For Quick Alerts
ALLOW NOTIFICATIONS  
For Daily Alerts
 

ಜಿಂಬಾಬ್ವೆ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆಫ್‌ ಸ್ಪಿನ್ನರ್ ಆಗಿ ಬದಲಾದ ವೆಸ್ಟ್ ಇಂಡೀಸ್ ವೇಗಿ ಜೇಸನ್ ಹೋಲ್ಡರ್

West Indies Pacer Jason Holder Turn Into A Off Spinner In Test Match Against Zimbabwe

ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ನಡುವಿನ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಜಿಂಬಾಬ್ವೆಯ ಬುಲವಾಯೊದಲ್ಲಿರುವ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉತ್ತಮ ಹೋರಾಟ ನೀಡಿದ ಜಿಂಬಾಬ್ವೆ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ವೆಸ್ಟ್ ಇಂಡೀಸ್ ತಂಡದ ವೇಗದ ಬೌಲರ್ ಜೇಸನ್ ಹೋಲ್ಡರ್ ಈ ಪಂದ್ಯದಲ್ಲಿ ಕೆಲವು ಓವರ್ ಆಫ್‌ ಸ್ಪಿನ್ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಪ್ರಮುಖ ವೇಗವ ಬೌಲರ್ ಆಗಿರುವ ಅವರು ಎರಡನೇ ಇನ್ನಿಂಗ್ಸ್ ಬೌಲಿಂಗ್ ವೇಳೆ ಆಫ್ ಸ್ಪಿನ್ನರ್ ಆಗಿ ಬದಲಾದರು.

ಪಂದ್ಯದ 5ನೇ ದಿನ ಪಿಚ್‌ ಸ್ಪಿನ್ನರ್ ಗಳಿಗೆ ಸಹಾಯಕವಾಗಿದ್ದರಿಂದ ಜೇಸನ್ ಹೋಲ್ಡರ್ ಸ್ಪಿನ್ ಬೌಲಿಂಗ್ ಮಾಡಲು ನಿರ್ಧರಿಸಿದರು. ಕೆಲವು ಓವರ್ ಗಳು ಅವರು ಆಫ್‌ ಸ್ಪಿನ್ ಬೌಲಿಂಗ್ ಮಾಡಿದರು. ಆದರೂ ಜೇಸನ್ ಹೋಲ್ಡರ್ ಎರಡನೇ ಇನ್ನಿಂಗ್ಸ್‌ನಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲವಾದರು.

5ನೇ ದಿನದಾಂತ್ಯದವರೆಗೂ ಆಲೌಟ್ ಆಗದೆ ಹುಷಾರಾಗಿ ಆಡಿದ ಜಿಂಬಾಬ್ವೆ ಕೊನೆಗೆ ಪಂದ್ಯವನ್ನು ಡ್ರಾ ಮಾಡಿಕೊಂಡು ನಿಟ್ಟುಸಿರು ಬಿಟ್ಟಿತು. ವೆಸ್ಟ್ ಇಂಡೀಸ್ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಜಿಂಬಾಬ್ವೆಗೆ ಪ್ರಯಾಣ ಮಾಡಿದೆ.

West Indies Pacer Jason Holder Turn Into A Off Spinner In Test Match Against Zimbabwe

ಪಂದ್ಯ ಗೆಲ್ಲಲು ಶತಪ್ರಯತ್ನ ಮಾಡಿದ ವಿಂಡೀಸ್

ಜಿಂಬಾಬ್ವೆ ವಿರುದ್ಧ ಪಂದ್ಯವನ್ನು ಗೆಲ್ಲಲೇಬೇಕೆಂದು ವೆಸ್ಟ್ ಇಂಡೀಸ್ ಸಾಕಷ್ಟು ಪ್ರಯತ್ನ ಮಾಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಮೊದಲನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 447 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.

ಟಗೆನರೈನ್ ಚಂದ್ರಪಾಲ್ ಅಜೇಯ ದ್ವಿಶತಕ ಸಿಡಿಸುವ ಮೂಲಕ ತಂಡ ಉತ್ತಮ ರನ್ ಗಳಿಸಲು ಸಹಾಯ ಮಾಡಿದರು. 467 ಎಸೆತಗಳಲ್ಲಿ 16 ಬೌಂಡರಿ 3 ಸಿಕಸ್ರ್ ಸಹಿತ ಅಜೇಯ 207 ರನ್ ಗಳಿಸಿದರು. ಕ್ರೈಗ್ ಬ್ರಾಥ್‌ವೈಟ್ ಕೂಡ 182 ರನ್‌ ಗಳಿಸಿ ಔಟಾದರು. ಈ ಜೋಡಿ ಮೊದಲನೇ ವಿಕೆಟ್‌ಗೆ 336 ರನ್ ಗಳಿಸುವ ಮೂಲಕ ದಾಖಲೆ ಬರೆದರು.

West Indies Pacer Jason Holder Turn Into A Off Spinner In Test Match Against Zimbabwe

ಜಿಂಬಾಬ್ವೆ ಉತ್ತಮ ಹೋರಾಟ

ನಂತರ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಉತ್ತಮ ಹೋರಾಟ ನೀಡಿತು ಗ್ಯಾರಿ ಬ್ಯಾಲೆನ್ಸ್ ಶತಕದ ನೆರವಿನಿಂದ 9 ವಿಕೆಟ್ ಕಳೆದುಕೊಂಡು 379 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಗ್ಯಾರಿ ಬ್ಯಾಲೆನ್ಸ್ 137 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ ಗಳಿಸಿದ್ದಾಗ ವೆಸ್ಟ್ ಇಂಡೀಸ್ ಡಿಕ್ಲೇರ್ ಮಾಡಿಕೊಂಡಿತು.

271 ರನ್‌ಗಳ ಹಿನ್ನಡೆಯಲ್ಲಿದ್ದ ಜಿಂಬಾಬ್ವೆ ಎರಡನೇ ಇನ್ನಿಂಗ್ಸ್‌ನಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು. 5ನೇ ದಿನದ ಅಂತ್ಯದವರೆಗೂ ವಿಕೆಟ್ ಕಾಪಾಡಿಕೊಂಡರು. 5ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 134 ರನ್ ಗಳಿಸುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಂಡರು. ಪಂದ್ಯವನ್ನು ಗೆಲ್ಲಲು ವೆಸ್ಟ್ ಇಂಡೀಸ್ ಮಾಡಿದ ಪ್ರಯತ್ನಗಳು ವಿಫಲವಾದವು.

Story first published: Wednesday, February 8, 2023, 23:21 [IST]
Other articles published on Feb 8, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+