ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿ ಮುಂದಕ್ಕೆ

ಪೋರ್ಟ್ ಆಫ್ ಸ್ಪೇನ್, ಏಪ್ರಿಲ್ 25: ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಮುಂದೂಡಲ್ಪಟ್ಟಿದೆ. ಕೊರೊನಾವೈರಸ್‌ನಿಂದಾಗಿ ಇಂಗ್ಲೆಂಡ್ ಪ್ರವಾಸ ಸರಣಿಯನ್ನು ಮುಂದೂಡಿರುವುದಾಗಿ ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಬ್ಲ್ಯೂಐ) ಶುಕ್ರವಾರ (ಏಪ್ರಿಲ್ 24) ಹೇಳಿದೆ.
ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದ್ದ ವೆಸ್ಟ್ ಇಂಡೀಸ್ ತಂಡ, ಜೂನ್ 4ರಿಂದ 8ರ ವರೆಗೆ ದ ಓವಲ್‌ನಲ್ಲಿ ಮೊದಲ ಪಂದ್ಯ, ಜೂನ್ 12ರಿಂದ 16ರವರೆಗೆ ಎಜ್‌ಬಾಸ್ಟನ್‌ನಲ್ಲಿ ದ್ವಿತೀಯ ಪಂದ್ಯ ಮತ್ತು ಜೂನ್ 25ರಿಂದ 29ರ ವರೆಗೆ ಲಾರ್ಡ್ಸ್ ಸ್ಟೇಡಿಯಂನಲ್ಲಿ ಮೂರನೇ ಟೆಸ್ಟ್ ಪಂದ್ಯ ಆಡುವುದರಲ್ಲಿತ್ತು.
ಕೊಡೊನಾವೈರಸ್‌ನಿಂದಾಗಿ ಇಂಗ್ಲೆಂಡ್‌ನಲ್ಲಿ ಕ್ರೀಡಾಸ್ಪರ್ಧೆಗಳು ನಿಲುಗಡೆಯಾಗಿದ್ದರಿಂದ ಮತ್ತು ಅಂತಾರಾಷ್ಟ್ರೀಯ ವಿಮಾನಯಾನವೂ ನಿಲುಗಡೆಯಾಗಿದ್ದರಿಂದ ಟೆಸ್ಟ್ ಪ್ರವಾಸ ಸರಣಿ ಎಷ್ಟರವರೆಗೆ ಮುಂದೂಡಲ್ಪಟ್ಟಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ತಿಳಿಸಿಲ್ಲ.
'ನಾವು ಯಾವತ್ತು ಮತ್ತು ಹೇಗೆ ಪ್ರವಾಸ ಸರಣಿಗೆ ದಿನಾಂಕವನ್ನು ಮರು ಹೊಂದಿಸಬಹುದು ಎಂಬುದನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಜೊತೆ ಚರ್ಚಿಸಲಿದ್ದೇವೆ,' ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾನಿ ಗ್ರೇವ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications