Test: ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಪಂದ್ಯ ಡ್ರಾ: ಮಹಾರಾಜ್ ಪಂದ್ಯ ಶ್ರೇಷ್ಠ
ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಡ್ರಾ ದಲ್ಲಿ ಅಂತ್ಯವಾಗಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅಪಾಯದ ಸ್ಥಿತಿಯಲ್ಲಿತ್ತು. ಆಗ ಅಲಿಕ್ ಅಥಾನಾಜೆ ತಂಡಕ್ಕೆ ನೆರವಾದರು.
ದಕ್ಷಿಣ ಆಫ್ರಿಕಾ ಸೋಮವಾರ ವಿಕೆಟ್ ನಷ್ಟವಿಲ್ಲದೆ 30 ರನ್‌ಗಳಿಂದ ಆಟ ಮುಂದುವರೆಸಿ, 3 ವಿಕೆಟ್‌ಗೆ 173 ರನ್‌ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. 298 ರನ್‌ಗಳ ಕಠಿಣ ಗುರಿಯನ್ನು ಹಿಂಬಾಲಿಸಿದ ವೆಸ್ಟ್ ಇಂಡೀಸ್ ಐದು ವಿಕೆಟ್‌ಗೆ 201 ರನ್ ಗಳಿಸಿದ್ದಾಗ ಮೊದಲ ಟೆಸ್ಟ್ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.

ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಟೋನಿ ಡಿ ಜೋರ್ಜಿ (45), ಐಡೆನ್ ಮಾರ್ಕ್ರಮ್ (38), ತೆಂಬು ಬವುಮಾ (ಅಜೇಯ 15) ತಂಡಕ್ಕೆ ನೆರವಾದರು. ಟ್ರಿಸ್ಟಾನ್ ಸ್ಟಬ್ಸ್ ಒಟ್ಟಾರೆ 50 ಎಸೆತಗಳನ್ನು ಎದುರಿಸಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 68 ರನ್ ಸಿಡಿಸಿದರು. ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 173 ರನ್ ಸಿಡಿಸಿದಾಗ ಡಿಕ್ಲೇರ್ ಮಾಡಿಕೊಂಡಿತು.
ಪಂದ್ಯ ಡ್ರಾ
ವೆಸ್ಟ್ ಇಂಡೀಸ್ ಗೆಲುವಿಗೆ 298 ರನ್ ಟಾರ್ಗೆಟ್ ನೀಡಲಾಯಿತು. ವೆಸ್ಟ್ ಇಂಡೀಸ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅಲೆಕ್ ಅತಾನಾಜೆ ಬ್ಯಾಟಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದರು. ಇವರು 9 ಬೌಂಡರಿ ನೆರವಿನಿಂದ 92 ರನ್ ಬಾರಿಸಿ ಔಟ್ ಆದರು. ಜೇಸನ್ ಹೋಲ್ಡರ್ 31 ರನ್ ಗಳಿಸಿ ಅಜೇಯರಾಗುಳಿದರು. ಆದರೆ ಕೊನೆಯಲ್ಲಿ ಪಂದ್ಯ ಡ್ರಾ ಆಯಿತು. ಇದೀಗ ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 15 ರಿಂದ ನಡೆಯಲಿದೆ.

ಮಹಾರಾಜ್ ಪಂದ್ಯ ಶ್ರೇಷ್ಠ
ಕೇಶವ ಮಹಾರಾಜ್ ಮೊದಲ ಇನ್ನಿಂಗ್ಸ್‌ನಂತೆ ಎರಡನೇ ಇನ್ನಿಂಗ್ಸ್‌ನಲ್ಲೂ ಅಮೋಘ ದಾಳಿಯನ್ನು ಸಂಘಟಿಸಿದರು. ಇವರು 88 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ಇನ್ನೊಂದು ವಿಕೆಟ್ ಐಡೆನ್ ಮಾರ್ಕ್ರಮ್ ಪಾಲಾಯಿತು.
ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿ
ಭಾರತ ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಆಡಿರುವ 9 ಪಂದ್ಯಗಳಲ್ಲಿ 74 ಅಂಕ ಕಲೆ ಹಾಕಿದ್ದು, ಗೆಲುವಿನ ಸರಾಸರಿ 68.52 ಆಗಿದೆ. ಆಸ್ಟ್ರೇಲಿಯಾ ಎರಡು, ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ 7ನೇ ಸ್ಥಾನದಲ್ಲಿದೆ.
ದಕ್ಷಿಣ ಆಫ್ರಿಕಾ ಇದುವರೆಗೆ 5 ಪಂದ್ಯಗಳನ್ನು ಆಡಿದ್ದು, ಒಂದು ಪಂದ್ಯ ಗೆದ್ದಿದೆ. ಮೂರರಲ್ಲಿ ಸೋಲನ್ನು ಕಂಡಿದೆ. ತಂಡವು ಈ 26.67 ಅಂಕಗಳನ್ನು ಹೊಂದಿದೆ. ಮತ್ತೊಂದೆಡೆ, ವೆಸ್ಟ್ ಇಂಡೀಸ್ ತಂಡವು 8 ಪಂದ್ಯಗಳನ್ನು ಆಡಿದ್ದು, ಒಂದು ಗೆಲುವಿನೊಂದಿಗೆ 20.83 ಅಂಕಗಳನ್ನು ಹೊಂದಿದ್ದು, ಕೊನೆಯ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications