Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೀಲಂಕಾ ವಿರುದ್ಧದ ಸರಣಿಗೆ ವಿಂಡೀಸ್ ತಂಡ ಪ್ರಕಟ, ಗೇಲ್ ವಾಪಸ್

West Indies T20I squad announced for Sri Lanka series, Chris Gayle returned

ಪೋರ್ಟ್ ಆಫ್‌ ಸ್ಪೇನ್: ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್ ಗೇಲ್ ವೆಸ್ಟ್‌ ಇಂಡೀಸ್ ಟಿ20ಐ ತಂಡಕ್ಕೆ ವಾಪಸ್ಸಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20ಐ ಸರಣಿಗೆ ಪ್ರಕಟಿಸಲಾದ ವೆಸ್ಟ್‌ ಇಂಡೀಸ್ ತಂಡದಲ್ಲಿ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಹೆಸರು ಕೂಡ ಇದೆ. ವೇಗಿ ಫಿಡೆಲ್ ಎಡ್ವರ್ಡ್ಸ್ ಕೂಡ ತಂಡದಲ್ಲಿ ಹೆಸರಿಸಲ್ಪಟ್ಟಿದ್ದಾರೆ.

41ರ ಹರೆಯದ ಕ್ರಿಸ್ ಗೇಲ್ ಸುಮಾರು 2 ವರ್ಷಗಳಿಂದಲೂ ವೆಸ್ಟ್‌ ಇಂಡೀಸ್ ಟಿ20 ತಂಡದಿಂದ ಹೊರಗಿದ್ದರು. ಶ್ರೀಲಂಕಾ-ವೆಸ್ಟ್‌ ಇಂಡೀಸ್ ಮೂರು ಪಂದ್ಯಗಳ ಟಿ20ಐ ಸರಣಿ ಮಾರ್ಚ್ 3ರಿಂದ 7ರ ವರೆಗೆ ನಡೆಯಲಿದೆ. ಎಲ್ಲಾ ಪಂದ್ಯಗಳು ಆ್ಯಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಫಿಡೆಲ್ ಎಡ್ವರ್ಡ್ಸ್ ಅವರು 2012ರ ನವೆಂಬರ್‌ನಲ್ಲಿ ವೆಸ್ಟ್‌ ಇಂಡೀಸ್ ತಂಡದಲ್ಲಿ ಕಡೇಯ ಬಾರಿ ಆಡಿದ್ದರು. ಅದಾಗಿ ಈಗಲೇ ಅವರು ಮತ್ತೆ ತಂಡದಲ್ಲಿ ಕಾಣಿಸಿಕೊಳ್ಳುತ್ತಿರುವುದು. ಅಂದ್ಹಾಗೆ ವಿಂಡೀಸ್ ತಂಡದಲ್ಲಿ ಕಾಣಿಸಿಕೊಂಡಿರುವ ಗೇಲ್ ಇದೇ ವರ್ಷದ ಕೊನೆಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನತ್ತವೂ ಕಣ್ಣಿಟ್ಟಿದ್ದಾರೆ. ಐಪಿಎಲ್‌ನಲ್ಲಿ ಕಿಂಗ್ಸ್‌ XI ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ತಂಡದಲ್ಲಿರುವ ಕ್ರಿಸ್ ಗೇಲ್ ಕಳೆದ ಸೀಸನ್‌ನಲ್ಲಿ ಹೀನಾಯ ಸ್ಥಿತಿಗೆ ತಲುಪಿದ್ದ ಪಂಜಾವನ್ನು ಮೇಲೆತ್ತಿದ್ದರು.

ಶ್ರೀಲಂಕಾ ಟಿ20ಐ ಸರಣಿಗೆ 14 ಮಂದಿಯ ವೆಸ್ಟ್‌ ಇಂಡೀಸ್ ತಂಡ
ಕೀರನ್ ಪೊಲಾರ್ಡ್ (ಸಿ), ನಿಕೋಲಸ್ ಪೂರನ್ (ವಿ / ಸಿ), ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೋ, ಫಿಡೆಲ್ ಎಡ್ವರ್ಡ್ಸ್, ಆಂಡ್ರೆ ಫ್ಲೆಚರ್, ಕ್ರಿಸ್ ಗೇಲ್, ಜೇಸನ್ ಹೋಲ್ಡರ್, ಅಕೀಲ್ ಹೊಸೈನ್, ಎವಿನ್ ಲೂಯಿಸ್, ಒಬೆಡ್ ಮೆಕಾಯ್, ರೋವ್ಮನ್ ಪೊವೆಲ್, ಲೆಂಡ್ಲ್ ಸಿಮನ್ಸ್ ಮತ್ತು ಕೆವಿನ್ ಸಿಂಕ್ಲೇರ್.

Story first published: Sunday, February 28, 2021, 0:35 [IST]
Other articles published on Feb 28, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+