For Quick Alerts
ALLOW NOTIFICATIONS  
For Daily Alerts
 

3ನೇ ಟಿ20ಗೆ ಸ್ಟಾರ್‌ ಆಲ್‌ರೌಂಡರ್‌ ಕಣಕ್ಕಿಳಿಸಲು ವೆಸ್ಟ್‌ ಇಂಡೀಸ್‌ ಸಜ್ಜು

Fabian Allen 2019

ಜಾರ್ಜ್‌ಟೌನ್‌, ಆಗಸ್ಟ್‌ 06: ಗಾಯಾಳು ಖಾರಿ ಪಿಯರ್‌ ಅವರ ಬದಲಾಗಿ ಭಾರತ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಸ್ಟಾರ್‌ ಆಲ್‌ರೌಂಡರ್‌ ಫೇಬಿಯನ್‌ ಆಲೆನ್‌ ಅವರನ್ನು ಕಣಕ್ಕಿಳಿಸಲು ವೆಸ್ಟ್‌ ಇಂಡೀಸ್‌ ತಂಡ ಮುಂದಾಗಿದೆ.

ಫೇಬಿಯನ್‌ ಆಲೆನ್‌, ವೆಸ್ಟ್‌ ಇಂಡೀಸ್‌ ಪರ ಈವರೆಗೆ ಒಟ್ಟು 9 ಟಿ20 ಹಾಗೂ 10 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲದೆ ಕಳೆದ ತಿಂಗಳು ನಡೆದ ವಿಶ್ವಕಪ್‌ ಟೂರ್ನಿಯಲ್ಲೂ ವಿಂಡೀಸ್‌ ತಂಡವನ್ನು ಪ್ರತಿನಿಧಿಸಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಅರ್ಧಶತಕವನ್ನು ದಾಖಲಿಸಿದ್ದರು.

"ಫೇಬಿಯನ್‌ ಅತ್ಯಂತ ಚುರುಕಿನ ಆಟಗಾರ. ಮಿಂಚಿನ ಆಲ್‌ರೌಂಡರ್‌. ನಮ್ಮ ತಂಡಕ್ಕೆ ಪಂದ್ಯಗಳನ್ನು ಗೆದ್ದುಕೊಡುವ ಸಾಮರ್ಥ್ಯ ಅವರಲ್ಲಿದೆ ಎಂದು ನಂಬಿದ್ದೇವೆ. ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಅವರ ಪ್ರದರ್ಶನಗಳನ್ನು ಗಮನಿಸಿದ್ದೇನೆ. ಇತ್ತೀಚೆಗೆ ವಿಶ್ವಕಪ್‌ ಟೂರ್ನಿಯಲ್ಲೂ ಅವರು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು," ಎಂದು ವೆಸ್ಟ್‌ ಇಂಡೀಸ್‌ ತಂಡದ ಆಯ್ಕೆ ಸಮಿತಿಯ ಮಧ್ಯಂತರ ಮುಖ್ಯಸ್ಥ ರಾಬರ್ಟ್‌ ಹೇಯ್ನೆಸ್‌ ಹೇಳಿದ್ದಾರೆ.

"ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಸಲುವಾಗಿ ನಾವು ಯೋಜನೆ ರೂಪಿಸುತ್ತಿದ್ದೇವೆ. ಹೀಗಾಗಿ ಫೇಬಿಯನ್‌ ಅವರನ್ನು ತಂಡಕ್ಕೆ ಕರೆತರಲಾಗಿದೆ," ಎಂದಿದ್ದಾರೆ.

ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಸರಣಿಯಲ್ಲಿ 2-0 ಅಂತರದ ಮೇಲುಗೈ ಪಡೆದುಕೊಂಡಿದೆ. ಇದೀಗ ಮಂಗಳವಾರ ಇಲ್ಲಿನ ಗಯಾನದಲ್ಲಿನ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಪಂದ್ಯವನ್ನು ಗೆದ್ದು ಸರಣಿ ಕ್ಲೀನ್‌ ಸ್ವೀಪ್‌ ಮಾಡುವುದು ಭಾರತ ತಂಡದ ಗುರಿಯಾಗಿದೆ. ಅಲ್ಲದೆ ಈಗಾಗಲೇ ಸರಣಿ ವಶ ಪಡಿಸಿಕೊಂಡಿರುವ ಕೊಹ್ಲಿ ಪಡೆ, ಮೂರನೇ ಪಂದ್ಯದಲ್ಲಿ ತನ್ನ ಬೆಂಚ್‌ ಕಾಯುತ್ತಿರುವ ಆಟಗಾರರ ಸಾಮರ್ಥ್ಯ ಅಳೆಯುವ ಪ್ರಯತ್ನ ನಡೆಸಲಿದೆ.

ಕಳೆದ ಶನಿವಾರ ಫ್ಲೋರಿಡಾದಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ವೆಸ್ಟ್‌ ಇಂಡೀಸ್‌ ವಿರುದ್ಧ 4 ವಿಕೆಟ್‌ಗಳ ಜಯ ದಾಖಲಿಸಿತು. ಬಳಿಕ ಭಾನುವಾರ ಅದೇ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಮಳೆ ಕಾರಣ ಸಂಪೂರ್ಣವಾಗಿ ನಡೆಯಲು ಸಾಧ್ಯವಾಗದೇ ಇದ್ದರೂ, ಭಾರತ ತಂಡಕ್ಕೆ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 22 ರನ್‌ ಗೆಲುವು ಪ್ರಾಪ್ತಿಯಾಯಿತು.

1
46246

Story first published: Tuesday, August 6, 2019, 16:21 [IST]
Other articles published on Aug 6, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+