AUS vs WI: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ; 7 ಅನ್‌ಕ್ಯಾಪ್ಡ್ ಆಟಗಾರರಿಗೆ ಚಾನ್ಸ್!
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು 2024ರ ಜನವರಿಯಲ್ಲಿ ಕಷ್ಟಕರವಾದ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಳ್ಳಲಿದೆ. ಪ್ಯಾಟ್ ಕಮಿನ್ಸ್ ನಾಯಕತ್ವದ ತಂಡದ ವಿರುದ್ಧ ಎರಡು ಟೆಸ್ಟ್ ಪಂದ್ಯ, ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲು ಪ್ರಬಲ ಪ್ರದರ್ಶನವನ್ನು ನೀಡಲು ಎದುರು ನೋಡುತ್ತದೆ.
ಗುರುವಾರ, ಡಿಸೆಂಬರ್ 21ರಂದು ಕ್ರಿಕೆಟ್ ವೆಸ್ಟ್ ಇಂಡೀಸ್ (CWI) 15-ಸದಸ್ಯರ ತಂಡವನ್ನು ಪ್ರಕಟಿಸಿದೆ. ಇದು ಬಹು-ಮಾದರಿ ಸರಣಿಯ ಟೆಸ್ಟ್ ಸರಣಿಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ತಂಡವನ್ನು ಎದುರಿಸಲಿದೆ.

ಮಾಜಿ ನಾಯಕ ಜೇಸನ್ ಹೋಲ್ಡರ್ ಮತ್ತು ಆಲ್‌ರೌಂಡರ್ ಕೈಲ್ ಮೇಯರ್ಸ್ ಇಲ್ಲದಿರುವ ತಂಡದಲ್ಲಿ 7 ಅನ್‌ಕ್ಯಾಪ್ಡ್ ಆಟಗಾರರನ್ನು ಹೆಸರಿಸಲಾಗಿದೆ. ಕ್ರಿಕೆಟ್ ವೆಸ್ಟ್ ಇಂಡೀಸ್ ಪ್ರಕಾರ, ಇಬ್ಬರು ಅನುಭವಿ ಆಟಗಾರರು ಜನವರಿಯಲ್ಲಿ ಟಿ20 ಒಪ್ಪಂದಗಳನ್ನು ಮುಂದುವರಿಸಲು ಬಯಸುತ್ತಿರುವುದರಿಂದ ಆಯ್ಕೆಗೆ ತಮ್ಮನ್ನು ತಾವು ಅಲಭ್ಯಗೊಳಿಸಿದ್ದಾರೆ.
ಕಳೆದ ಜುಲೈನಲ್ಲಿ ಭಾರತ ತಂಡದ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದ ಅನ್‌ಕ್ಯಾಪ್ಡ್ ಆಲ್‌ರೌಂಡರ್ ಕೆವಿನ್ ಸಿಂಕ್ಲೇರ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿದೆ.
ಕೆವಿನ್ ಸಿಂಕ್ಲೇರ್, ಬ್ಯಾಟರ್ ಜಕಾರಿ ಮೆಕ್‌ಕಾಸ್ಕಿ, ವಿಕೆಟ್‌ಕೀಪರ್ ಟೆವಿನ್ ಇಮ್ಲಾಚ್, ಆಲ್‌ರೌಂಡರ್‌ಗಳಾದ ಜಸ್ಟಿನ್ ಗ್ರೀವ್ಸ್ ಮತ್ತು ಕವೆಮ್ ಹಾಡ್ಜ್, ವೇಗದ ಬೌಲರ್‌ಗಳಾದ ಅಕೀಮ್ ಜೋರ್ಡಾನ್ ಮತ್ತು ಶಮರ್ ಜೋಸೆಫ್ ಅವರು ರಾಷ್ಟ್ರೀಯ ತಂಡದಿಂದ ಮೊದಲ ಕರೆ ಸ್ವೀಕರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವೆಸ್ಟ್ ಇಂಡೀಸ್ ಪರ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಎಡಗೈ ಸ್ಪಿನ್ನರ್ ಗುಡಾಕೇಶ್ ಮೋಟಿ ಅವರನ್ನು ಟೆಸ್ಟ್ ತಂಡಕ್ಕೆ ವಾಪಸ್ ತರಲಾಗಿದೆ.
ಗುಡಾಕೇಶ್ ಮೋಟಿ ದಕ್ಷಿಣ ಆಫ್ರಿಕಾ ವಿರುದ್ಧ ಮಾರ್ಚ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ಪರ ತಮ್ಮ ಕೊನೆಯ ಪಂದ್ಯವನ್ನು ಬಿಳಿ ಜೆರ್ಸಿಯಲ್ಲಿ ಆಡಿದ್ದರು.
ಕ್ರೇಗ್ ಬ್ರಾಥ್‌ವೈಟ್ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಲಿದ್ದರೆ, ಅನುಭವಿ ವೇಗದ ಬೌಲರ್ ಅಲ್ಜಾರಿ ಜೋಸೆಫ್ ಅವರನ್ನು ಉಪನಾಯಕನ ಸ್ಥಾನಕ್ಕೆ ನೇಮಿಸಲಾಗಿದೆ.
ಜನವರಿ 17ರಂದು ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ ತಂಡವು ನಾಲ್ಕು ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ. ಎರಡನೇ ಟೆಸ್ಟ್ ಪಂದ್ಯವು ಜನವರಿ 25ರಿಂದ ಗಬ್ಬಾದಲ್ಲಿ ಪಿಂಕ್ ಬಾಲ್ ಪಂದ್ಯ ನಡೆಯಲಿದೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗಾಗಿ ವೆಸ್ಟ್ ಇಂಡೀಸ್ ತಂಡ
ಕ್ರೇಗ್ ಬ್ರಾಥ್‌ವೈಟ್ (ನಾಯಕ), ಟಗೆನರೈನ್ ಚಂದ್ರಪಾಲ್, ಅಲಿಕ್ ಅಥಾನಾಜೆ, ಕಿರ್ಕ್ ಮೆಕೆಂಜಿ, ಜೋಶುವಾ ಡ ಸಿಲ್ವಾ, ಅಲ್ಜಾರಿ ಜೋಸೆಫ್ (ಉಪನಾಯಕ), ಕೆಮರ್ ರೋಚ್, ಕೆವಿನ್ ಸಿಂಕ್ಲೇರ್, ಕವೆಮ್ ಹಾಡ್ಜ್, ಜಸ್ಟಿನ್ ಗ್ರೀವ್ಸ್, ಏಕೀಮ್ ಜೋರ್ಡಾನ್, ಗುಡಾಕೇಶ್ ಮೋಟಿ, ಟೆವಿನ್ ಇಮ್ಲಾಚ್. ಶಮರ್ ಜೋಸೆಫ್, ಜಕಾರಿ ಮೆಕಾಸ್ಕಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications