ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ, ವಿಂಡೀಸ್ ಮನೆಗೆ

By Mahesh

ಧರ್ಮಶಾಲಾ, ಅ.17: ಕ್ರಿಕೆಟ್ ಅಭಿಮಾನಿಗಳಿಗೆ ನಿಜಕ್ಕೂ ಶಾಕ್ ತಂದಿದೆ. ವೆಸ್ಟ್ ಇಂಡೀಸ್ ತಂಡ ತನ್ನ ಪ್ರವಾಸವನ್ನು ಮೊಟಕುಗೊಳಿಸಿ ತವರಿಗೆ ಹಿಂತಿರುಗುತ್ತಿದೆ. ವೇತನ ತಾರತಮ್ಯದ ಕಾರಣ ನೀಡಿ ವೆಸ್ಟ್ ಇಂಡೀಸ್ ತಂಡ ಏಕದಿನ ಸರಣಿ ಮುಕ್ತಾಯಕ್ಕೂ ಮುನ್ನ ಹಿಂತಿರುಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.

ವೆಸ್ಟ್ ಇಂಡೀಸ್ ಆಟಗಾರರ ನಿರ್ಣಯದಿಂದ ಬಿಸಿಸಿಐಗೆ ನಿಜಕ್ಕೂ ಶಾಕ್ ಆಗಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ನಿರ್ಣಯದಿಂದಾಗಿ ವಿಂಡೀಸ್ ಆಟಗಾರರು ಪ್ರವಾಸ ಮೊಟಕುಗೊಳಿಸಿ ತಮ್ಮ ದೇಶಕ್ಕೆ ಹಿಂತಿರುಗಬೇಕಾಗಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಬಿಸಿಸಿಐ ತಲುಪಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತನ್ನ ಆಂತರಿಕ ಸಮಸ್ಯೆ ಬಗೆ ಹರಿಸಿಕೊಳ್ಳಲಾಗದೆ ಈ ರೀತಿ ನಿರ್ಣಯ ಕೈಗೊಂಡಿರುವುದು ದುರಂತ ಎಂದು ಸಂಜಯ್ ಹೇಳಿದ್ದಾರೆ.

West Indies team pulls out of India tour midway

ವೆಸ್ಟ್ ಇಂಡೀಸ್ ಆಟಗಾರರು ಮನೆಗೆ ಹೊರಟಲು ವಿಮಾನ ನಿಲ್ದಾಣದ ಕಡೆ ಮುಖ ಮಾಡಿರುವುದರಿಂದ ಶುಕ್ರವಾರ ನಡೆಯುತ್ತಿರುವ ನಾಲ್ಕನೇ ಪಂದ್ಯವೇ ಪ್ರವಾಸದ ಕೊನೆ ಪಂದ್ಯವಾಗಲಿದೆ. ಟಾಸ್ ಗೆದ್ದ ವಿಂಡೀಸ್ ನಾಯಕ ಬ್ರಾವೋ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.[ಸ್ಕೋರ್ ಕಾರ್ಡ್ ನೋಡಿ]

ಐದನೇ ಏಕದಿನ ಪಂದ್ಯ ಅಕ್ಟೋಬರ್ 20ರಂದು ಕೋಲ್ಕತ್ತಾದಲ್ಲಿ ನಡೆಯಬೇಕಿತ್ತು. ಇದಾದ ನಂತರ ಏಕೈಕ ಟಿ20 ಪಂದ್ಯ, ಒಂದು ಮೂರು ದಿನಗಳ ಪಂದ್ಯ(ಬಿಸಿಸಿಐ ಅಧ್ಯಕ್ಷರ XI ವಿರುದ್ಧ) ಹಾಗೂ ಬೆಂಗಳೂರು ಟೆಸ್ಟ್ ಸೇರಿದಂತೆ 2 ಟೆಸ್ಟ್ ಪಂದ್ಯಗಳು ನಿಗದಿಯಾಗಿತ್ತು. ಬಿಸಿಸಿಐ ಈಗ ಶ್ರೀಲಂಕಾ ತಂಡಕ್ಕೆ ಆಹ್ವಾನ ನೀಡಲು ಮುಂದಾಗಿದೆ.

ಬಿಸಿಸಿಐ ನೀಡಿರುವ ಅಧಿಕೃತ ಹೇಳಿಕೆ ಹೀಗಿದೆ:

"BCCI shocked and surprised at WICB's decision to cancel the ongoing tour of India The West Indies Cricket Board (WICB) has informed the BCCI of its decision to cancel the rest of its ongoing tour to India because of a dispute with its players, and has advised the BCCI that its players will return home immediately.

The BCCI is shocked and extremely disappointed at the decision taken by the WICB. The WICB's inability to resolve internal issues with its players and allowing the same to affect an ongoing bilateral series does not reflect well on any of those involved.

The withdrawal gives little thought to the future of the game, the players and the long standing relations between the BCCI and the WICB. The BCCI wishes to inform all its stakeholders, especially ardent fans of the Indian cricket team, that this is a unilateral decision taken by the WICB and its players, in spite of several appeals to the WICB to honour its commitment and complete the series.

The BCCI will pursue all options available to protect its rights, whilst seeking appropriate action from the ICC to ensure that its interests and those of the game at large will not suffer any damage due to such acts of indiscretion.

Sanjay Patel

Hony.Secretary BCCI"

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, October 17, 2014, 18:06 [IST]
Other articles published on Oct 17, 2014
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more