T20 World Cup 2024: ವೆಸ್ಟ್ ಇಂಡೀಸ್ ಕಪ್ ಗೆಲ್ಲುವ ಕನಸು ಭಗ್ನ; ಟೂರ್ನಿಯಿಂದ ಹೊರಬಿದ್ದ ಅತಿಥೇಯರು!
ಜೂನ್ 24 ಸೋಮವಾರ, ಟಿ20 ವಿಶ್ವಕಪ್ 2007ರಲ್ಲಿ ಆರಂಭವಾಯಿತು. 2007ರ ಟಿ20 ವಿಶ್ವಕಪ್‌ನಿಂದ 2024ರ ಟಿ20 ವಿಶ್ವಕಪ್‌ವರೆಗೆ ಈ ಐಸಿಸಿ ಟೂರ್ನಿಯ ಆತಿಥ್ಯ ವಹಿಸಿದ ಪ್ರತಿಯೊಂದು ದೇಶವೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ.
2024ರ ಟಿ 20 ವಿಶ್ವಕಪ್‌ನಿಂದ ವೆಸ್ಟ್ ಇಂಡೀಸ್ ಹೊರ ಬಿದ್ದ ಬಳಿಕ ಈ ವಿಶಿಷ್ಟ ದಾಖಲೆಯನ್ನು ಮುರಿಯುವ ಭರವಸೆಯೂ ಹುಸಿಯಾಗಿದೆ. ಏಕೆಂದರೆ ಈ ಬಾರಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಕಪ್ ಗೆಲ್ಲುವ ಸಾಧ್ಯತೆ ಇದೆ ಎಂದು ಆನೇಕ ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದ್ದರು.

ಟೂರ್ನಿಯುದಕ್ಕೂ ವಿಂಡೀಸ್ ಅದ್ಭುತವಾಗಿ ಆಡಿಕೊಂಡು ಬಂದಿತ್ತು. ಆದರೆ ದುರುದೃಷ್ಟಕರ ಇಂದು ವೆಸ್ಟ್ ಇಂಡೀಸ್ ತಂಡವು ದಕ್ಷಿಣ ಆಫ್ರಿಕಾ ತಂಡದ ಎದುರು ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಸೋತು ಟಿ20 ವಿಶ್ವಕಪ್ ಟೂರ್ನಿಯಿಂದ ಔಟಾಗಿದೆ. ಈ ಮೂಲಕ ವಿಂಡೀಸ್‌ನ ಮೂರನೇ ಟಿ20 ವಿಶ್ವಕಪ್ ಗೆಲ್ಲುವ ಕಸನು ಭಗ್ನವಾಗಿದೆ.
ವೆಸ್ಟ್ ಇಂಡೀಸ್ ತಂಡವು 2021, 22 ಹಾಗು 24ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಸುತ್ತಿನ ಮೊದಲೇ ಹೊರಬಿದ್ದಿದೆ. 2024ರ ಟಿ 20 ವಿಶ್ವಕಪ್‌ನಿಂದ ಹೊರಗುಳಿದ ನಂತರ ವೆಸ್ಟ್ ಇಂಡೀಸ್ ಆಟಗಾರರು ನೋವಿನಲ್ಲಿ ಮುಳುಗಿದ್ದಾರೆ. ಬೇಸರದಲ್ಲಿರುವ ವೆಸ್ಟ್ ಇಂಡೀಸ್ ಆಟಗಾರರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ದಕ್ಷಿಣ ಆಫ್ರಿಕಾ ಎದುರು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿತು. ವೆಸ್ಟ್ ಇಂಡೀಸ್ ಪರ ರೋಸ್ಟನ್ ಚೇಸ್ ಅರ್ಧಶತಕ ಬಾರಿಸಿದರು. ರೋಸ್ಟನ್ ಅವರು 42 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿಗಳ ಸಹಾಯದಿಂದ 52 ರನ್ ಗಳಿಸಿದರು.
ದಕ್ಷಿಣ ಆಫ್ರಿಕಾ ಪರ ತಬ್ರೇಜ್ ಶಮ್ಸಿ 3 ವಿಕೆಟ್ ಉರುಳಿಸಿದರೆ, ಮಾರ್ಕೊ ಜಾನ್ಸೆನ್, ಏಡನ್ ಮಾರ್ಕ್ರಾಮ್, ಕೇಶವ್ ಮಹಾರಾಜ್ ಮತ್ತು ಕಗಿಸೊ ರಬಾಡ ತಲಾ ಒಂದೊಂದು ವಿಕೆಟ್ ಪಡೆದರು. ಶಮ್ಸಿ ತಮ್ಮ ಅದ್ಭುತ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಎರಡು ವಿಕೆಟ್‌ಗೆ 15 ರನ್ ಗಳಿಸಿದ್ದಾಗ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಬೇಕಾಯಿತು. ಆಟ ಪುನರಾರಂಭಗೊಂಡಾಗ, ಡಕ್‌ವರ್ತ್ ಲೂಯಿಸ್ ನಿಯಮ ಪ್ರಕಾರ ದಕ್ಷಿಣ ಆಫ್ರಿಕಾಕ್ಕೆ 17 ಓವರ್‌ಗಳಲ್ಲಿ 123 ರನ್ ಗಳಿಸಲು ಹೊಸ ಗುರಿಯನ್ನು ನಿಗದಿಪಡಿಸಲಾಯಿತು.
ಅಂತಿಮವಾಗಿ ದಕ್ಷಿಣ ಆಫ್ರಿಕಾ ಗೆಲುವಿಗೆ 1 ಓವರ್‌ನಲ್ಲಿ 5 ರನ್‌ಗಳ ಅಗತ್ಯವಿತ್ತು. ಜಾನ್ಸೆನ್ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಗೆಲ್ಲಿಸಿದರು. ದಕ್ಷಿಣ ಆಫ್ರಿಕಾ 16.1 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 124 ರನ್ ಗಳಿಸಿ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications