For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ; 2 ವರ್ಷಗಳ ಬಳಿಕ ಮರಳಿದ ಸ್ಟಾರ್ ಆಲ್‌ರೌಂಡರ್!

ಮುಂದಿನ ವರ್ಷ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್‌ಗೆ ಪೂರ್ವಭಾವಿಯಾಗಿ ವೆಸ್ಟ್ ಇಂಡೀಸ್ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದ್ದು, ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಮುಂಬರುವ 5 ಪಂದ್ಯಗಳ ಟಿ20 ಸರಣಿಗೆ 15 ಸದಸ್ಯರ ಪವರ್-ಪ್ಯಾಕ್ಡ್ ತಂಡವನ್ನು ಪ್ರಕಟಿಸಿದೆ.

ರೋವ್‌ಮನ್ ಪೊವೆಲ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡವು ಡಿಸೆಂಬರ್ 12ರಿಂದ ಡಿಸೆಂಬರ್ 21ರವರೆಗೆ 5 ಪಂದ್ಯಗಳ ಟಿ20 ಸರಣಿಗೆ ಜೋಸ್ ಬಟ್ಲರ್ ನಾಯಕತ್ವದ ಪ್ರವಾಸಿ ಇಂಗ್ಲೆಂಡ್‌ ತಂಡಕ್ಕೆ ಆತಿಥ್ಯ ವಹಿಸಲಿದೆ. ಮುಂದಿನ ವರ್ಷದ ವಿಶ್ವಕಪ್‌ನಲ್ಲಿ ಎರಡು ಸಂಭಾವ್ಯ ನೆಚ್ಚಿನ ತಂಡಗಳ ನಡುವಿನ ಪ್ರಮುಖ ಕದನವಾಗಿದೆ.

West Indies Squad Announced for T20 Series Against England; Andre Russell Returned after 2 Years

ಮುಂಬರುವ ಟಿ20 ವಿಶ್ವಕಪ್‌ಗೆ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಆತಿಥ್ಯ ವಹಿಸಲಿದೆ. ಹೀಗಾಗಿ ವೆಸ್ಟ್ ಇಂಡೀಸ್ ತಮ್ಮ ಸ್ಟಾರ್ ಆಲ್‌ರೌಂಡರ್ ಆಂಡ್ರೆ ರಸೆಲ್ ಅವರನ್ನು ಮರಳಿ ಕರೆತಂದಿದೆ. ಕೆಕೆಆರ್ ಸ್ಟಾರ್ 2021ರ ಟಿ20 ವಿಶ್ವಕಪ್ ನಂತರ ಮೊದಲ ಬಾರಿಗೆ ಟಿ20 ತಂಡಕ್ಕೆ ಪುನರಾಗಮನ ಮಾಡಿದ್ದಾರೆ.

35 ವರ್ಷದ ಸ್ಫೋಟಕ ಆಲ್‌ರೌಂಡರ್ ಆಂಡ್ರೆ ರಸೆಲ್ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಎರಡು ವರ್ಷಗಳ ವಿರಾಮದ ನಂತರ ಮರಳಿ ಕರೆಸಿಕೊಂಡಿರುವುದರಿಂದ ಟಿ20 ವಿಶ್ವಕಪ್ ತಂಡದ ಯೋಜನೆಗೆ ಮರಳಿದ್ದಾರೆ.

ಹೆಚ್ಚುವರಿಯಾಗಿ, ಇಂಗ್ಲೆಂಡ್ ವಿರುದ್ಧದ ಸರಣಿಯ ಅಂತಿಮ ಏಕದಿನ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಆಟಗಾರ ಎಂದು ಪ್ರಶಸ್ತಿ ಪಡೆದ ಮ್ಯಾಥ್ಯೂ ಫೋರ್ಡ್ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

West Indies Squad Announced for T20 Series Against England; Andre Russell Returned after 2 Years

ಏಕದಿನ ಸರಣಿಯಲ್ಲಿ ಬ್ಯಾಟ್‌ನೊಂದಿಗೆ ಉತ್ತಮ ಪ್ರದರ್ಶನ ನೀಡಿದ ಶೆರ್ಫೇನ್ ರುದರ್‌ಫೋರ್ಡ್‌ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಸಂಖ್ಯೆಯ ಅಂತಾರಾಷ್ಟ್ರೀಯ ಪಂದ್ಯಗಳನ್ನು ಕಳೆದುಕೊಂಡಿರುವ ನಿಕೋಲಸ್ ಪೂರನ್ ಮತ್ತು ಜೇಸನ್ ಹೋಲ್ಡರ್ ಅವರನ್ನೂ ಸಹ ತಂಡದಲ್ಲಿ ಹೆಸರಿಸಲಾಗಿದೆ.

"ಇದು 2023ರಲ್ಲಿ ವೆಸ್ಟ್ ಇಂಡೀಸ್‌ಗೆ ಅಂತಿಮ ಸ್ವದೇಶಿ ಟಿ20 ಸರಣಿಯಾಗಿದೆ. ಏಕೆಂದರೆ ಜೂನ್ 2024ರಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆಯುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗಾಗಿ ತಯಾರಿ ನಡೆಸಲಿದೆ. ಆ ಪಂದ್ಯಾವಳಿಯಲ್ಲಿ ನಮಗೆ ಯಶಸ್ಸಿನ ಉತ್ತಮ ಅವಕಾಶವನ್ನು ನೀಡುವ ತಂಡವನ್ನು ನಾವು ಆಯ್ಕೆ ಮಾಡಿದ್ದೇವೆ," ಎಂದು ತಂಡದ ಪ್ರಕಟಣೆಯ ನಂತರ ಕ್ರಿಕೆಟ್ ವೆಸ್ಟ್ ಇಂಡೀಸ್‌ನ ಆಯ್ಕೆ ಸಮಿತಿ ಮುಖ್ಯಸ್ಥ ಡೆಸ್ಮಂಡ್ ಹೇನ್ಸ್ ಹೇಳಿದರು.

ಇದೇ ವೇಳೆ, ವೆಸ್ಟ್ ಇಂಡೀಸ್‌ ಏಕದಿನ ತಂಡದ ನಾಯಕ ಶಾಯ್ ಹೋಪ್ ಅವರನ್ನು ಟಿ20 ತಂಡದ ಉಪನಾಯಕರನ್ನಾಗಿ ನೇಮಿಸಲಾಗಿದೆ ಮತ್ತು ಆಯ್ಕೆ ಸಮಿತಿಯು ಸರಣಿಯ ಅಂತಿಮ ಎರಡು ಪಂದ್ಯಗಳಿಗೆ ತಂಡವನ್ನು ಸರಿಹೊಂದಿಸಲು ಅವಕಾಶವನ್ನು ಹೊಂದಿರಲಿದೆ.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ವೆಸ್ಟ್ ಇಂಡೀಸ್ ತಂಡ

ರೋವ್ಮನ್ ಪೊವೆಲ್ (ನಾಯಕ), ಶಾಯ್ ಹೋಪ್ (ಉಪನಾಯಕ), ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಅಕೆಲ್ ಹೊಸೆನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಾಕೇಶ್ ಮೋಟಿ, ನಿಕೋಲಸ್ ಪೂರನ್, ಆಂಡ್ರೆ ರಸೆಲ್, ಶೆರ್ಫೇನ್ ರುದರ್‌ಫೋರ್ಡ್, ರೊಮಾರಿಯೋ ಶೆಫರ್ಡ್.

Story first published: Sunday, December 10, 2023, 10:42 [IST]
Other articles published on Dec 10, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+