿತಿ ಹೇಳಿದೆ. ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ಮುಕ್ತಾಯದ ಬಳಿಕ ಇತ್ತಂಡಗಳ ಮಧ್ಯೆ ಐದು ಪಂದ್ಯಗಳ ಟಿ20ಐ ಸರಣಿ ನಡೆಯಲಿದೆ.
'ಗಾಯದ ಕಾರಣ ಕೆಮರ್ ಹೋಲ್ಡರ್ ಆಯ್ಕೆಗೆ ಲಭ್ಯರಿಲ್ಲ. ಹೀಗಾಗಿ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ತಾತ್ಕಾಲಿಕ ತಂಡದಲ್ಲಿ ಮೊದಲ ಬಾರಿಗೆ 19ರ ಹರೆಯದ ವೇಗಿ ಜೇಡನ್ ಸೀಲ್ಸ್‌ಗೆ ಅವಕಾಶ ನೀಡಲಾಗಿದೆ,' ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಪ್ರಕಟಣೆಯಲ್ಲಿ ತಿಳಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ತಾತ್ಕಾಲಿಕ ತಂಡ
ಕ್ರೇಗ್ ಬ್ರಾಥ್‌ವೇಟ್ (ಸಿ), ಜೆರ್ಮೈನ್ ಬ್ಲ್ಯಾಕ್‌ವುಡ್ (ವಿಸಿ), ಎನ್‌ಕ್ರುಮಾ ಬೊನ್ನರ್, ಡ್ಯಾರೆನ್ ಬ್ರಾವೋ, ರೋಸ್ಟನ್ ಚೇಸ್, ರಹಕೀಮ್ ಕಾರ್ನ್‌ವಾಲ್, ಜೋಶುವಾ ಡಿ ಸಿಲ್ವಾ, ಶ್ಯಾನನ್ ಗೇಬ್ರಿಯಲ್, ಜಹಮರ್ ಹ್ಯಾಮಿಲ್ಟನ್, ಜೇಸನ್ ಹೋಲ್ಡರ್, ಶೈ ಹೋಪ್, ಅಲ್ಜಾರಿ ಜೋಸೆಫ್, ಕೈಲ್ ಮೇಯರ್ಸ್, ಕೀರನ್ ಪೊವೆಲ್, ಕೆಮರ್ ರೋಚ್, ಜೇಡೆನ್ ಸೀಲ್ಸ್, ಜೋಮೆಲ್ ವಾರ್ರಿಕನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications