For Quick Alerts
ALLOW NOTIFICATIONS  
For Daily Alerts
 

ENG vs WI: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ; ಸ್ಪೋಟಕ ಬ್ಯಾಟರ್‌ಗೆ ಸ್ಥಾನ

ತವರಿನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ತಂಡಕ್ಕೆ ಸ್ಪೋಟಕ ಬ್ಯಾಟರ್ ಶಿಮ್ರಾನ್ ಹೆಟ್ಮಿಯರ್ ಮರಳಿದ್ದಾರೆ.

ಮುಂದಿನ ತಿಂಗಳು ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಇಂಗ್ಲೆಂಡ್ ಮತ್ತು ವೆಸ್ಟ್‌ ಇಂಡೀಸ್ ತಂಡಗಳ ನಡುವಿನ ಏಕದಿನ ಸರಣಿ ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಅಕ್ಟೋಬರ್ 31 ಮತ್ತು ನವೆಂಬರ್ 2 ರಂದು ಎರಡನೇ ಏಕದಿನ ಪಂದ್ಯ ನಡೆಯಲಿದೆ. ಕೊನೆಯ ಮೂರನೇ ಏಕದಿನ ಪಂದ್ಯ ನವೆಂಬರ್ 6 ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯಲಿದೆ.

West Indies squad announced for ODI series against England at home

ಹೆಟ್ಮಿಯರ್ ಕಮ್‌ಬ್ಯಾಕ್

ಬಹುದಿನಗಳ ಬಳಿಕ ಸ್ಫೋಟಕ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ವೆಸ್ಟ್ ಇಂಡೀಸ್ ತಂಡಕ್ಕೆ ಮರಳಿದ್ದಾರೆ. ಅಲೆಕ್ ಅಥಾನಾಜೆ ಬದಲಿಗೆ ಹೆಟ್ಮೆಯರ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಈ ತಿಂಗಳ ಆರಂಭದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ವೆಸ್ಟ್ ಇಂಡೀಸ್ ತಂಡದಲ್ಲಿನ ಏಕೈಕ ಬದಲಾವಣೆ ಇದಾಗಿದೆ. ಕಳೆದ ವರ್ಷಾಂತ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ನಂತರ ಹೆಟ್ಮೆಯರ್ ವೆಸ್ಟ್ ಇಂಡೀಸ್ ಪರ ಯಾವುದೇ ಏಕದಿನ ಸರಣಿಯಲ್ಲಿ ಕಾಣಿಸಿಕೊಂಡಿಲ್ಲ.

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಶಾಯ್ ಹೋಪ್ ತಂಡವನ್ನು ಮುನ್ನಡೆಸಲಿದ್ದು, ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ ಪದಾರ್ಪಣೆ ಮಾಡಿದ್ದ ಯುವ ಆಟಗಾರ ಜ್ಯುವೆಲ್ ಆಂಡ್ರ್ಯೂ ಅವರು ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಹೆಡ್‌ಕೋಚ್‌ ಹೇಳಿದ್ದೇನು?

ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಂಬಂಧಿಸಿದಂತೆ ಹೆಡ್‌ ಕೋಚ್ ಡೇರೆನ್ ಸ್ಯಾಮಿ ಪ್ರಮುಲ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಆಡುವುದು ಯಾವಾಗಲೂ ಹೊಸ ಸವಾಲಾಗಿದೆ. ಈ ಸರಣಿ ಕೆರಿಬಿಯನ್ ಜನರು ಕುತೂಹಲದಿಂದ ಕಾಯುತ್ತಿರುವ ರೋಚಕ ಪಂದ್ಯವನ್ನು ಆನಂದಿಸಲು ಒಂದು ಅವಕಾಶವಾಗಿದೆ. ಇಂಗ್ಲೆಂಡ್ ನಮ್ಮ ಯಾವುದೇ ಸವಾಲನ್ನು ಎದುರಿಸಿದರೆ, ನಮ್ಮ ಆಟವನ್ನು ಸುಧಾರಿಸಲು ಕೆಲವು ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ. ಈ ಪೈಪೋಟಿ ದಶಕಗಳಷ್ಟು ಹಳೆಯದಾಗಿದ್ದು, ಕಳೆದ ವರ್ಷ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ ಅವರನ್ನು ಮೊದಲ ಬಾರಿಗೆ ಸೋಲಿಸಿದ ನಂತರ, ನಾವು ಮತ್ತೆ ಬಲಿಷ್ಠ ಇಂಗ್ಲೆಂಡ್ ತಂಡದ ಸವಾಲನ್ನು ಎದುರಿಸಲು ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಸಮತೋಲಿತ ತಂಡ

ಐಸಿಸಿ 2027ರ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವುದು ನಮ್ಮ ಗುರಿಯಾಗಿದೆ. ಆದ್ದರಿಂದ ನಾವು ಸಮತೋಲಿತ ತಂಡವನ್ನು ಆಯ್ಕೆ ಮಾಡಿದ್ದೇವೆ. ಈ ತಂಡ ಕಂಡಿತವಾಗಿ ವಿಶ್ವದ ಅತ್ಯುತ್ತಮ ತಂಡಗಳೊಂದಿಗೆ ಸ್ಪರ್ಧಿಸುತ್ತದೆ ಎಂದು ಸ್ಯಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ವೆಸ್ಟ್ ಇಂಡೀಸ್ ತಂಡ

ಶಾಯ್ ಹೋಪ್ (ನಾಯಕ), ಜ್ಯುವೆಲ್ ಆಂಡ್ರ್ಯೂ, ಕೇಸಿ ಕಾರ್ಟಿ, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮೆಯರ್, ಅಲ್ಜಾರಿ ಜೋಸೆಫ್, ಶಾಮರ್ ಜೋಸೆಫ್, ಬ್ರ್ಯಾಂಡನ್ ಕಿಂಗ್, ಎವಿನ್ ಲೆವಿಸ್, ಗುಡಾಕೇಶ್ ಮೋತಿ, ಶೆರ್ಫೇನ್ ರುದರ್‌ಫೋರ್ಡ್, ಜೇಡನ್ ಸೀಲ್ಸ್, ರೊಮಾರಿಯೋ ಶೆಫರ್ಡ್, ಹೇಡನ್ ವಾಲ್ಷ್ ಜೂನಿಯರ್.

Story first published: Wednesday, October 30, 2024, 16:16 [IST]
Other articles published on Oct 30, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+