T20 World Cup: ವೆಸ್ಟ್ ಇಂಡೀಸ್‌ಗೆ 30 ರನ್ ಜಯ: ಅಗ್ರಸ್ಥಾನಕ್ಕೆ ಬಡ್ತಿ
ಮುಂಬೈ: ಭರವಸೆಯ ಬ್ಯಾಟರ್ ಶೆರ್ಫೇನ್ ರುದರ್ಫೋರ್ಡ್ ಹಾಗೂ ಬೌಲರ್‌ಗಳ ಬಿಗುವಿನ ದಾಳಿಯ ನೆರವಿನಿಂದ ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್‌ನ "ಸಿ" ಗುಂಪಿನ ಪಂದ್ಯದಲ್ಲಿ 30 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತು. ಆಡಿರುವ ಎರಡೂ ಪಂದ್ಯಗಳನ್ನು ಗೆದ್ದ ವೆಸ್ಟ್ ಇಂಡೀಸ್ ಸಿ ಗುಂಪಿನಲ್ಲಿ ಅಗ್ರ ಸ್ಥಾನ ಭದ್ರಪಡಿಸಿಕೊಂಡಿದೆ.
ಇಂಗ್ಲೆಂಡ್ ವಿರುದ್ಧ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ಬ್ರಾಂಡನ್ ಕಿಂಗ್ (1), ಶಾಯ್ ಹೋಪ್ (0) ರನ್ ಕಲೆ ಹಾಕುವಲ್ಲಿ ವಿಫಲರಾದರು. 8 ರನ್‌ಗಳಿದ್ದಾಗ ವಿಂಡೀಸ್ 2 ವಿಕೆಟ್ ಕಳೆದುಕೊಂಡಿತು. ಮೂರನೇ ವಿಕೆಟ್‌ಗೆ ಶಿಮ್ರೋನ್ ಹಿಟ್ಮೇಯರ್ ಹಾಗೂ ರಸ್ಟೋನ್ ಚೇಸ್ ಜೋಡಿ ತಂಡಕ್ಕೆ ಕೊಂಚ ಆಧಾರವಾಯಿತು. ಈ ಜೋಡಿ ಪವರ್ ಪ್ಲೇನಲ್ಲಿ ವಿಕೆಟ್ ಬೀಳದಂತೆ ನೋಡಿಕೊಳ್ಳುವ ಯೋಚನೆ ಹೊಂದಿದ್ದರು. ಆದರೆ 5.5 ಓವರ್‌ನಲ್ಲಿ ತಂಡದ ಮೊತ್ತ 55 ರನ್ ಆಗಿದ್ದಾಗ ಹೆಟ್ಮೇಯರ್ ಔಟ್ ಆದರು. ಇವರ ಇನಿಂಗ್ಸ್‌ನಲ್ಲಿ 2 ಬೌಂಡರಿ, 2 ಸಿಕ್ಸರ್‌ಗಳು ಸೇರಿವೆ. ರೋಸ್ಟನ್ ಚೇಸ್ 29 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 34 ರನ್ ಸಿಡಿಸಿದರು.

ಶೆರ್ಫೇನ್ ರುದರ್ಫೋರ್ಡ್ ಸೊಬಗು
ಶೆರ್ಫೇನ್ ರುದರ್ಫೋರ್ಡ್ ಹಾಗೂ ರೋವನ್ ಪಾವೆಲ್ (14) ಜೋಡಿ ಸಹ ಅರ್ಧಶತಕ ಜೊತೆಯಾಟವನ್ನು ನೀಡಿತು. 6ನೇ ವಿಕೆಟ್‌ಗೆ ರುದರ್ಫೋರ್ಡ್ ಅವರನ್ನು ಸೇರಿಕೊಂಡ ಜೇಸನ್ ಹೋಲ್ಡರ್ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. 61 ರನ್ ಬಾರಿಸಲು ಈ ಜೋಡಿ 32 ರನ್ ಸೇರಿಸಿ ಆರ್ಭಟಿಸಿತು. ಭರವಸೆಯ ಬ್ಯಾಟರ್ ಶೆರ್ಫೇನ್ ರುದರ್ಫೋರ್ಡ್ 2 ಬೌಂಡರಿ, 7 ಸಿಕ್ಸರ್ ಸಹಾಯದಿಂದ ಅಜೇಯ 76 ರನ್ ಸಿಡಿಸಿದರು. ಅಂತಿಮವಾಗಿ ವೆಸ್ಟ್ ಇಂಡೀಸ್ 6 ವಿಕೆಟ್‌ಗೆ 196 ರನ್ ಸೇರಿಸಿತು.
ಇಂಗ್ಲೆಂಡ್ ತಂಡದ ಪರ ಜೇಮೀ ಓವರ್ಟನ್ ಮತ್ತು ಆದಿಲ್ ರಶೀದ್ ತಲಾ 2 ವಿಕೆಟ್ ಕಬಳಿಸಿದರು.
ಜವಾಬ್ದಾರಿ ಮರೆತ ಇಂಗ್ಲೆಂಡ್ ಬ್ಯಾಟರ್ಸ್
ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರರು ತಂಡಕ್ಕೆ ದೊಡ್ಡ ಆರಂಭ ನೀಡಲಿಲ್ಲ. ತಮ್ಮ ಬಿರುಸಿನ ಆಟಕ್ಕೆ ಹೆಸರುವಾಸಿಯಾಗಿರುವ ಫಿಲ್ ಸಾಲ್ಟ್ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 30 ರನ್ ಸಿಡಿಸಿದರು. ಜೋಸ್ ಬಟ್ಲರ್ ಹಾಗೂ ಜಾಕೊಬ್ ಬೆಥೆಲ್ ಜೋಡಿ ತಂಡಕ್ಕೆ ಕೊಂಚ ಆಧಾರವಾಯಿತು. ಈ ಜೊಡಿ ಆಟಕ್ಕೆ ಬ್ರೇಕ್ ಹಾಕುವಲ್ಲಿ ರೋಸ್ಟನ್ ಚೇಸ್ ಸಫಲರಾದರು. ಬಟ್ಲರ್ ಆಟ 21 ರನ್‌ಗಳಿಗೆ ಅಂತ್ಯವಾಯಿತು.

ಲೀಗ್ ಹಂತದ ಮೊದಲ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದ ಬೆಥೆಲ್ ಎರಡನೇ ಪಂದ್ಯದಲ್ಲಿ 33 ರನ್‌ಳಿಗೆ ಆಟ ಮುಗಿಸಿದರು. ನಾಯಕ ಹ್ಯಾರಿ ಬ್ರೂಕ್ ಸಹ 17 ರನ್ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸ್ಯಾಮ್ ಕರನ್ ಅಜೇಯ 43 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಇಂಗ್ಲೆಂಡ್ 166 ರನ್‌ಗಳಿಗೆ ಆಲೌಟ್ ಆಯಿತು.
ವೆಸ್ಟ್ ಇಂಡೀಸ್ ತಂಡದ ಪರ ಗುಡಕೇಶ್ ಮೋತಿ ಮೂರು ವಿಕೆಟ್ ಉರುಳಿಸಿದರು.
ಅಂಕಪಟ್ಟಿ ವಿವರ
"ಸಿ" ಗುಂಪಿನಲ್ಲಿ ವೆಸ್ಟ್ ಇಂಡೀಸ್ ಸದ್ಯ ಅಗ್ರಸ್ಥಾನವನ್ನು ಪಡೆದಿದೆ. ಇನ್ನು ಸ್ಕಾಟ್ಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ತಲಾ ಒಂದು ಗೆಲುವು ಒಂದು ಸೋಲನ್ನು ಕಂಡಿವೆ. ಆದರೆ ರನ್ ರೇಟ್‌ನಲ್ಲಿ ಸ್ಕಾಟ್ಲೆಂಡ್ ಉತ್ತಮವಾಗಿದ್ದು, ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದೆ. ನೇಪಾಳ ನಾಲ್ಕು, ಇಟಲಿ ಐದನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications