SL vs WI: ಶ್ರೀಲಂಕಾ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ಏಕದಿನ-ಟಿ20 ತಂಡ ಪ್ರಕಟ; 4 ಸೂಪರ್ ಸ್ಟಾರ್ಸ್ ಔಟ್
ಶ್ರೀಲಂಕಾ ಪ್ರವಾಸಕ್ಕಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಏಕದಿನ ಮತ್ತು ಟಿ20 ಸರಣಿಗೆ ತಂಡವನ್ನು ಪ್ರಕಟಿಸಿದೆ. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 3-0 ಕ್ಲೀನ್ ಸ್ವೀಪ್ ಮಾಡಿದ ನಂತರ ವೆಸ್ಟ್ ಇಂಡೀಸ್ ಐಸಿಸಿ ಟಿ20 ಶ್ರೇಯಾಂಕದಲ್ಲಿ 3ನೇ ಸ್ಥಾನದಲ್ಲಿದೆ.
ಇದೀಗ ಬಲಿಷ್ಠ ವೆಸ್ಟ್ ಇಂಡೀಸ್ ತಂಡವು ಅಕ್ಟೋಬರ್ 10-27 ರವರೆಗೆ ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಸರಣಿಗಳಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಏಕದಿನ ವಿಂಡೀಸ್ ತಂಡವನ್ನು ನಾಯಕನಾಗಿ ಶಾಯ್ ಹೋಪ್ ಮುನ್ನಡೆಸಲಿದ್ದು, ಅಲ್ಜಾರಿ ಜೋಸೆಫ್ ಉಪನಾಯಕನಾಗಿ ಉಳಿಯಲಿದ್ದಾರೆ.

ಸೂಪರ್ ಸ್ಟಾರ್ಸ್ ಔಟ್
ಶ್ರೀಲಂಕಾ ಪ್ರವಾಸಕ್ಕೆ ಪ್ರಕಟವಾಗಿರುವ ವೆಸ್ಟ್ ಇಂಡೀಸ್ ತಂಡದಲ್ಲಿ ನಾಲ್ವರು ಸೂಪರ್ ಸ್ಟಾರ್ಸ್ ಆಟಗಾರರು ಕಾಣಿಯಾಗಿದ್ದಾರೆ. ವೆಸ್ಟ್ ಇಂಡೀಸ್‌ನ ಸ್ಟಾರ್ ಅನುಭವಿ ಆಲ್‌ರೌಂಡರ್ ಆಂಡ್ರೆ ರಸೆಲ್, ವಿಕೆಟ್‌ಕೀಪರ್-ಬ್ಯಾಟರ್ ನಿಕೋಲಸ್ ಪೂರನ್, ಸ್ಪಿನ್ನರ್ ಅಕಿಲ್ ಹುಸೇನ್ ಮತ್ತು ಸ್ಟಾರ್ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ವೈಯಕ್ತಿಕ ಕಾರಣಗಳಿಂದ ಟಿ20 ಸರಣಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಅಲ್ಲದೆ, ಏಕದಿನ ತಂಡದಿಂದಲ್ಲೂ ಈ ನಾಲ್ವರು ಸ್ಟಾರ್ ಆಟಗಾರರು ದೂರ ಉಳಿದಿದ್ದಾರೆ.
ಮುಖ್ಯ ಕೋಚ್ ಡ್ಯಾರೆನ್ ಸಾಮಿ ನೇತೃತ್ವದ ಆಯ್ಕೆ ಸಮಿತಿಯು ಆರಂಭಿಕ ಸ್ಪೋಟಕ ಬ್ಯಾಟರಗಳಾದ ಎವಿನ್ ಲೂಯಿಸ್ ಮತ್ತು ಬ್ರಾಂಡನ್ ಕಿಂಗ್ ಅವರನ್ನು ತಂಡಕ್ಕೆ ವಾಪಸ್ ಕರೆತಂದಿದೆ. 2022ರ ಟಿ20 ವಿಶ್ವಕಪ್ ಬಳಿಕ ಲೂಯಿಸ್ ವೆಸ್ಟ್ ಇಂಡೀಸ್ ತಂಡವನ್ನು ಸೇರಿಕೊಂಡಿದ್ದಾರೆ. ಮತ್ತೊಂದೆಡೆ, ಕಿಂಗ್ ಗಾಯದಿಂದ ಚೇತರಿಸಿಕೊಂಡ ನಂತರ ತಂಡಕ್ಕೆ ಮರಳಿದ್ದಾರೆ. ವೇಗದ ಬೌಲಿಂಗ್ ಆಲ್‌ರೌಂಡರ್‌ಗಳಾದ ಟೆರೆನ್ಸ್ ಹಿಂಡ್ಸ್ ಮತ್ತು ಶಮರ್ ಸ್ಪ್ರಿಂಗರ್ ಅವರಿಗೂ ಮೊದಲ ಬಾರಿಗೆ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ವೆಸ್ಟ್ ಇಂಡೀಸ್ ಟಿ20 ತಂಡ
ರೋವ್‌ಮನ್ ಪೊವೆಲ್ (ನಾಯಕ), ರೋಸ್ಟನ್ ಚೇಸ್ (ಉಪನಾಯಕ), ಫ್ಯಾಬಿಯನ್ ಅಲೆನ್, ಅಲೆಕ್ ಅಥಾನಾಸ್, ಆಂಡ್ರೆ ಫ್ಲೆಚರ್, ಟೆರೆನ್ಸ್ ಹಿಂಡ್ಸ್, ಶಾಯ್ ಹೋಪ್, ಅಲ್ಜಾರಿ ಜೋಸೆಫ್, ಶಮರ್ ಜೋಸೆಫ್, ಬ್ರಾಂಡನ್ ಕಿಂಗ್, ಎವಿನ್ ಲೆವಿಸ್, ಗುಡಕೇಶ್ ಮೋತಿ, ಶೆರ್ಫೇನ್ ರುದರ್‌ಫೋರ್ಡ್, ರೊಮಾರಿಯೊ ಶೆಫರ್ಡ್ ಮತ್ತು ಶಮರ್ ಸ್ಪ್ರಿಂಗರ್.
ವೆಸ್ಟ್ ಇಂಡೀಸ್ ಏಕದಿನ ತಂಡ
ಶಾಯ್ ಹೋಪ್ (ನಾಯಕ), ಅಲ್ಜಾರಿ ಜೋಸೆಫ್ (ಉಪನಾಯಕ), ಜ್ಯುವೆಲ್ ಆಂಡ್ರ್ಯೂ, ಅಲೆಕ್ ಅಥಾನಾಜೆ, ಕೇಸಿ ಕಾರ್ಟಿ, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಶಮರ್ ಜೋಸೆಫ್, ಬ್ರ್ಯಾಂಡನ್ ಕಿಂಗ್, ಎವಿನ್ ಲೆವಿಸ್, ಗುಡಾಕೇಶ್ ಮೋತಿ, ಶೆರ್ಫೇನ್ ರುದರ್‌ಫೋರ್ಡ್, ಜೇಡನ್ ಸೀಲ್ಸ್, ರೊಮಾರಿಯೊ ಶೆಫರ್ಡ್ ಹೇಡನ್ ವಾಲ್ಷ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications